twitter
    For Quick Alerts
    ALLOW NOTIFICATIONS  
    For Daily Alerts

    ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್‌ಗೆ ಇನ್ನೂ ಐಸಿಯುನಲ್ಲಿ ಚಿಕಿತ್ಸೆ: ಹೇಗಿದೆ ಆರೋಗ್ಯ ಸ್ಥಿತಿ?

    |

    ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಜನವರಿ 8ರಂದು ಕೊರೊನಾ ಸೋಂಕು ತಗುಲಿರುವುದು ಖಾತ್ರಿಯಾಗಿತ್ತು. ಬಳಿಕ ಭಾರತ ರತ್ನ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಆಸ್ಪತ್ರೆನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಇಲ್ಲಿಂದ ಲತಾ ಮಂಗೇಶ್ಕರ್ ಅವರಿಗೆ ತ್ರೀವಾ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 92 ವರ್ಷದ ಗಾಯಕಿಗೆ ಕೊರೊನಾ ಸೋಂಕು ಧೃಡಪಟ್ಟಿರುವ ಸಂಗತಿ ಬಾಲವುಡ್‌ ಮಂದಿಯಲ್ಲಿ ಆತಂಕ ಹೆಚ್ಚಿಸಿದೆ.

    Recommended Video

    ಲತಾ ಮಂಗೇಶ್ಕರ್ ಬಗ್ಗೆ ವದಂತಿ ಹರಡದಂತೆ ಮನವಿ | Filmibeat Kannada

    ಲತಾ ಮಂಗೇಶ್ಕರ್‌ ಆಸ್ಪತ್ರೆ ದಾಖಲಾಗಿದ್ದಲ್ಲಿಂದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ರೀಚ್ ಕ್ಯಾಂಡಿ ಆಸ್ಪತ್ರೆ ಹಾಗೂ ಲತಾ ಮಂಗೇಶ್ಕರ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಪ್ರತಿತ್ ಸಂದನಿ ಇನ್ನುಕೆಲವು ದಿನ ಗಾಯಕಿ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ವೈದ್ಯರ ಈ ಹೇಳಿಕೆ ಬಾಲಿವುಡ್‌ ಮಂದಿಯ ಆತಂಕಕ್ಕೆ ಕಾರಣವಾಗಿದ್ದು, ಬಹುಬೇಗನೇ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

    ಲತಾ ಮಂಗೇಶ್ಕರ್‌ಗೆ ಚಿಕಿತ್ಸೆ ಮುಂದುವರಿಕೆ

    ಲತಾ ಮಂಗೇಶ್ಕರ್‌ಗೆ ಚಿಕಿತ್ಸೆ ಮುಂದುವರಿಕೆ

    ಲತಾ ಮಂಗೇಶ್ಕರ್ ಕಳೆದ ಒಂದು ವಾರದಿಂದ ಐಸಿಯುನಲ್ಲಿ ಚಿಕಿತ್ಸೆ ಪಡುತ್ತಿದ್ದಾರೆ. ಅವರನ್ನು ವೈದ್ಯರ ತಂಡ ನಿಗಾವಹಿಸಿ ಪರೀಕ್ಷಿಸುತ್ತಿದೆ. ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಪ್ರತಿತ್ ಸಂದನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. " ಲತಾ ಮಂಗೇಶ್ಕರ್ ಅವರಿಗೆ ಐಸಿಯುನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದೇವೆ. ಇನ್ನು ಕೆಲವು ದಿನಗಳು ಆಸ್ಪತ್ರೆಯಲ್ಲಿಯೇ ಇರಬೇಕಾಗಬಹುದು ಎಂದು" ವೈದ್ಯ ಪ್ರತಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    10-12 ದಿನ ಐಸಿಯುನಲ್ಲಿ ಚಿಕಿತ್ಸೆ

    10-12 ದಿನ ಐಸಿಯುನಲ್ಲಿ ಚಿಕಿತ್ಸೆ

    ಆಸ್ಪತ್ರೆ ಮೂಲಗಳ ಪ್ರಕಾರ, ಲತಾ ಮಂಗೇಶ್ಕರ್ ಅವರಿಗೆ ವಯಸ್ಸಾಗಿರುವುದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ. ಹೀಗಾಗಿ 10 ರಿಂದ 12 ದಿನಗಳ ಕಾಲ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರೆಯುವ ಸಾಧ್ಯತೆ ಇದ್ದು, ಯಾವಾಗ ಗುಣ ಮುಖರಾಗಿ ಆಸ್ಪತ್ರೆಯಿಂದ ಹೊರಬರುತ್ತಾರೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲವೆಂದು ಆಸ್ಪತ್ರೆ ಮೂಲಗಳು ತಿಳಿಸಿರುವುದಾಗಿ, ರಾಷ್ಟ್ರ ಮಾಧ್ಯಮದಲ್ಲಿ ವರದಿ ಮಾಡಲಾಗಿದೆ.

    ಜನರಿಗೆ ಆರೋಗ್ಯದ ಬಗ್ಗೆ ತಿಳಿಸಲು ಇಷ್ಟವಿಲ್ಲ

    ಜನರಿಗೆ ಆರೋಗ್ಯದ ಬಗ್ಗೆ ತಿಳಿಸಲು ಇಷ್ಟವಿಲ್ಲ

    ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಮಾಹಿತಿಯನ್ನು ನೀಡುತ್ತಿಲ್ಲ. ಇನ್ನೂ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರೆಯುತ್ತದೆ ಎಂದಷ್ಟೇ ಹೇಳುತ್ತಿದ್ದಾರೆ. " ಲತಾ ಮಂಗೇಶ್ಕರ್ ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಇಷ್ಟವಿಲ್ಲ. ಹೀಗಾಗಿ ಅವರಿಗೆ ಮಾಹಿತಿ ನೀಡಲು ಬಯಸುತ್ತಿಲ್ಲ. ಹೀಗಾಗಿ ಯಾರಿಗೂ ಆಸ್ಪತ್ರೆಯೊಳಗೆ ಅವರನ್ನು ನೋಡಲು ಬಿಡುವುದಿಲ್ಲ." ಎಂದು ವೈದ್ಯ ಪ್ರತಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    'ಭಾರತದ ನೈಟಿಂಗೇಲ್' ಲತಾ ಮಂಗೇಶ್ಕರ್

    'ಭಾರತದ ನೈಟಿಂಗೇಲ್' ಲತಾ ಮಂಗೇಶ್ಕರ್

    ಏಳು ದಶಕಗಳ ಕಾಲ ಸಿನಿಮಾದಲ್ಲಿ ಹಾಡಿರುವ ಲತಾ ಮಂಗೇಶ್ಕರ್ ವೃತ್ತಿ ಬದುಕೇ ಅದ್ಬುತ. ಸುಮಾರು 30 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಗಾಯಕಿ ಲತಾ ಮಂಗೇಶ್ಕರ್. ಇವರ ಧ್ವನಿಗೆ ಮರುಳಾಗದೆ ಇರುವವರೇ ಇಲ್ಲ. ಮೂರು ರಾಷ್ಟ್ರ ಪ್ರಶಸ್ತಿ, ದಾದಾ ಸಾಹೇಬ್ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ವಿಭೂಷಣ, ಭಾರತ ರತ್ನ ಪ್ರಶಸ್ತಿಗಳು ಲತಾ ಮಂಗೇಶ್ಕರ್ ಮುಡಿಗೇರಿದೆ. ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಲತಾ ಮಂಗೇಶ್ಕರ್ ಹಾಡಿಗಳು ಇಂದಿನ ಪೀಳಿಗೆಯ ಯುವಕರೂ ಗುನುಗುತ್ತಿದ್ದಾರೆ.

    English summary
    Legendary singer Lata Mangeshkar was admitted to Mumbai’s Breach Candy hospital. She was diagnosed with the Covid is currently undergoing treatment at the intensive care unit.
    Monday, January 17, 2022, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X