»   » 'ಕ್ರಿಶ್-4' ಚಿತ್ರದ ರಿಲೀಸ್ ದಿನಾಂಕ ಘೋಷಣೆ

'ಕ್ರಿಶ್-4' ಚಿತ್ರದ ರಿಲೀಸ್ ದಿನಾಂಕ ಘೋಷಣೆ

Posted By:
Subscribe to Filmibeat Kannada

ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಗೆ ಇಂದು (ಜನವರಿ 10) ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ನಟನ ಜನುಮದಿನದ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಹೃತಿಕ್ ರೋಷನ್ ತಂದೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಹಿಂದಿ ಚಿತ್ರರಂಗದ ಸೂಪರ್ ಹಿಟ್ ಸರಣಿ 'ಕ್ರಿಶ್' ಚಿತ್ರದ ನಾಲ್ಕನೇ ಭಾಗವನ್ನ ಅನೌನ್ಸ್ ಮಾಡಿದ್ದು, ರಿಲೀಸ್ ಡೇಟ್ ಕೂಡ ಅಂತಿಮ ಮಾಡಿದ್ದಾರೆ. 2020ರ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ 'ಕ್ರಿಶ್-4' ಸಿನಿಮಾ ತೆರೆಕಾಣಲಿದೆ ಎಂದು ಹೃತಿಕ್ ಅವರ ತಂದೆ ರಾಕೇಶ್ ರೋಷನ್ ತಿಳಿಸಿದ್ದಾರೆ.

ಹೃತಿಕ್ ನಾಯಕನಾಗಿರುವ ಈ ಚಿತ್ರದಲ್ಲಿ ನವಾಜ್ಜುದ್ದೀನ್ ಸಿದ್ದಿಕಿ ನೆಗಿಟೀವ್ ಪಾತ್ರವನ್ನ ನಿರ್ವಹಿಸಲಿದ್ದಾರೆ. ಸೂಪರ್ ಹೀರೋ ಮಾದರಿಯಲ್ಲಿ ಹೃತಿಕ್ ರೋಷನ್ ಪ್ರೇಕ್ಷಕರನ್ನ ರಂಜಿಸಲು ಮತ್ತೆ ಬರ್ತಿದ್ದು, ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದೆ.

Krrish 4 release date announce

ಇದಕ್ಕು ಮುಂಚೆ 2003 ರಲ್ಲಿ 'ಕೊಯಿ ಮಿಲ್ ಗಯಾ' ಚಿತ್ರ ಮೊದಲ ಬಾರಿಗೆ ತೆರೆಕಂಡಿತ್ತು. ತದ ನಂತರ 2006 ರಲ್ಲಿ ಈ ಚಿತ್ರದ ಮುಂದುವರೆದ ಭಾಗ 'ಕ್ರಿಶ್' ಸಿನಿಮಾ ರಿಲೀಸ್ ಆಯ್ತು. ಎರಡು ಸೂಪರ್ ಹಿಟ್ ಆದ ನಂತರ 2013 ರಲ್ಲಿ ಕ್ರಿಶ್ 3 ಸಿನಿಮಾ ಮೂಡಿ ಬಂದಿತ್ತು. ಈ ಮೂರು ಚಿತ್ರಗಳು ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದಲ್ಲದೇ, ಪ್ರೇಕ್ಷಕರಿಗೆ ಸಖತ್ ಕಿಕ್ ನೀಡಿತ್ತು. ಇದೀಗ, ನಾಲ್ಕನೇ ಭಾಗ ತಯಾರಾಗುತ್ತಿದ್ದು, ಮತ್ತೆ ಅದೇ ಜೋಶ್ ನಲ್ಲಿ ಹೃತಿಕ್ ಬರ್ತಿದ್ದಾರೆ.

English summary
Hrithik Roshan celebrates his 44th birthday today and has given a treat to all his fans in the form of Krrish 4, as his father Rakesh Roshan has announced the release date and the superhero film will hit the theatres during Christmas, 2020.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X