For Quick Alerts
  ALLOW NOTIFICATIONS  
  For Daily Alerts

  'ಮೈದಾನ್' ಬಿಡುಗಡೆ ದಿನಾಂಕ: ಪೈಪೋಟಿ ಇಲ್ಲದೇ ನಿರಾಳ

  |

  ಅಜಯ್ ದೇವಗನ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಮೈದಾನ್ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಈ ಮೂಲಕ ಭಾರಿ ಕುತೂಹಲದಿಂದ ಕಾಯ್ತಿದ್ದ ಪ್ರೇಕ್ಷಕರ ಸಮಾಧಾನ ಆಗಿದ್ದಾರೆ. ಕ್ರೀಡಾ ಆಧಾರಿತ ಸಿನಿಮಾ ಮೈದಾನ್ 2022 ಜೂನ್ 3 ರಂದು ವರ್ಲ್ಡ್‌ವೈಡ್ ತೆರೆಗೆ ಬರಲಿದೆ.

  ಈ ಕುರಿತು ಅಜಯ್ ದೇವಗನ್ ಟ್ವೀಟ್ ಮಾಡಿದ್ದು, ''ಇಡೀ ಭಾರತೀಯ ಕ್ರೀಡಾಭಿಮಾನಿಗಳು ಕಾಯುತ್ತಿರುವ ಮೈದಾನ್ ಸಿನಿಮಾ ರಿಲೀಸ್ ದಿನಾಂಕ ಪ್ರಕಟವಾಗಿದೆ. ನಿಮ್ಮ ಕ್ಯಾಲೆಂಡರ್‌ನಲ್ಲಿ ದಿನಾಂಕ ಲಾಕ್ ಮಾಡಿಕೊಳ್ಳಿ. 2022 ಜೂನ್ 3ಕ್ಕೆ ಮೈದಾನ್ ನಿಮ್ಮ ಮುಂದೆ'' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

  ಎಸ್‌ಎಸ್‌ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್ಎಸ್‌ಎಸ್‌ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್

  ಈ ಹಿಂದೆ ಮೈದಾನ್ ಚಿತ್ರವನ್ನು ಅಕ್ಟೋಬರ್ 15 ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಎರಡೂ ದಿನ ಮುಂಚಿತವಾಗಿ ಅಂದ್ರೆ ಅಕ್ಟೋಬರ್ 13ಕ್ಕೆ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು. ಆರ್‌ಆರ್‌ಆರ್ ಚಿತ್ರದಲ್ಲಿ ಅಜಯ್ ದೇವಗನ್ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ಇದರಿಂದ ಬೇಸರಗೊಂಡ ಮೈದಾನ್ ನಿರ್ಮಾಪಕ ಬೋನಿ ಕಪೂರ್, ನಿರ್ದೇಶಕ ರಾಜಮೌಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಾದ ಮೇಲೆ ಕೋವಿಡ್ ಎರಡನೇ ಅಲೆಯ ಪರಿಣಾಮ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು.

  ಈಗ ಮೈದಾನ್ ಸಿನಿಮಾ ಹೊಸ ದಿನಾಂಕ ಪ್ರಕಟಿಸಿದೆ. ಆ ಕಡೆ ಆರ್‌ಆರ್‌ಆರ್ ಸಿನಿಮಾ ಇನ್ನು ಬಿಡುಗಡೆ ದಿನಾಂಕ ಘೋಷಣೆ ಮಾಡಿಲ್ಲ. ಸದ್ಯದ ವರದಿಯಂತೆ ಸಂಕ್ರಾಂತಿ ಹಬ್ಬಕ್ಕೆ ರಾಜಮೌಳಿ ಚಿತ್ರ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಈ ಮೂಲಕ ಮೈದಾನ್ ಚಿತ್ರ ಯಾವುದೇ ಪೈಪೋಟಿ ಇಲ್ಲದೇ ನಿರಾಳವಾಗಿ ಥಿಯೇಟರ್ ಬರಬಹುದಾಗಿದೆ.

  ಅಂದ್ಹಾಗೆ, ಮೈದಾನ್ ಚಿತ್ರಕ್ಕೆ ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ್ದು, ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. 1952-62ರವರೆಗೂ ಭಾರತೀಯ ಫುಟ್‌ಬಾಲ್ ತಂಡದ ಕೋಚ್ ಆಗಿದ್ದ ಸೈಯದ್ ಅಬ್ದುಲ್ ರಹೀಮ್ ಅವರ ಜೀವನ ಆಧರಿಸಿ ತಯಾರಿಸಲಾಗಿದೆ. ಅಜಯ್ ದೇವಗನ್ ಈ ಸಿನಿಮಾದಲ್ಲಿ ಪುಟ್ ಬಾಲ್ ಕೋಚ್ ಆಗಿ ನಟಿಸಿದ್ದಾರೆ.

  'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ಕೊನೆಯದಾಗಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದರು. ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸಕ್ಸಸ್ ಆಗಲಿಲ್ಲ. ಇನ್ನು ಅಜಯ್ ದೇವಗನ್ ಅತಿಥಿ ಪಾತ್ರದಲ್ಲಿ ನಟಿಸಿರುವ ಆರ್‌ಆರ್‌ಆರ್, ಸೂರ್ಯವಂಶಿ ಹಾಗೂ ಗಂಗೂಬಾಯಿ ಕಥಿಯವಾಡಿ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. 'ಮೇಡೇ' ಚಿತ್ರೀಕರಣ ಮಾಡ್ತಿದೆ. 'ದೃಶ್ಯಂ 2' ಶುರುವಾಗಿದೆ.

  English summary
  Bollywood Actor Ajay Devgan Starrer Maidaan movie Confirmed to hit big screens on June 3rd 2022.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X