Don't Miss!
- Sports
Hockey World Cup 2023: ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ವಿಶ್ವಕಪ್ನಿಂದ ಹೊರ ಬಿದ್ದ ಭಾರತ
- News
ಥಣಿಸಂದ್ರದ ಅಪಾರ್ಟ್ಮೆಂಟ್ಗೆ ನೀಡಿದ್ದ ಭೂಸ್ವಾಧೀನಾನುಭವ ಪತ್ರ ಬಿಬಿಎಂಪಿ ಹಿಂಪಡೆದಿದೆ
- Finance
2 ಕೋಟಿಗೂ ಕಡಿಮೆ FD ಹಣಕ್ಕೆ ಹೆಚ್ಚು ಬಡ್ಡಿ ನೀಡುವ 5 ಬ್ಯಾಂಕ್ ಯಾವವು, ಅವುಗಳ ಬಡ್ಡಿ ದರ ಬಗ್ಗೆ ತಿಳಿಯಿರಿ
- Technology
ಐಟೆಲ್ನಿಂದ ಮತ್ತೊಂದು ಎಂಟ್ರಿ ಲೆವೆಲ್ ಫೋನ್ ಅನಾವರಣ! ಫೀಚರ್ಸ್ ಹೇಗಿದೆ?
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಂಕಲ್' ಇಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದ್ದ ಕನ್ನಡತಿ ಕುಬ್ರಾ ಸೇಠ್
ಕನ್ನಡದ ಜನಪ್ರಿಯ ನಟ, 'ಮಿಸ್ಟರ್ ನ್ಯಾಗ್ಸ್' ಖ್ಯಾತಿಯ ದಾನಿಶ್ ಸೇಠ್‌ರ ಸಹೋದರಿ ಕುಬ್ರಾ ಸೇಠ್ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ. ಇದೀಗ ಹಾಲಿವುಡ್ ವೆಬ್ ಸರಣಿಯಲ್ಲೂ ನಟಿಸಿದ್ದಾರೆ.
ಭಾರತದ ಈವರೆಗಿನ ನಂಬರ್ 1 ವೆಬ್ ಸರಣಿ ಎಂದೇ ಕರೆಯಲಾಗುವ ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ಧಿಕಿ ನಟಿಸಿರುವ 'ಸೇಕ್ರೆಡ್ ಗೇಮ್ಸ್' ಕೂಕು ಹೆಸರಿನ ಮುಖ್ಯ ಪಾತ್ರದಲ್ಲಿ ನಟಿಸಿರುವ ಕುಬ್ರಾ ಸೇಠ್ ತಮ್ಮ ನಟನಾ ಪ್ರತಿಭೆ ಪ್ರದರ್ಶಿಸಿದ್ದರು.
ಬೆಂಗಳೂರಿನವರೇ ಆಗಿರುವ ಕುಬ್ರಾ ಸೇಠ್ ಇದೀಗ ಎಳವೆಯಲ್ಲಿ ತಮ್ಮ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯದ ಕುರಿತು ಲೇಖನವೊಂದನ್ನು ಬರೆದಿದ್ದಾರೆ.
'ಓಪನ್ ಬುಕ್: ನಾಟ್ ಎ ಮೆಮೈರ್' ಹೆಸರಿನ ಪುತ್ರಕದಲ್ಲಿ ಲೇಖನ ಪ್ರಕಟಿಸಿರುವ ನಟಿ ಕುಬ್ರಾ ಸೇಠ್, ತಮ್ಮ ಕುಟುಂಬಕ್ಕೆ ಬಹಳ ಆಪ್ತವಾಗಿದ್ದ, ತಾವು ಅಂಕಲ್ ಎಂದು ಕರೆಯುತ್ತಿದ್ದ ವ್ಯಕ್ತಿಯಿಂದಲೇ ಸತತವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿಷಯವನ್ನು ಬರೆದಿದ್ದಾರೆ.
''ನಮ್ಮ ಕುಟುಂಬವನ್ನು ಆರ್ಥಿಕ ಹಿಂಜರಿತದಿಂದ ಕಾಪಾಡಿದ ವ್ಯಕ್ತಿ ನನ್ನ ಮೇಲೆ 'ಅತ್ಯಾಚಾರ' ಮಾಡಿದ. ಆದರೆ ನಾನು ಏನೊಂದು ಮಾತನಾಡದೆ ಸುಮ್ಮನೆ ಇರಬೇಕಾಯಿತು'' ಎಂದು ಲೇಖನದಲ್ಲಿ ಬರೆದಿದ್ದಾರೆ ಕುಬ್ರಾ ಸೇಠ್.

'ಅಂಕಲ್' ಇಂದ ಲೈಂಗಿಕ ದೌರ್ಜನ್ಯ ಅನುಭವಿಸಿದ್ದ ಕುಬ್ರಾ
ನಾವು, ನಮ್ಮ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆವು. ಆಗ ನಾವು ಹೋಗುತ್ತಿದ್ದ ಬೆಂಗಳೂರಿನ ರೆಸ್ಟೊರೆಂಟ್ ಒಂದರ ಮಾಲೀಕ ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದ ಆತ ನಮಗೆ ಆರ್ಥಿಕವಾಗಿ ಸಹಾಯ ಮಾಡಿದ. ಸಹಾಯ ಮಾಡುತ್ತಿದ್ದಂತೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಆರಂಭಿಸಿದ. ನನ್ನನ್ನು 'ಅಂಕಲ್' ಎಂದು ಕರೆಯಬೇಡ ಎಂದು ಸಹ ಒತ್ತಾಯ ಮಾಡುತ್ತಿದ್ದ'' ಎಂದು ನೆನಪಿಸಿಕೊಂಡಿದ್ದಾರೆ ಕುಬ್ರಾ ಸೇಠ್.

ನನ್ನ ತೊಡೆ ಸವರುತ್ತಿದ್ದ: ಕುಬ್ರಾ
''ಕುಟುಂಬಕ್ಕೆ ಹಣ ಸಹಾಯ ದೊರೆತಾದ ನನ್ನ ತಾಯಿ ನಿಟ್ಟುಸಿರು ಬಿಟ್ಟು ನೆಮ್ಮದಿಯಾದರು. ನನಗೆ ಖುಷಿಯಾಗಿತ್ತು. ಆದರೆ ನನ್ನನ್ನು ಬೇರೊಂದು ಸಮಸ್ಯೆ ಆವರಿಸಿಕೊಂಡಿತ್ತು. ಸಹಾಯ ಮಾಡಿದ ಕೂಡಲೇ ಕಾರನ ಹಿಂದೆ ಸೀಟಿನಲ್ಲಿ ಕೂತಿದ್ದ ನನ್ನತ್ತ ಕೈ ಚಾಚಿ ನನ್ನ ತೊಡೆ ಸವರಿದ್ದ ಆ 'ಅಂಕಲ್''' ಅದು ನನಗೆ ಬಹಳ ಮುಜುಗರ ತಂದಿತ್ತು, ಆದರೆ ನಾನು ಸುಮ್ಮನಿದ್ದೆ'' ಎಂದಿದ್ದಾರೆ ಕುಬ್ರಾ ಸೇಠ್.

ಇದು ನನ್ನ ಕೆಟ್ಟ ರಹಸ್ಯ: ಕುಬ್ರಾ ಸೇಠ್
ಲೇಖನದಲ್ಲಿ ಆತನನ್ನು 'ಎಕ್ಸ್' ಎಂದು ಕರೆದಿರುವ ಕುಬ್ರಾ, ಆತ ತಮ್ಮ ಮೇಲೆ ಮೊದಲ ಬಾರಿಗೆ 'ಅತ್ಯಾಚಾರ' ನಡೆಸಿದ ಸಂದರ್ಭ ವಿವರಿಸಿದ್ದು, 'ಎಕ್ಸ್' ನನ್ನನ್ನು ತನ್ನ ಹೋಟೆಲ್‌ಗೆ ಕರೆದೊಯ್ದ. ಅಲ್ಲಿ ನನ್ನ ತುಟಿಗೆ ಹಲವು ಬಾರಿ ಮುತ್ತು ಕೊಟ್ಟ. ನನಗೆ ತೀವ್ರ ಆಘಾತವಾಗಿತ್ತು. ಆದರೆ ನನಗೆ ಕಿರುಚಲು ಸಹ ಧೈರ್ಯ ಬರಲಿಲ್ಲ. ಓಡಲು ಸಹ ಧೈರ್ಯ ಬರಲಿಲ್ಲ. 'ನಿನಗೆ ಇದು ಬೇಕಿದೆ. ಹೀಗೆ ಮಾಡಿದರೆ ನಿನಗೆ ಒಳ್ಳೆಯದಾಗುತ್ತದೆ ಎಂದು ಆತ ನನ್ನನ್ನು ಒಪ್ಪಿಸಲು ಪ್ರಯತ್ನಿಸಿದ. ಪದೇ ಪದೇ ಅದನ್ನೇ ಹೇಳುತ್ತಿದ್ದ. ಕೊನೆಗೆ ಆತ ತನ್ನ ಪ್ಯಾಂಟು ಕಳಚಿದ. ಆ ನಂತರ ಏನು ನಡೆಯಬಾರದಿತ್ತೊ ಅದು ನಡೆಯಿತು. ನಾನು ಅಂದು ನನ್ನ ಕನ್ಯತ್ವ ಕಳೆದುಕೊಂಡೆ. ಇದು ನನ್ನ ಕೆಟ್ಟ ರಹಸ್ಯ'' ಎಂದಿದ್ದಾರೆ ಕುಬ್ರಾ ಸೇಠ್.

ಅವನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ: ಕುಬ್ರಾ
''ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆತನಿಗೆ ಅದಾಗಲೆ ಮದುವೆಯಾಗಿ ಒಂದು ಮಗು ಸಹ ಇತ್ತು. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೇಲೆ ಇನ್ನೊಂದು ಮಗು ಮಾಡಿಕೊಂಡ. ಆತ ದಿನೇ ದಿನೇ ವೈರಸ್‌ನಂತೆ ನಮ್ಮ ಮನೆಯಲ್ಲಿ ಹರಡುತ್ತಿದ್ದ. ನಾನು ಆತನನ್ನು ತಡೆದಿದ್ದರೆ, ನನ್ನ ಕುಟುಂಬಕ್ಕೆ ಸಿಗುತ್ತಿದ್ದ ನೆರವು ನಿಂತು ಹೋಗುತ್ತಿತ್ತು'' ಎಂದು ನೆನಪು ಮಾಡಿಕೊಂಡಿದ್ದಾರೆ ಕುಬ್ರಾ.

ಅಮ್ಮ ಗಮನಿಸಿದ್ದಳು ಆದರೆ ಏನೂ ಹೇಳಲಿಲ್ಲ: ಕುಬ್ರಾ
''ನನ್ನ ಬಗ್ಗೆ 'ಎಕ್ಸ್'ನ ವರ್ತನೆಯನ್ನು ಅಮ್ಮ ಗಮನಿಸಿದ್ದಳು ಆದರೆ ಆಕೆ ಅದನ್ನೆಲ್ಲ 'ಸಾಮಾನ್ಯೀಕರಿಸಿ' ಮಾತನಾಡುತ್ತಿದ್ದಳು. ನಾನು 'ಎಕ್ಸ್'ನೊಂದಿಗೆ ಜಗಳವಾಡಿದಾಗ ಆಕೆ ನನ್ನನ್ನು ಗದರುತ್ತಿದ್ದಳು. ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ ಆದರೆ ಯಾರ ಬಳಿಯೂ ಹೇಳಲು ಸಹ ಆಗಲಿಲ್ಲ. ಯಾರೂ ಕೇಳಲು ಇಲ್ಲ. ಆದರೆ ಇದರಿಂದ ನನಗೆ ಬಿಡುಗಡೆ ಬೇಕಿತ್ತು, ಹಾಗಾಗಿ ಶಾರ್ಜಾಗೆ ಹೋಗುವ ಅವಕಾಶ ಸಿಕ್ಕ ಕೂಡಲೇ ಆ ಅವಕಾಶವನ್ನು ನಾನು ಬಾಚಿಕೊಂಡೆ. ಇದರಿಂದ ಬಿಡುಗಡೆ ಪಡೆದು ಶಾರ್ಜಾಗೆ ಹೋದೆ'' ಎಂದಿದ್ದಾರೆ.