For Quick Alerts
  ALLOW NOTIFICATIONS  
  For Daily Alerts

  ಚಾಕೋಲೇಟ್ ಬಾಯ್ ಕಿಸ್ಸಿಗೆ ಮಾಧುರಿ ಢಮಾರ್

  By Rajendra
  |

  ಬಾಲಿವುಡ್ ಚಾಕೋಲೇಟ್ ಹೀರೋ ರಣಬೀರ್ ಕಪೂರ್ ಸೀರಿಯಲ್ ಕಿಸ್ಸರ್ ಅಲ್ಲದಿದ್ದರೂ ಒಂದಷ್ಟು ಬೆಡಗಿಯರಿಗಂತೂ ಚುಮ್ಮಾ ಕೊಟ್ಟ ಬೆಚ್ಚಗಿನ ಅನುಭವವಂತೂ ಇದ್ದೇ ಇದೆ. ಆದರೆ ಇತ್ತೀಚೆಗೆ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಗೆ ಪಪ್ಪಿ ಕೊಡಲು ಸುವರ್ಣಾವಕಾಶ ರಣಬೀರ್ ಗೆ ಸಿಕ್ಕಿದೆ.

  ಸುದೀರ್ಘ ಸಮಯದ ಬಳಿಕ ಮಾಧುರಿ ದೀಕ್ಷಿತ್ ಮತ್ತೆ ಬಣ್ಣ ಹಚ್ಚುತ್ತಿರುವುದು ಗೊತ್ತೇ ಇದೆ. 'ಯೇ ಜಾವಾನಿ ಹೈ ದಿವಾನಿ' ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ಮಾಧುರಿ ಸೊಂಟ ಬಳುಕಿಸುತ್ತಿದ್ದಾರೆ. ಈ ಹಾಡಿನಲ್ಲಿ ಮಾಧುರಿ ಜೊತೆ ರಣಬೀರ್ ಹೆಜ್ಜೆ ಹಾಕುತ್ತಿದ್ದು ಚುಂಬನ ದೃಶ್ಯಕ್ಕಾಗಿ ನಾಲ್ಕು ಟೇಕ್ ತೆಗೆದುಕೊಂಡಿದ್ದಾನೆ.

  ಇದುವರೆಗೂ ಎಷ್ಟೋ ಮಂದಿ ಜೊತೆ ಅಭಿನಯಿಸಿದ್ದೇನೆ. ನನ್ನ ಸಹನಟರನ್ನು ನಾನು ಗೆಳೆಯರೆಂದೇ ಭಾವಿಸುತ್ತೇನೆ. ಹಾಗಾಗಿ ನನ್ನ ಮೇಲೆ ಇಲ್ಲಸಲ್ಲದ ಗಾಸಿಪ್ ಗಳು ಆಗಾಗ ಹುಟ್ಟಿಕೊಳ್ಳುತ್ತಿರುತ್ತವೆ. ಆದರೆ ಒಬ್ಬರನ್ನು ನೆನೆದರೆ ನನ್ನ ಎದೆಬಡಿತ ತನ್ನಿಂದತಾನೆ ಜೋರಾಗುತ್ತದೆ. ಆಕೆ ಬೇರಾರು ಅಲ್ಲ ಮಾಧುರಿ ದೀಕ್ಷಿತ್ ಎಂದಿದ್ದಾರೆ.

  ಮಾಧುರಿ ಜೊತೆ ಅಭಿನಯಿಸಬೇಕು ಎಂದು ಚಿಕ್ಕಂದಿನಿಂದಲೂ ಕನಸು ಕಂಡಿದ್ದೆ. ಅದು ಈಗ ನೆರವೇರುತ್ತಿದೆ. ಅವರೊಂದಿಗೆ ಹೆಜ್ಜೆ ಹಾಕಿದ್ದು ನಿಜಕ್ಕೂ ನನಗೆ ಖುಷಿಕೊಟ್ಟಿದೆ. "ಘಾಗ್ರಾ" ಎಂಬ ಐಟಂ ಹಾಡು ಚಿತ್ರದಲ್ಲಿದ್ದು ಈ ಹಾಡಿನ ಕೊನೆಗೆ ಮಾಧುರಿಗೆ ಕಿಸ್ ಕೊಡುತ್ತಾನೆ ರಣಬೀರ್.

  ಆದರೆ ಹಾಡಿನಲ್ಲಿ ಈ ಕಿಸ್ಸಿಂಗ್ ಸೀನ್ ಇರಲಿಲ್ಲವಂತೆ. ಸ್ವತಃ ರಣಬೀರ್ ಅವರು ನಿರ್ದೇಶಕ ಅಯನ್ ಮುಖರ್ಜಿ ಅವರಿಗೆ ಹೇಳಿ ಈ ಸೀನ್ ಬರುವಂತೆ ನೋಡಿಕೊಂಡಿದ್ದಾರೆ. ಆದರೆ ಒಂದೇ ಶಾಟ್ ನಲ್ಲಿ ಓಕೆ ಮಾಡದೆ ನಾಲ್ಕು ಶಾಟ್ ಗಳನ್ನು ತೆಗೆದುಕೊಂಡ ರಣಬೀರ್ ತನ್ನ ಮನದಾಳದ ಸುದೀರ್ಘ ಬಯಕೆಯನ್ನು ತೀರಿಸಿಕೊಂಡಿದ್ದಾರೆ.

  ಈ ರೀತಿಯ ಸುವರ್ಣಾವಕಾಶ ಮುಂದೆ ಬರುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಮಾಧುರಿಯ ಸೇಬಿನಂತಹ ಕೆನ್ನೆಗೆ ಕಿಸ್ ಕೊಡಲು ನಾಲ್ಕು ಸಲ ಪ್ರಯತ್ನಿಸಿ ಸೋತೆ. ಕಡೆಗೂ ಅಂದುಕೊಂಡ ರೀತಿಯಲ್ಲಿ ಆ ಸೀನ್ ಮೂಡಿಬಂತು ಬಿಡಿ. ಆದರೆ ನಾಲ್ಕು ಟೇಕ್ ಗಳನ್ನು ತೆಗೆದುಕೊಳ್ಳಬೇಕು ಎಂಬ ಉದ್ದೇಶ ನನಗಿರಲಿಲ್ಲ. ಕಾಕತಾಳೀಯವಾಗಿ ನಡೆದುಹೋಯಿತು ಎಂದಿದ್ದಾನೆ 'ಕಿಸ್' ಕಳ್ಳ. ಅಂದಹಾಗೆ 'ಯೇ ಜಾವಾನಿ ಹೈ ದಿವಾನಿ' ಚಿತ್ರ ಮೇ31ಕ್ಕೆ ಬಿಡುಗಡೆಯಾಗುತ್ತಿದೆ. (ಏಜೆನ್ಸೀಸ್)

  English summary
  Bollywood chocolate hero Ranbir Kapoor shared the screen space with Madhuri Dixit for an item song 'Ghagra' in the film Yeh Jaawani Hain Deewani, which will hit theatres on May 31. The kissing scene took four retakes. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X