Just In
- 11 hrs ago
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- 11 hrs ago
'ಮತ್ತೆ ಮನ್ವಂತರ' ತರುತ್ತಿದ್ದಾರೆ ಟಿ.ಎನ್.ಸೀತಾರಾಮ್
- 12 hrs ago
ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ
- 12 hrs ago
ಪವನ್ ಕಲ್ಯಾಣ್ ಮಗಳ ಕುರಿತು ಸಹನಟಿ ಅನನ್ಯಾ ಮಾತು
Don't Miss!
- News
ಲಸಿಕೆ ಉತ್ಸವ: ಭಾರತದಲ್ಲಿ ಒಂದೇ ದಿನ 27 ಲಕ್ಷ ಜನರಿಗೆ ಕೊರೊನಾ ಲಸಿಕೆ!
- Lifestyle
ಸೋಮವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Automobiles
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೇಂದ್ರ ಸರ್ಕಾರದ ಪರ ಸೆಲೆಬ್ರಿಟಿಗಳ ಟ್ವೀಟ್: ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶ
ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾಪ್ ಗಾಯಕಿ ರಿಹಾನ್ನ ಮಾಡಿದ್ದ ಟ್ವೀಟ್ ದೇಶದಲ್ಲಿ ಭಾರಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ರಿಹಾನ್ನ ಟ್ವೀಟ್ ಭಾರಿ ವೈರಲ್ ಆಗಿತ್ತು.
ಆದರೆ ರಿಹಾನ್ನ ಟ್ವೀಟ್ ಮಾಡಿದ ಕೆಲವು ಗಂಟೆಗಳ ಬಳಿಕ ಭಾರತದ ಸಿನಿಮಾ ಹಾಗೂ ಕ್ರೀಡಾ ಸೆಲೆಬ್ರಿಟಿಗಳು ಒಬ್ಬರ ಹಿಂದೆ ಒಬ್ಬರು ಅದೇ ವಿಷಯವಾಗಿ ಟ್ವೀಟ್ ಮಾಡಿ. ಕೇಂದ್ರ ಸರ್ಕಾರಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು. ಸೆಲೆಬ್ರಿಟಿಗಳ ಈ ಟ್ವೀಟ್‌ಗಳು ಯಾರದ್ದೊ ಒತ್ತಾಯಕ್ಕೆ ಮಣಿದು ಮಾಡಿದ ಟ್ವೀಟ್ ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಿದೆ ಕೇಂದ್ರ ಸರ್ಕಾರ.
'ರಿಹಾನ್ನ ಪರಿಣಾಮ', ಅಖಾಡಕ್ಕಿಳಿದ ಬಾಲಿವುಡ್ ಸೆಲೆಬ್ರಿಟಿಗಳು: ಡ್ಯಾಮೇಜ್ ಕಂಟ್ರೋಲ್?
ರಿಹಾನ್ನ ಟ್ವೀಟ್ ಮಾಡಿದ ಕೆಲವು ಗಂಟೆಗಳ ಬಳಿಕ ಕೇಂದ್ರ ವಿದೇಶಾಂಗ ಸಚಿವಾಲವು, 'ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಬಾರದು' ಎಂಬರ್ಥದ ಹೇಳಿಕೆಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿತು. ಈ ಟ್ವೀಟ್‌ನಲ್ಲಿ 'ಇಂಡಿಯಾ ಯುನೈಟ್', 'ಇಂಡಿಯಾ ಅಗೇನ್‌ಸ್ಟ್ ಪ್ರೊಪೊಗ್ಯಾಂಡಾ' ಹ್ಯಾಷ್‌ಟ್ಯಾಗ್ ಬಳಸಲಾಗಿತ್ತು.

ವಿದೇಶಾಂಗ ಇಲಾಖೆಯ ಟ್ವೀಟ್ ಬಳಿಕ ಸಾಲು-ಸಾಲು ಟ್ವೀಟ್
ವಿದೇಶಾಂಗ ಇಲಾಖೆಯ ಟ್ವೀಟ್ ಹೊರಬಿದ್ದ ಕೆಲವು ಗಂಟೆಗಳ ಬಳಿಕ ಅದೇ ಟ್ವೀಟ್‌ನ ಹ್ಯಾಷ್‌ಟ್ಯಾಗ್ ಬಳಸಿ ಹಲವಾರು ನಟರು, ಕ್ರೀಡಾ ಪಟುಗಳು, ಮಾಜಿ ಕ್ರೀಡಾ ಸೆಲೆಬ್ರಿಟಿಗಳು ಬಹುತೇಕ ಒಂದೇ ಸಮಯಕ್ಕೆ ಒಂದೇ ಅರ್ಥ ಧ್ವನಿಸುವ ಟ್ವೀಟ್ ಮಾಡಿದರು. ಎಲ್ಲ ಟ್ವೀಟ್‌ಗಳು ರಿಹಾನ್ನ ಮಾಡಿದ ಟ್ವೀಟ್ ನಿಂದ ಭಾರತದ ಐಕ್ಯತೆಗೆ ಧಕ್ಕೆ ಆಗಿದೆ ಎಂಬುದನ್ನೇ ಧ್ವನಿಸುತ್ತಿತ್ತು. ಈ ಎಲ್ಲ ಸೆಲೆಬ್ರಿಟಿಗಳ ಟ್ವೀಟ್‌ಗಳು ರಿಹಾನ್ನ ಟ್ವೀಟ್ ಮಾಡಿದ ಒಂದು ದಿನದ ನಂತರ ಬಂದವು. ಆದರೆ ಎಲ್ಲ ಸೆಲೆಬ್ರಿಟಿಗಳ ಟ್ವೀಟ್‌ಗಳು ಬಹುತೇಕ ಒಂದೇ ಸಮಯಕ್ಕೆ ಮಾಡಲಾಗಿತ್ತು.

ರೈತ ಹೋರಾಟದ ಬಗ್ಗೆ ಈ ಹಿಂದೆ ಟ್ವೀಟ್ ಮಾಡಿರಲಿಲ್ಲ
ದೆಹಲಿಯಲ್ಲಿ ರೈತ ಹೋರಾಟ ಪ್ರಾರಂಭವಾಗಿ ಸುಮಾರು ತಿಂಗಳುಗಳೇ ಆಗಿವೆ. ಹೋರಾಟದಲ್ಲಿ ಭಾಗವಹಿಸಿದ್ದ ಹಲವು ರೈತರು ಸಾವನ್ನಪ್ಪಿದ್ದಾರೆ. ಜನವರಿ 26 ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸರೂ ಸಹ ಗಾಯಾಳುಗಳಾಗಿದ್ದಾರೆ. ಆದರೆ ಆವಾಗೆಲ್ಲ ಸುಮ್ಮನಿದ್ದ ಈ ಸೆಲೆಬ್ರಿಟಿಗಳು, ಒಂದೇ ದಿನ, ಒಂದೇ ಸಮಯಕ್ಕೆ ಒಂದೇ ಥೆರನಾದ ಟ್ವೀಟ್ ಗಳನ್ನು ಮಾಡಿದ್ದು ಹೇಗೆ? ಏಕೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಗೃಹ ಸಚಿವರಿಂದ ತನಿಖೆಗೆ ಆದೇಶ
ಇದೀಗ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ನಟ ಅಕ್ಷಯ್ ಕುಮಾರ್, ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್, ಸುನಿಲ್ ಶೆಟ್ಟಿ, ಅಜಯ್ ದೇವಗನ್ ಇನ್ನೂ ಹಲವರನ್ನು ಈ ಸಂಬಂಧ ಪ್ರಶ್ನೆ ಮಾಡಲಾಗುತ್ತದೆ.

ಕಾಂಗ್ರೆಸ್‌ನಿಂದ ದೂರು ದಾಖಲು
ಮಹಾರಾಷ್ಟ್ರ ಕಾಂಗ್ರೆಸ್ ಈ ಬಗ್ಗೆ ದೂರು ದಾಖಲಿಸಿದೆ. 'ರಿಹಾನ್ನ ಟ್ವೀಟ್‌ನ ಬಳಿಕ ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದೆ. ಆ ಟ್ವೀಟ್‌ನ ಬಳಿಕ ಎಲ್ಲ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ. ಕೆಲವರ ಟ್ವೀಟ್‌ಗಳಂತಲೂ ಅಕ್ಷರ, ಪದಗಳು ಸಹ ಒಂದೇ ಥೆರನಾಗಿದೆ. ಈ ಟ್ವೀಟ್‌ಗಳೆಲ್ಲಾ ಸ್ಕ್ರಿಪ್ಟೆಡ್ ಎಂಬ ಅನುಮಾನ ಇದೆ, ಹೋರಾಟದ ದಿಕ್ಕು ತಪ್ಪಿಸಲು ಯಾರದ್ದೋ ಬಲವಂತಕ್ಕೆ ಸಿಲುಕಿ ಈ ಟ್ವೀಟ್ ಮಾಡಲಾಗಿದೆ' ಎಂದು ದೂರಿನಲ್ಲಿ ಹೇಳಲಾಗಿದೆ.