For Quick Alerts
  ALLOW NOTIFICATIONS  
  For Daily Alerts

  ಈ ವರ್ಷ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಬಳಿಕೆಯಾದ ಹ್ಯಾಂಡಲ್ ಈ ನಟಿಯದ್ದು

  |

  ಟ್ವಿಟ್ಟರ್ ಇಂಡಿಯಾ ಈ ವರ್ಷ ಅತಿ ಹೆಚ್ಚು ಬಳಿಕೆ ಮಾಡಿದ ಹ್ಯಾಂಡಲ್ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ಟಾಪ್ 10 ಮಹಿಳಾ ಸೆಲೆಬ್ರಿಟಿಗಳ ಹೆಸರು ಹೀಗಿದೆ.

  ನಟಿ ಸೋನಾಕ್ಷಿ ಸಿನ್ಹಾ ನಂಬರ್ 1 ಸ್ಥಾನದಲ್ಲಿ ಇದ್ದಾರೆ. 'ದಬಾಂಗ್ 3' ಸಿನಿಮಾದ ನಾಯಕಿಯ ಹ್ಯಾಂಡಲ್ ಅನ್ನು ಈ ವರ್ಷ ಅತಿ ಹೆಚ್ಚು ಬಳಿಕೆ ಮಾಡಲಾಗಿದೆ. ಈ ವರ್ಷ ಆರು ಸಿನಿಮಾಗಳಲ್ಲಿ ಸೋನಾಕ್ಷಿ ನಟಿಸಿದ್ದಾರೆ. ಅಂದಹಾಗೆ, ಸೋನಾಕ್ಷಿ ಟ್ವಿಟ್ಟರ್ ನಲ್ಲಿ 14.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

  ಉಳಿದಂತೆ, ನಂಬರ್ 2 ರಲ್ಲಿ ಅನುಷ್ಕಾ ಶರ್ಮಾ, 3ರಲ್ಲಿ ಲತಾ ಮಂಗೇಶ್ಕರ್, 4ರಲ್ಲಿ ಅರ್ಚನಾ ಕಲ್ಪತಿ, 5 ಪ್ರಿಯಾಂಕಾ ಚೋಪ್ರಾ, 6 ಆಲಿಯಾ ಭಟ್, 7 ಕಾಜಲ್ ಅಗರ್ವಾಲ್, 8 ಸನ್ನಿ ಲಿಯೋನ್, 9 ಮಾಧುರಿ ದೀಕ್ಷಿತ್, 10 ರುಕುಲ್ ಪ್ರೀತ್ ಸಿಂಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

  'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!

  ಸೌತ್ ನಟಿಯರ ಪೈಕಿ ಕಾಜಲ್ ಅಗರ್ವಾಲ್ ಹಾಗೂ ರಕುಲ್ ಪ್ರೀತ್ ಸಿಂಗ್ ಮಾತ್ರ ಟ್ವಿಟ್ಟರ್ ನ ಈ ಪಟ್ಟಿಯಲ್ಲಿ ಇದ್ದಾರೆ. ಇದರ ಜೊತೆಗೆ 'ಬಿಗಿಲ್' ಸಿನಿಮಾದ ಕಾರ್ಯಕಾರಿ ನಿರ್ಮಾಪಕಿ ಅರ್ಚನಾ ಕಲ್ಪತಿ ಹೆಸರು ಟಾಪ್ 4 ನಲ್ಲಿ ಬಂತು ಅಚ್ಚರಿ ಮೂಡಿಸಿದೆ. ರಕುಲ್ ಈ ವರ್ಷ ಬರೋಬ್ಬರಿ ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಒಂದು ಸಿನಿಮಾ ಬಿಡುಗಡೆ ಆಗಬೇಕಾಗಿದೆ.

  English summary
  List of top entertainment twitter handles in india female 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X