For Quick Alerts
  ALLOW NOTIFICATIONS  
  For Daily Alerts

  ದುರಂತ ಅಂತ್ಯ ಕಂಡ 'ಮಧುಬಾಲಾ' ಬಯೋಪಿಕ್ ಕನ್ಫರ್ಮ್: ಭಾರತದ ಮರ್ಲಿನ್ ಮನ್ರೋ ಕಥೆಯೇನು?

  |

  ಮುಮ್ತಾಜ್ ಬೇಗಂ ಜೇಹನ್ ದೆಹ್ಲವಿ 50 ಹಾಗೂ 60ರ ದಶಕದ ಸುಪ್ರಸಿದ್ಧ ಬಾಲಿವುಡ್ ನಟಿ. ಈ ಹೆಸರಿನಿಂದ ಕರೆದರೆ ಬಹುಶ: ಸಿನಿಪ್ರಿಯರಿಗೂ ಯಾರೂ ಕಣ್ಮುಂದೆ ಬಾರದೆ ಹೋಗಬಹುದು. ಅಸಲಿಗೆ ಈ ನಟಿಯನ್ನು ಸಿನಿಮಾ ಮಧುಬಾಲಾ ಎಂದು ಕರೆಯುತ್ತಿದ್ದರು. ಅಪ್ರತಿಮ ಸುಂದರಿಗೆ ಅಂದಿನ ಕಾಲದಲ್ಲಿ ಹುಚ್ಚರಾದವರು ಅದೆಷ್ಟು ಮಂದಿನೋ.

  ಮಧುಬಾಲಾರನ್ನು ಭಾರತೀಯ ಚಿತ್ರರಂಗದ ಮರ್ಲಿನ್‌ ಮನ್ರೋ. ಮೀನಾಕುಮಾರಿ, ನರ್ಗಿಸ್ ಅಂತ ಪ್ರತಿಮ ನಟಿಯರ ಸಮಕಾಲೀನರಾಗಿದ್ದ ಮಧುಬಾಲಾ ಚಿತ್ರರಂಗದಲ್ಲಿ ತನ್ನದೇ ಚಾಪು ಮೂಡಿಸಿದ್ದರು. ಕೇವಲ ಮೂವತ್ತಾರು ವರ್ಷಗಳಲ್ಲಿಯೇ ದುರಂತ ಅಂತ್ಯ ಕಂಡ ಮಧುಬಾಲಾ ಬದುಕೇ ನಿಜಕ್ಕೂ ರೋಚಕ.

  ಬೀದಿಗೆ ತಳ್ಳಲ್ಪಟ್ಟ ಸೂಪರ್ ಸ್ಟಾರ್ ನಟಿಯ ತಂಗಿ!ಬೀದಿಗೆ ತಳ್ಳಲ್ಪಟ್ಟ ಸೂಪರ್ ಸ್ಟಾರ್ ನಟಿಯ ತಂಗಿ!

  ಕಳೆದ ಹಲವು ವರ್ಷಗಳಿಂದ ಮಧುಬಾಲಾ ಬಯೋಪಿಕ್‌ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಅದು ಮಾತಿಗಷ್ಟೇ ಸೀಮಿತವಾಗಿತ್ತು. ಕೊನೆಗೂ ಭಾರತೀಯ ಚಿತ್ರರಂಗ ಕಂಡ ಪ್ರತಿಮ ಸುಂದರಿಯ ಆತ್ಮಕಥೆಯನ್ನು ತೆರೆಮೇಲೆ ತರುವುದಕ್ಕೆ ವೇದಿಕೆ ರೆಡಿಯಾಗಿದೆ. ಅಷ್ಟಕ್ಕೂ ಮಧುಬಾಲಾ ಬಯೋಪಿಕ್ ಮಾಡುತ್ತಿರೋರು ಯಾರು? ಯಾವ ಶುರು? ಮಧುಬಾಲಾ ದುರಂತ ಕಥೆಯೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ಸೋದರಿಯಿಂದಲೇ ಮಧುಬಾಲಾ ಬಯೋಪಿಕ್!

  ಸೋದರಿಯಿಂದಲೇ ಮಧುಬಾಲಾ ಬಯೋಪಿಕ್!

  ಮಧುಬಾಲಾ ಬಯೋಪಿಕ್ ಬಗ್ಗೆ ಇಲ್ಲಿವರೆಗೂ ಎದ್ದಿರೋ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. ಮಧುಬಾಲಾ ಬಯೋಪಿಕ್ ಸೆಟ್ಟೇರುವುದು ಬಹುತೇಕ ಕನ್ಫರ್ಮ್ ಆಗಿದೆ. ವಿಶೇಷ ಬಾಲಿವುಡ್‌ನ ಸುರಸುಂದರಿ ಮಧುಬಾಲಾ ಚರಿತ್ರೆಯನ್ನು ಅವರ ಸಹೋದರಿ ಮಧುರ್ ಬ್ರಿಜ್ ಭೂಷಣ್ ತೆರೆಮೇಲೆ ತರುತ್ತಿದ್ದಾರೆ. ಇವರಿಗೆ 'ಶಕ್ತಿಮಾನ್' ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕರು ಕೈ ಜೋಡಿಸಿದ್ದಾರೆ. ಮಧುಬಾಲಾ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಹಾಗೂ ಬ್ರೆವಿಂಗ್ ಥಾಟ್ಸ್ ಪ್ರೈವೆಟ್ ಲಿ. ಸೇರಿ ನಿರ್ಮಾಣ ಮಾಡಲಿದೆ.

  'ದುರಂತ ನಾಯಕ' ದಿಲೀಪ್ ಕುಮಾರ್ ಜೀವನದಿಂದ ಮಧುಬಾಲಾ ದೂರವಾಗಿದ್ದೇಕೆ?'ದುರಂತ ನಾಯಕ' ದಿಲೀಪ್ ಕುಮಾರ್ ಜೀವನದಿಂದ ಮಧುಬಾಲಾ ದೂರವಾಗಿದ್ದೇಕೆ?

  ಐದು ವರ್ಷಗಳಿಂದ ಕೆಲಸ

  ಐದು ವರ್ಷಗಳಿಂದ ಕೆಲಸ

  ಮಧುಬಾಲಾ ಬಯೋಪಿಕ್ ಸಿನಿಮಾ ಮಾಡಬೇಕು ಅನ್ನೋದು ಅವರ ಕುಟುಂಬದ ಬಹುದಿನದ ಕನಸಾಗಿತ್ತು. ಈ ಕಾರಣಕ್ಕೆ ಮಧುಬಾಲಾ ಚರಿತ್ರೆಯನ್ನು ತೆರೆಮೇಲೆ ತರುವುದಕ್ಕೆ ಸುಮಾರು 5 ವರ್ಷಗಳಿಂದ ಚಿತ್ರಕಥೆಯನ್ನು ಹೆಣೆಯಲಾಗಿದೆ. ಕೊನೆಗೂ ಕಥೆ ಹಾಗೂ ಚಿತ್ರಕಥೆ ರೆಡಿಯಾಗಿದ್ದು, ಸಿನಿಮಾ ಸೆಟ್ಟೇರುವುದಕ್ಕೆ ರೆಡಿಯಾಗಿದೆ. ಇದೇ ವೇಳೆ ಬೇರೆ ಯಾರೂ ಬಯೋಪಿಕ್ ಮಾಡದೆ ಇರುವಂತೆ ಸಹೋದರಿ ಮನವಿ ಮಾಡಿಕೊಂಡಿದ್ದಾರೆ.

  ಭಾರತದ ಮರ್ಲಿನ್ ಮನ್ರೋ

  ಭಾರತದ ಮರ್ಲಿನ್ ಮನ್ರೋ

  30ರ ದಶಕದಲ್ಲಿ ಜನಿಸಿದ ಮಧುಬಾಲಾ ಬದುಕಿದ್ದು ಕೇವಲ 36 ವರ್ಷ ಮಾತ್ರ. ತನ್ನ ಅಲ್ಪ ಜೀವಿತಾವಧಿಯಲ್ಲಿ 'ಮಧುಬಾಲಾ' ಎಂದೆಂದೂ ಮರೆಯಲಾಗಷ್ಟು ಸಾಧನೆಯನ್ನು ಮಾಡಿ ಹೋಗಿದ್ದಾರೆ. ಈ ಮೂವತ್ತಾರು ವರ್ಷಗಳಲ್ಲಿ ಮಧುಬಾಲಾ ನಟಿಸಿದ್ದು, ಬರೋಬ್ಬರಿ 72 ಸಿನಿಮಾಗಳು. ಒಂದು ವೇಳೆ ಆರೋಗ್ಯ ಕೈ ಕೊಡದೆ ಹೋಗಿದ್ದರೆ ಮಧುಬಾಲಾರ ಇನ್ನಷ್ಟು ಸಿನಿಮಾಗಳು ಸಿನಿರಸಿಕರನ್ನು ರಂಜಿಸುತ್ತಿದ್ದರು.

  ಮಧುಬಾಲಾ ದುರಂತ ಅಂತ್ಯ

  ಮಧುಬಾಲಾ ದುರಂತ ಅಂತ್ಯ

  ಮಧುಬಾಲಾ ಹಿಂದಿ ಚಿತ್ರರಂಗದ ಸುರಸುಂದರಿ ನಾಯಕಿಯರಲ್ಲಿ ಒಬ್ಬರು. ಈಕೆ ನಟಿಸಿದ ಬಹುತೇಕ ಸಿನಿಮಾ ಜನರ ಮನಸ್ಸನ್ನು ಗೆದ್ದಿದೆ. ಮಧುಬಾಲಾ ನಟಿಸಿದ 'ಮೊಘಲ್-ಎ-ಆಜಮ್' ಸಿನಿಮಾ ಆಲ್‌ ಟೈಮ್ ಫೇವರಿಟ್ ಸಿನಿಮಾ. ಆದರೆ, ಯಶಸ್ಸಿನ ಉತ್ತಂಗದಲ್ಲಿದ್ದ ಈಕೆಯ ಬದುಕು ದುರಂತ ಅಂತ್ಯವನ್ನು ಕಂಡಿತ್ತು. ದಿಲೀಪ್ ಕುಮಾರ್ ಜೊತೆ ಭಗ್ನ ಪ್ರೇಮ, ಹೃದಯದಲ್ಲಿ ರಂಧ್ರ, ಬದುಕುವ ಹಠ, ಹೋರಾಟ ಮಧುಬಾಲಾ ಬದುಕಿನ ಹೈಲೈಟ್. ಹೀಗಾಗಿ ಬಯೋಪಿಕ್‌ನಲ್ಲಿ ಯಾವೆಲ್ಲಾ ಅಂಶಗಳನ್ನು ತೆರೆಮೇಲೆ ತರಲಿದೆ ಎಂದು ಕುತೂಹಲ ಮೂಡಿದೆ.

  English summary
  Madhubala biopic Confirmed: Family Team Up With Shaktimaan Producer, Know More.
  Tuesday, July 19, 2022, 16:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X