For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ಎಫೆಕ್ಟ್: ಬಾಲಿವುಡ್‌ಗೆ ಎಷ್ಟು ಕೋಟಿ ನಷ್ಟ? ಇಲ್ಲಿದೆ ಲೆಕ್ಕಾಚಾರ!

  |

  ಮಾರ್ಚ್ ತಿಂಗಳಿಂದ ಲಾಕ್‌ಡೌನ್ ಘೋಷಣೆ ಆಯಿತು. ಸುಮಾರು ಆರೇಳು ತಿಂಗಳು ಕಾಲ ಚಿತ್ರರಂಗ ಸಂಪೂರ್ಣವಾಗಿ ಸ್ತಬ್ದವಾಯಿತು. ಚಿತ್ರಮಂದಿರಗಳು ಮುಚ್ಚಿದ್ದವು, ಚಿತ್ರೀಕರಣ ನಿಂತಿದ್ದವು. ಅಕ್ಟೋಬರ್ 15 ರಿಂದ ಥಿಯೇಟರ್ ತೆರೆಯಲು ಅನುಮತಿ ಸಿಕ್ಕಿದ್ದರೂ ಪ್ರೇಕ್ಷಕರು ಧೈರ್ಯ ಮಾಡುತ್ತಿಲ್ಲ.

  ಅದರಲ್ಲೂ ಬಾಲಿವುಡ್ ಎಂಬ ಬಿಗ್ ಇಂಡಸ್ಟ್ರಿಗೆ ಭಾರಿ ನಷ್ಟ ಆಗಿದೆ ಎಂಬ ಲೆಕ್ಕಾಚಾರ ನಡೆದಿದೆ. ಜಗತ್ತಿನಾದ್ಯಂತ ಮಾರ್ಕೆಟ್ ಹೊಂದಿರುವ ಬಿ-ಟೌನ್ ಈ ವರ್ಷ ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ ಎಂದು ಹೇಳಲಾಗ್ತಿದೆ. ಹಾಗಾದ್ರೆ, 2020ರಲ್ಲಿ ಹಿಂದಿ ಚಿತ್ರರಂಗಕ್ಕೆ ಎಷ್ಟು ಕೋಟಿ ನಷ್ಟ ಆಗಿದೆ? ಮುಂದೆ ಓದಿ...

  ದೊಡ್ಡ ಚಿತ್ರಗಳ ಬಿಡುಗಡೆ ಮುಂದೂಡಿಕೆ

  ದೊಡ್ಡ ಚಿತ್ರಗಳ ಬಿಡುಗಡೆ ಮುಂದೂಡಿಕೆ

  ಮಾರ್ಚ್ ತಿಂಗಳಿಂದ ರಿಲೀಸ್ ಆಗಬೇಕಿದ್ದ ಚಿತ್ರಗಳು ಮುಂದೂಡಿಕೆಯಾಗಿದ್ದರಿಂದ ಬಾಕ್ಸ್ ಆಫೀಸ್‌ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ. ರಣ್ವೀರ್ ಸಿಂಗ್ ನಟನೆಯ '83' ಸಿನಿಮಾ ಹಾಗೂ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಚಿತ್ರಗಳು ಮುಂದಕ್ಕೆ ಹೋಗಿವೆ.

  'ಓಂ' ಸಿನಿಮಾದಲ್ಲಿ ಸುಶಾಂತ್ ಸಿಂಗ್ 'ದಿಲ್ ಬೇಚಾರ' ನಾಯಕಿ ಸಂಜನಾ ಸಂಘಿ

  3500 ಕೋಟಿ ನಷ್ಟ!

  3500 ಕೋಟಿ ನಷ್ಟ!

  Koimoi ವೆಬ್‌ಸೈಟ್‌ ವರದಿ ಮಾಡಿರುವ ಪ್ರಕಾರ, 2020ನೇ ವರ್ಷಾಂತ್ಯಕ್ಕೆ ಬಾಲಿವುಡ್‌ನಲ್ಲಿ 3000 ರಿಂದ 3500 ಕೋಟಿ ರೂಪಾಯಿ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.

  ಕೆಲವೇ ಚಿತ್ರಗಳು ದುಡ್ಡು ಮಾಡಿದ್ವು

  ಕೆಲವೇ ಚಿತ್ರಗಳು ದುಡ್ಡು ಮಾಡಿದ್ವು

  ಜನವರಿಯಿಂದ ಮಾರ್ಚ್ ಅರ್ಧ ತಿಂಗಳವರೆಗೂ ಸುಮಾರು ಹದಿನೈದು ಪ್ರಮುಖ ಚಿತ್ರಗಳು ಬಿಡುಗಡೆಯಾಗಿದ್ದವು. ಅದರಲ್ಲಿ ಕೇವಲ ಐದಾರು ಚಿತ್ರಗಳು ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಬಿಸಿನೆಸ್ ಮಾಡಿವೆ. ತಾನ್ಹಾಜಿ, ಭಾಗಿ 3, ಸ್ಟ್ರೀಟ್ ಡ್ಯಾನ್ಸರ್, ಶುಭ ಮಂಗಲ್ ಝ್ಯಾದಾ ಸಾವಧಾನ್, ಮಲಾಂಗ್ ಸಿನಿಮಾ ಮಾತ್ರ ಗಮನಾರ್ಹ ಪ್ರದರ್ಶನ ಕಂಡಿತ್ತು. ತಪ್ಪಾಡ್, ಚಪಾಕ್, ಭೂತ್ ದಿ ಹಂಟೆಡ್ ಶಿಪ್, ಜವಾನಿ ಜಾನೇಮನ್ ಅಂತಹ ಸಿನಿಮಾಗಳು ಉತ್ತಮ ಗಳಿಕೆ ಕಂಡಿಲ್ಲ.

  ಪ್ಲಾಸ್ಟಿಕ್, ಪಿಪಿಇ ಕಿಟ್ ಎಸೆದು ಪರಿಸರ ಹಾಳುಮಾಡಿದ ಕರಣ್ ಧರ್ಮ ಸಂಸ್ಥೆ: ಕಂಗನಾ ಕಿಡಿ

  K Kalyan ಜೀವನದಲ್ಲಿ ಕಲಹ ಎಬ್ಬಿಸಿದ್ದ Ganga Kulkarni ಆತ್ಮಹತ್ಯೆ | Filmibeat Kannada
  ಸ್ಟಾರ್ಸ್ ಚಿತ್ರಗಳು ಮುಂದೂಡಿಕೆ

  ಸ್ಟಾರ್ಸ್ ಚಿತ್ರಗಳು ಮುಂದೂಡಿಕೆ

  ಈ ವರ್ಷದ ಬಾಕ್ಸ್ ಆಫೀಸ್‌ನಲ್ಲಿ ಭಾರಿ ನಿರೀಕ್ಷೆಯಿದ್ದ ಹುಟ್ಟಿಸಿದ್ದ ಸೂರ್ಯವಂಶಿ, ಲಾಲ್ ಸಿಂಗ್ ಚಡ್ಡಾ, ರಾಧೆ, ಬ್ರಹ್ಮಾಸ್ತ್ರ, ಸತ್ಯಮೇವ ಜಯತೆ-2 ಸೇರಿದಂತೆ ಹಲವು ಚಿತ್ರಗಳು 2021ಕ್ಕೆ ಮುಂದೂಡಲಾಗಿದೆ, ಆದರೆ, ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಕೂಲಿ ನಂ 1 ಮತ್ತು ಲಕ್ಷ್ಮಿ ಬಾಂಬ್ ಸಿನಿಮಾಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ.

  English summary
  Lockdown effect: Bollywood box office trade master estimated to have 3500 crore losses by end of the 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X