For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಭಟ್ ವಿರುದ್ಧ ನಟಿಯಿಂದ ಕಿರುಕುಳ ಆರೋಪ: ಪ್ರಕರಣಕ್ಕೆ ಟ್ವಿಸ್ಟ್‌

  |

  ಬಾಲಿವುಡ್‌ ನ ಖ್ಯಾತ ನಿರ್ದೇಶಕ ಮಹೇಶ್ ಭಟ್ ವಿರುದ್ಧ ಸತತ ಆರೋಪಗಳು ಕೇಳಿಬರುತ್ತಿವೆ. ಸುಶಾಂತ್ ಸಿಂಗ್ ಸಾವು ಆದಾಗಿನಿಂದಲೂ ಅವರು ಸುದ್ದಿಯಲ್ಲಿದ್ದಾರೆ.

  ಮಹೇಶ್ ಭಟ್ ಸ್ವಜನಪಕ್ಷಪಾತದ ಬಗ್ಗೆ ಆರಂಭದಲ್ಲಿ ಚರ್ಚೆಯಾಯಿತು. ಮಹೇಶ್ ಭಟ್ ಕಾರಣದಿಂದಲೇ ರಿಯಾ ಚಕ್ರವರ್ತಿ, ಸುಶಾಂತ್ ಅನ್ನು ತೊರೆದಳು ಎಂಬುದು ನಂತರ ದೊಡ್ಡ ಸುದ್ದಿಯಾಯಿತು. ನಂತರ ರಿಯಾ ಗೂ ಮಹೇಶ್ ಭಟ್‌ಗೂ ಆಪ್ತತೆ ಇದೆ, ಸುಶಾಂತ್ ಕೊಲೆಯಲ್ಲಿ ಮಹೇಶ್ ಭಟ್ ಪಾತ್ರವಿದೆ ಎನ್ನಲಾಗಿತ್ತು.

  ಮಹೇಶ್ ಭಟ್ ವಿರುದ್ಧ ಸಂಬಂಧಿಯಿಂದನೇ ಆರೋಪಗಳ ಸುರಿಮಳೆ: ಚಿತ್ರರಂಗದ 'ಡಾನ್' ಎಂದ ಲವೀನಾಮಹೇಶ್ ಭಟ್ ವಿರುದ್ಧ ಸಂಬಂಧಿಯಿಂದನೇ ಆರೋಪಗಳ ಸುರಿಮಳೆ: ಚಿತ್ರರಂಗದ 'ಡಾನ್' ಎಂದ ಲವೀನಾ

  ಈಗ ಹೊಸದಾಗಿ ಮಹೇಶ್ ಭಟ್ ಅವರ ಸಂಬಂಧಿಯೆಂದೇ ಹೇಳಲಾಗುತ್ತಿರುವ ನಟಿಯೊಬ್ಬರು ಮಹೇಶ್ ಭಟ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಆದರೆ ಆರೋಪ ಮಾಡಿದ್ದ ನಟಿಯ ಪತಿ ಈಗ ಪತ್ರಿಕಾ ಹೇಳಿಕೆ ಪ್ರಕಟಿಸಿದ್ದು, ಪ್ರಕರಣಕ್ಕೆ ಸಣ್ಣ ಟ್ವಿಸ್ಟ್ ಒಂದು ದೊರೆತಿದೆ.

  'ಮಹೇಶ್ ಭಟ್ ಸೋದರಳಿಯನ ಪತ್ನಿ'

  'ಮಹೇಶ್ ಭಟ್ ಸೋದರಳಿಯನ ಪತ್ನಿ'

  ಮಹೇಶ್ ಭಟ್ ಅವರ ಸೋದರಳಿಯನ ಪತ್ನಿ ಎಂದು ಹೇಳಿಕೊಂಡಿರುವ ನಟಿ ಲುವೀನಾ ಲೂದ್, 'ಮಹೇಶ್ ಭಟ್ ಚಿತ್ರರಂಗದ ಡಾನ್, ಆತನು ಹಲವರ ಜೀವನ ಹಾಳುಮಾಡಿದ್ದಾನೆ. ನನಗೂ ಕಿರುಕುಳ ನೀಡಿದ್ದಾನೆ, ನನ್ನನ್ನು ಮನೆಯಿಂದ ಹೊರಗೆ ಹಾಕಲು ಯತ್ನಿಸಿದ್ದಾರೆ' ಎಂದು ಆರೋಪ ಮಾಡಿದ್ದಾರೆ ಲವೀನಾ.

  ಚಿತ್ರರಂಗದ ಡಾನ್' ಎಂದ ಸಂಬಂಧಿ ಲವೀನಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮಹೇಶ್ ಭಟ್ಚಿತ್ರರಂಗದ ಡಾನ್' ಎಂದ ಸಂಬಂಧಿ ಲವೀನಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮಹೇಶ್ ಭಟ್

  ನನ್ನ ಪತಿ ನಟ-ನಟಿಯರಿಗೆ ಡ್ರಗ್ಸ್ ಸರಬರಾಜು ಮಾಡುತ್ತಾರೆ: ಲುವೀನಾ

  ನನ್ನ ಪತಿ ನಟ-ನಟಿಯರಿಗೆ ಡ್ರಗ್ಸ್ ಸರಬರಾಜು ಮಾಡುತ್ತಾರೆ: ಲುವೀನಾ

  ತನ್ನ ಪತಿಯ ವಿರುದ್ಧ ಆರೋಪ ಮಾಡಿರುವ ಲುವೀನಾ ಲೂದ್, 'ನನ್ನ ಪತಿ ಸುಮಿತ್ ಸಭರ್ವಾಲ್, ನಟ-ನಟಿಯರಿಗೆ ಡ್ರಗ್ಸ್ ಅನ್ನು ಸರಬರಾಜು ಮಾಡುತ್ತಾನೆ. ಅಮೈರಾ ದಸ್ತರ್ ಹಾಗೂ ಸಪ್ನಾ ಪಬ್ಬಿಗೆ ಡ್ರಗ್ಸ್ ಅನ್ನು ಸರಬರಾಜು ಮಾಡುತ್ತಾನೆ' ಎಂದು ಆರೋಪಿಸಿದ್ದರು.

  ಪತ್ರಿಕಾ ಹೇಳಿಕೆ ನೀಡಿರುವ ಸುಮಿತ್ ಸಭರ್ವಾಲ್

  ಪತ್ರಿಕಾ ಹೇಳಿಕೆ ನೀಡಿರುವ ಸುಮಿತ್ ಸಭರ್ವಾಲ್

  ಇದೀಗ, ಲುವೀನಾ ಪತಿ ಸುಮಿತ್ ಸಭರ್ವಾಲ್ ತಮ್ಮ ವಕೀಲರ ಮೂಲಕ ಪತ್ರಿಕಾ ಹೇಳಿಕೆ ನೀಡಿದ್ದು, 'ನನ್ನ ಪತ್ನಿ ಹೇಳಿರುವಂತೆ ನಾನು ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಅಥವಾ ಅವರ ಸಹೋದರ ಮುಖೇಶ್ ಭಟ್ ಸಂಬಂಧಿ ಅಲ್ಲ' ಎಂದಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada
  2016 ರಿಂದಲೂ ಪ್ರಕರಣ ನಡೆಯುತ್ತಿದೆ

  2016 ರಿಂದಲೂ ಪ್ರಕರಣ ನಡೆಯುತ್ತಿದೆ

  'ನನ್ನ ಹಾಗೂ ಮಹೇಶ್ ಭಟ್, ಮುಖೇಶ್ ಭಟ್ ನಡುವೆ ಸಂಬಂಧ ಹುಟ್ಟುಹಾಕುವ ಯತ್ನ ಕೇವಲ ಒಂದು ಷಡ್ಯಂತ್ರವಾಗಿದೆಯಷ್ಟೆ. ನನ್ನ ಪತ್ನಿ ಹಾಗೂ ನನ್ನ ನಡುವೆ 2016 ರಿಂದಲೂ ನ್ಯಾಯಾಲಯದಲ್ಲಿ ಪ್ರಕರಣ ಚಾಲ್ತಿಯಲ್ಲಿದ್ದು, ನನ್ನ ಮಾನಹಾನಿಗೆ ಆಕೆ ಹೀಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ' ಎಂದಿದ್ದಾರೆ.

  English summary
  Luviena Lodh made alligations against Mahesh Bhatt. But Luviena's husband said she is simply dragging Mahesh Bhat's name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X