»   »  ಮೇಡಂ ಟುಸ್ಸಾಡ್ಸ್ ನಲ್ಲಿ 'ಅನಾರ್ಕಲಿ' ಮಧುಬಾಲಾ ಪ್ರತಿಮೆ

ಮೇಡಂ ಟುಸ್ಸಾಡ್ಸ್ ನಲ್ಲಿ 'ಅನಾರ್ಕಲಿ' ಮಧುಬಾಲಾ ಪ್ರತಿಮೆ

Posted By:
Subscribe to Filmibeat Kannada

ಬಾಲಿವುಡ್‌ನ ಎವರ್ ಗ್ರೀನ್ ನಾಯಕಿ ಮಧುಬಾಲ ಅವರಿಗೆ ಮೇಡಂ ಟುಸ್ಸಾಡ್ ಮೇಣದ ಪ್ರತಿಮೆ ಸಂಗ್ರಹಾಲಯದಲ್ಲಿ ಸ್ಥಾನ ದೊರೆತಿದೆ. ಈ ಮೂಲಕ ಮ್ಯೂಸಿಯಂ ಸೇರ್ಪಡೆಯಾಗಿರುವ ಬಾಲಿವುಡ್ ಗಣ್ಯರ ಸಾಲಿನಲ್ಲಿ ಅಪ್ರತಿಮ ಸುಂದರಿ ಕೂಡ ಸೇರಿಕೊಂಡಿದ್ದಾರೆ.

ದೆಹಲಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೇಡಂ ಟುಸ್ಸಾಡ್ ಸಂಗ್ರಹಾಲಯದಲ್ಲಿ ನಟಿ ಮಧುಬಾಲ ಅವರ ಮೇಣದ ಪ್ರತಿಮೆಯನ್ನ ಸಿದ್ದಗೊಳಿಸಲಾಗಿದ್ದು, ಅದ್ಧೂರಿಯಾಗಿ ಅನಾವರಣಗೊಳಿಸಲಾಯಿತು.

Madhubala's wax figure unveiled at Madame Tussauds

ಮಧುಬಾಲಾ 1960ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ 'ಮೊಗಲ್ ಎ ಆಜಾಮ್' ಚಿತ್ರದ 'ಅನಾರ್ಕಲಿ' ಪಾತ್ರದ ಮೂಲಕ ಹೆಚ್ಚು ಖ್ಯಾತಿಗಳಿಸಿಕೊಂಡಿದ್ದರು. ಹೀಗಾಗಿ, ಜಗಮೆಚ್ಚಿದ ಸುಂದರ ನಟಿಯನ್ನ ಅದೇ ಪಾತ್ರದ ಮೂಲಕ ಪ್ರತಿಮೆಯಾಗಿಸಲಾಗಿದೆ.

Madhubala's wax figure unveiled at Madame Tussauds

ಮಧುಬಾಲ ಅವರ ಸಹೋದರಿ ಮಧುರ್ ಬ್ರಿಜ್ ಈ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ''ತುಂಬ ಸಂತೋಷವಾಗುತ್ತಿದೆ. ಈ ಕ್ಷಣಕ್ಕಾಗಿ ಕಾಯುತ್ತಿದೆ. ನಿಮ್ಮ ಹೃದಯದಲ್ಲಿ ಈಗಲೂ ಮಧುಬಾಲ ಅವರಿಗೆ ಸ್ಥಾನ ನೀಡಿರುವುದಕ್ಕೆ ಧನ್ಯವಾದಗಳು'' ಎಂದು ಸಂತಸ ವ್ಯಕ್ತಪಡಿಸಿದರು.

Madhubala's wax figure unveiled at Madame Tussauds

ಮೇಡಂ ಟುಸ್ಸಾಡ್ ಅವರ ಮೇಣದ ಪ್ರತಿಮೆ ವಸ್ತು ಸಂಗ್ರಹಾಲಯದಲ್ಲಿ ಮಧುಬಾಲ ಅವರ ಪ್ರತಿಮೆ ಮಾತ್ರವಲ್ಲದೇ, ಬಾಲಿವುಡ್‌ ನಟರಾದ ಅಮಿತಾಭ್ ಬಚ್ಚನ್, ಶಾರೂಖ್ ಖಾನ್, ನಟಿ ಐಶ್ವರ್ಯಾ ರೈ, ಕತ್ರಿಕಾ ಕೈಫ್, ಗಾಯಕಿಯರಾದ ಆಶಾ ಭೋಸ್ಲೆ, ಶ್ರೇಯಾ ಘೋಷಾಲ್ ಸೇರಿದಂತೆ ಹಲವು ಸಾಧಕರ ಪ್ರತಿಮೆಗಳು ಸ್ಥಾನ ಪಡೆದಿವೆ.

English summary
Madhubala's wax Statue inspired by her legendary character 'Anarkali' from the film 'Mughal-e-Azam' was unveiled by Madame Tussauds, Delhi on Thursday (August 10).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada