For Quick Alerts
  ALLOW NOTIFICATIONS  
  For Daily Alerts

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?

  By Harshitha
  |

  ಸಂಬಂಧಿಯ ಮದುವೆ ಮುಗಿಸಿಕೊಂಡು ಜೋಪಾನವಾಗಿ ಭಾರತಕ್ಕೆ ವಾಪಸ್ ಬಂದಿದ್ದರೆ, ಇಷ್ಟೊತ್ತಿಗೆ ನಟಿ ಶ್ರೀದೇವಿ ಎದೆಬಡಿತ ಜೋರಾಗಿರುತ್ತಿತ್ತು. ಮಗಳು ಜಾಹ್ನವಿಯನ್ನ ಯಾವಾಗ ಬೆಳ್ಳಿತೆರೆ ಮೇಲೆ ನೋಡ್ತೀನೋ ಅಂತ ಶ್ರೀದೇವಿ ಬಕಪಕ್ಷಿಯಂತೆ ಕಾಯುತ್ತಾ ಕೂರುತ್ತಿದ್ದರು.

  ಒಂದ್ಕಡೆ ಪುತ್ರಿಯನ್ನ ದೊಡ್ಡ ಪರದೆ ಮೇಲೆ ನೋಡುವ ಸಂತಸ, ಇನ್ನೊಂದು ಕಡೆ ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಚಡಪಡಿಕೆ ಅವರಿಗೆ ಇರ್ತಿತ್ತು. ಆದ್ರೆ, ದುರಾದೃಷ್ಟವಶಾತ್ ಇದ್ಯಾವುದೂ ಸಾಧ್ಯವಾಗಲಿಲ್ಲ. ನಟಿ ಶ್ರೀದೇವಿ ಇಂದು ನಮ್ಮೊಂದಿಗಿಲ್ಲ. ಪುತ್ರಿಯ ಚೊಚ್ಚಲ ಸಿನಿಮಾ 'ಧಡಕ್' ನೋಡುವ ಭಾಗ್ಯ ಶ್ರೀದೇವಿಗೆ ಸಿಗಲಿಲ್ಲ.

  ಇದೇ ತಿಂಗಳ 20 ರಂದು 'ಧಡಕ್' ಸಿನಿಮಾ ದೇಶದಾದ್ಯಂತ ಬಿಡುಗಡೆ ಆಗಲಿದೆ. ಮರಾಠಿಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ರೀಮೇಕ್ ಆಗಿರುವ 'ಧಡಕ್' ಇನ್ನೂ ಮೂರು ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ.

  'ಧಡಕ್' ಚಿತ್ರದ ನಾಯಕಿ ಜಾಹ್ನವಿ ಕಪೂರ್... ಶ್ರೀದೇವಿ-ಬೋನಿ ಕಪೂರ್ ಪುತ್ರಿ ಅನ್ನೋದು ನಿಮಗೆಲ್ಲಾ ಗೊತ್ತಿದೆ. ಆದ್ರೆ, 'ಧಡಕ್'ಗೂ ಮುನ್ನ ಜಾಹ್ನವಿಗೆ ದಕ್ಷಿಣ ಭಾರತದಿಂದ ಸುವರ್ಣಾವಕಾಶ ಸಿಕ್ಕಿತ್ತು ಅನ್ನೋದು ನಿಮಗೆ ಗೊತ್ತಾ.? ಗೊತ್ತಿಲ್ಲ ಅಂದ್ರೆ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ತೆಲುಗು ಚಿತ್ರವನ್ನ ರಿಜೆಕ್ಟ್ ಮಾಡಿದ್ದ ಜಾಹ್ನವಿ ಕಪೂರ್

  ತೆಲುಗು ಚಿತ್ರವನ್ನ ರಿಜೆಕ್ಟ್ ಮಾಡಿದ್ದ ಜಾಹ್ನವಿ ಕಪೂರ್

  'ಧಡಕ್' ಚಿತ್ರಕ್ಕೂ ಮುನ್ನ ಟಾಲಿವುಡ್ ನಿಂದ ಜಾಹ್ನವಿ ಕಪೂರ್ ಗೆ ಬುಲಾವ್ ಬಂದಿತ್ತು. ಮಹೇಶ್ ಬಾಬು ಅಭಿನಯದ ಎ.ಆರ್.ಮುರುಗದಾಸ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಆಫರ್ ಜಾಹ್ನವಿ ಕಪೂರ್ ಪಾಲಾಗಿತ್ತು. ಆದ್ರೆ, ನಟನೆಯಲ್ಲಿ ಇನ್ನೂ ತರಬೇತಿ ಬೇಕಿತ್ತು ಎಂಬ ಕಾರಣಕ್ಕೆ ಅಂದು ಸಿಕ್ಕ ಅವಕಾಶವನ್ನ ಜಾಹ್ನವಿ ಕೈಬಿಟ್ಟರು.

  ಅಮ್ಮನ ನೆನಪಲ್ಲಿ ತಾಯಂದಿರ ದಿನ ಕಳೆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ಅಮ್ಮನ ನೆನಪಲ್ಲಿ ತಾಯಂದಿರ ದಿನ ಕಳೆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

  ಜಾಹ್ನವಿ ಕಪೂರ್ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ.?

  ಜಾಹ್ನವಿ ಕಪೂರ್ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ.?

  ಇನ್ಸ್ಟಾಗ್ರಾಮ್ ನಲ್ಲಿ ನೀವು ಜಾಹ್ನವಿ ಕಪೂರ್ ರನ್ನ ಫಾಲೋ ಮಾಡ್ತಿದ್ರೆ, ನಿಮಗೆ ಆಕೆಯ ಗೆಳೆಯನ ಪರಿಚಯ ಇದ್ದೇ ಇರುತ್ತೆ. ಜಾಹ್ನವಿ ಕಪೂರ್ ಬೆಸ್ಟ್ ಫ್ರೆಂಡ್ ಹೆಸರು ಅಕ್ಷತ್ ರಂಜನ್. ಈತನ ಜೊತೆಗೆ ಇರುವ ಫೋಟೋಗಳನ್ನೆಲ್ಲ ಜಾಹ್ನವಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ.

  ಜಾಹ್ನವಿ-ಖುಷಿ ಕಪೂರ್ ಬಗ್ಗೆ ಕೆಟ್ಟ ಬೈಗುಳ: ನೆಟ್ಟಿಗರಿಗೆ ಪಾಠ ಕಲಿಸಿದ ಅನ್ಷುಲಾ!ಜಾಹ್ನವಿ-ಖುಷಿ ಕಪೂರ್ ಬಗ್ಗೆ ಕೆಟ್ಟ ಬೈಗುಳ: ನೆಟ್ಟಿಗರಿಗೆ ಪಾಠ ಕಲಿಸಿದ ಅನ್ಷುಲಾ!

  ಪದವಿ ಪಡೆದಿರುವ ಜಾಹ್ನವಿ

  ಪದವಿ ಪಡೆದಿರುವ ಜಾಹ್ನವಿ

  ಬಾಲಿವುಡ್ ಗೆ ಪದಾರ್ಪಣೆ ಮಾಡುವ ಮುನ್ನ ಓದು ಮುಗಿಸಿ ಪದವಿ ಪಡೆದಿದ್ದಾರೆ ಜಾಹ್ನವಿ ಕಪೂರ್. ಅಲ್ಲದೇ, ಯು.ಎಸ್.ಎ ನಲ್ಲಿರುವ ದಿ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ.

  ನಟಿಯಾಗುವ ಬಯಕೆ

  ನಟಿಯಾಗುವ ಬಯಕೆ

  ಚಿಕ್ಕವಯಸ್ಸಿನಿಂದಲೂ ಜಾಹ್ನವಿ ಕಪೂರ್ ಗೆ ನಟಿಯಾಗುವ ಇಚ್ಛೆ ಇತ್ತು. ಅಮ್ಮನಂತೆ ತಾನೂ ಬೆಳ್ಳಿತೆರೆ ಮೇಲೆ ಮಿಂಚಬೇಕು ಎಂಬ ಬಯಕೆ ಚಿಗುರೊಡೆದಿತ್ತು.

  ಟ್ರಾವೆಲ್ಲಿಂಗ್ ಅಂದ್ರೆ ಪ್ರಾಣ

  ಟ್ರಾವೆಲ್ಲಿಂಗ್ ಅಂದ್ರೆ ಪ್ರಾಣ

  ಜಾಹ್ನವಿ ಕಪೂರ್ ಗೆ ಟ್ರಾವೆಲ್ಲಿಂಗ್ ಅಂದ್ರೆ ಪ್ರಾಣ. ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುವುದು ಜಾಹ್ನವಿ ಹವ್ಯಾಸ.

  ಜಾಹ್ನವಿಗೆ ಸಿಗುತ್ತಾ ಜೈಕಾರ.?

  ಜಾಹ್ನವಿಗೆ ಸಿಗುತ್ತಾ ಜೈಕಾರ.?

  ಇದೇ ತಿಂಗಳ 20 ರಂದು ಬಾಲಿವುಡ್ ಬೆಳ್ಳಿತೆರೆ ಮೇಲೆ ಜಾಹ್ನವಿ ಮಿನುಗಲಿದ್ದಾರೆ. ಶ್ರೀದೇವಿ ಅಭಿನಯ ನೋಡಿ ನೀವೆಲ್ಲ ಶಿಳ್ಳೆ ಹೊಡೆದಂತೆ ಜಾಹ್ನವಿಗೂ ಜೈಕಾರ ಹಾಕ್ತೀರಾ.?

  English summary
  Lesser Known facts about Sridevi daughter Janhvi Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X