For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರಾವಣನಾದರೇ ರಾಮ ಆಗ್ತಾರಾ ಮಹೇಶ್ ಬಾಬು? ಸೀತೆ ಯಾರು? ಇಲ್ಲಿದೆ '3ಡಿ ರಾಮಾಯಣ'ದ ಮಾಹಿತಿ

  |

  ರಾಮಾಯಣ ಮಹಾಭಾರತದ ಬಗ್ಗೆ ಸಾಕಷ್ಟು ಧಾರಾವಾಹಿಗಳು, ಸಿನಿಮಾಗಳು ಬಂದಿವೆ. ಆದರೂ ಜನರಿಗೆ ಅದರ ಬಗ್ಗೆ ಆಸಕ್ತಿ ಕಡಿಮೆ ಆಗಿಲ್ಲ. ಮತ್ತೆ ಮತ್ತೆ ತೆರೆಮೇಲೆ ನೋಡಲು ಇಷ್ಟ ಪಡುತ್ತಾರೆ. ಹಾಗಾಗಿಯೇ ಮಹಾಭಾರತ ಮತ್ತು ರಾಮಾಯಣದ ಮೇಲೆ ಸಿನಿಮಾಗಳು ಬರುತ್ತಲೇ ಇದೆ.

  ಬಾಲಿವುಡ್ ನಲ್ಲಿ ರಾಮಾಯಣದ ಬಗ್ಗೆ ಬಿಗ್ ಬಜೆಟ್ ಸಿನಿಮೊಂದು ಸೆಟ್ಟೇರುತ್ತಿದೆ ಎನ್ನುವ ಮಾತು ವರ್ಷಗಳಿಂದ ಕೇಳುತ್ತಿದ್ದೀರಿ. ಬಿಗ್ ಬಜೆಟ್ ನ 3ಡಿ ರಾಮಾಯಣ ಸಿನಿಮಾ ಮಧು ಮಂಟೇನಾ ನಿರ್ಮಾಣದಲ್ಲಿ ಮೂಡಿಬರುತ್ತಿದೆ. 500 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿದೆ. ನಿತೀಶ್ ತಿವಾರಿ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ. ಇದೀಗ ಈ ಸಿನಿಮಾದ ಬಗ್ಗೆ ಅಪ್ ಡೇಟ್ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  ಜತೆಯಾಗಲಿದ್ದಾರೆ ದೀಪಿಕಾ ಪಡುಕೋಣೆ-ಹೃತಿಕ್ ರೋಷನ್: ಸಿನಿಮಾ ಹೆಸರು ಘೋಷಣೆ

  ರಾಮನ ಪಾತ್ರಕ್ಕೆ ಹೃತಿಕ್ ಹೆಸರು ಕೇಳಿಬರುತ್ತಿತ್ತು

  ರಾಮನ ಪಾತ್ರಕ್ಕೆ ಹೃತಿಕ್ ಹೆಸರು ಕೇಳಿಬರುತ್ತಿತ್ತು

  3ಡಿ ರಾಮಾಯಣ ಸಿನಿಮಾಗೆ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಹೆಸರು ಮುಂಚೂಣಿಯಲ್ಲಿತ್ತು. ಹೃತಿಕ್ ರಾಮನಾಗಿ ಕಾಣಿಸಿಕೊಂಡರೆ ದೀಪಿಕಾ ಸೀತೆ ಆಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಪಾತ್ರಗಳು ಅದಲುಬದಲಾಗಿದೆ ಎನ್ನಲಾಗುತ್ತಿದೆ.

  ರಾಮನಾಗಿ ಮಹೇಶ್ ಬಾಬು, ರಾವಣ ಪಾತ್ರದಲ್ಲಿ ಹೃತಿಕ್

  ರಾಮನಾಗಿ ಮಹೇಶ್ ಬಾಬು, ರಾವಣ ಪಾತ್ರದಲ್ಲಿ ಹೃತಿಕ್

  ಸದ್ಯ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಹೃತಿಕ್ ರೋಷನ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೌದು, ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ದೊಡ್ಡ ಬಜೆಟ್ ನ ರಾಮಾಯಣ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಮಹೇಶ್ ಬಾಬು ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಹೊಸ ವಿಚಾರ ಸದ್ದು ಮಾಡುತ್ತಿದ್ದಾರೆ.

  ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮಹೇಶ್ ಬಾಬು ದಂಪತಿ: ಎಂದೆಂದಿಗೂ ನಿನ್ನೊಂದಿಗಿರುವೆ ಎಂದ ಪ್ರಿನ್ಸ್

  ಪ್ರಭಾಸ್ ಆಯ್ಕೆ ಮಾಡಿತ್ತು ಸಿನಿಮಾತಂಡ

  ಪ್ರಭಾಸ್ ಆಯ್ಕೆ ಮಾಡಿತ್ತು ಸಿನಿಮಾತಂಡ

  ರಾಮಾಯಣ 3ಡಿ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ಮಹೇಶ್ ಬಾಬು ಅವರನ್ನು ಸಂಪರ್ಕ ಮಾಡಲಾಗಿದೆಯಂತೆ. ಮಹೇಶ್ ಬಾಬುಗೂ ಮೊದಲು ಚಿತ್ರತಂಡ ಪ್ರಭಾಸ್ ಅವರನ್ನು ರಾಮನ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ. ಆದರೆ ಪ್ರಭಾಸ್ ಓಂ ರಾವತ್ ಅವರ ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಂಡ ಕಾರಣ ಮಹೇಶ್ ಬಾಬು ಅವರನ್ನು ಸಂಪರ್ಕ ಮಾಡಿದೆ ಚಿತ್ರತಂಡ ಎನ್ನಲಾಗುತ್ತಿದೆ.

  ಶಾಕ್ ನೀಡಿದ ಪ್ರಭಾಸ್

  ಶಾಕ್ ನೀಡಿದ ಪ್ರಭಾಸ್

  ಓಂ ರಾವತ್ ಆದಿಪುರುಷ್ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ ಮಧು ಮಂಟೇನಾ ಅವರಿಗೆ ದೊಡ್ಡ ಆಘಾತವಾಗಿತ್ತು ಎನ್ನಲಾಗಿದೆ. ತಕ್ಷಣ ಅವರು ತಮ್ಮ ತಂಡವನ್ನು ಸಂಪರ್ಕಿಸಿ ರಾಮಾಯಣ ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿನಿಮಾ ಬೇಗ ಸೆಟ್ಟೇರಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

  ಬೇರೆ ಭಾಷೆ ಬಿಗ್ ಬಾಸ್ ಶೋಗಳ ನಿರೂಪಕರನ್ನು ಮೀರಿಸಿದ್ದು ಯಾರು ಗೊತ್ತಾ? | Filmibeat Kannada
  ಮಹೇಶ್ ಆಯ್ಕೆಗೆ ಮುಗ್ಧತೆ ಕಾರಣ

  ಮಹೇಶ್ ಆಯ್ಕೆಗೆ ಮುಗ್ಧತೆ ಕಾರಣ

  ಸದ್ಯ ರಾಮನ ಪಾತ್ರಕ್ಕೆ ಮಹೇಶ್ ಬಾಬು ಹೆಸರು ಕೇಳಿಬರುತ್ತಿದ್ದು, ಸ್ಕ್ರಿಪ್ಟ್ ಕೂಡ ಇಷ್ಟಪಟ್ಟಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಬಾಬು ಅವರಲ್ಲಿರುವ ಮುಗ್ಧತೆಯಿಂದ ರಾಮನ ಪಾತ್ರಕ್ಕೆ ಅವರೇ ಸೂಕ್ತ ಎಂದು ಆಯ್ಕೆ ಮಾಡಿದ್ದಾರಂತೆ. ರಾಮ ಮಹೇಶ್ ಬಾಬುಗೆ ಸೀತೆಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತಾ ಮಾಹಿತಿ ಹೊರಬೀಳಬೇಕಿದೆ.

  English summary
  Tollywood Actor Mahesh Babu likely to play Lord Rama in 3D Ramayana. Hrithik Rroshan playing Ravana in 3D Ramayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X