For Quick Alerts
  ALLOW NOTIFICATIONS  
  For Daily Alerts

  'ಸೀತಾ ಪಾತ್ರಕ್ಕೆ ಕಂಗನಾ ಬಿಟ್ಟು ಬೇರೆ ಆಯ್ಕೆ ನೋಡಲೇ ಇಲ್ಲ'

  |

  'ತಲೈವಿ' ಸಿನಿಮಾ ಬಿಡುಗಡೆಯಾದ ಬಳಿಕ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಂದು ಮೆಗಾ ಸಿನಿಮಾ ಘೋಷಣೆ ಮಾಡಿದ್ದಾರೆ. ಸೀತೆಯ ಕಥೆ ಆಧರಿಸಿ ಮೂಡಿ ಬರುತ್ತಿರುವ 'ಸೀತಾ' ಚಿತ್ರದಲ್ಲಿ ಕಂಗನಾ ರಣಾವತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸುದ್ದಿಯನ್ನು ಸ್ವತಃ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಖುದ್ದು ಕಂಗನಾ ಸಹ ಸೀತಾ ಸಿನಿಮಾ ಮಾಡುತ್ತಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

  'ಸೀತಾ' ಪ್ರಾಜೆಕ್ಟ್‌ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ಭಾರಿ ದೊಡ್ಡ ಮಟ್ಟದಲ್ಲಿ ತಯಾರಾಗಲಿರುವ ಈ ಚಿತ್ರದಲ್ಲಿ ಸೀತಾ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಕುತೂಹಲ ಕಾಡ್ತಿತ್ತು. ಈ ನಡುವೆ ಕರೀನಾ ಕಪೂರ್ ಖಾನ್ ಹೆಸರು ಬಹುತೇಕ ಅಂತಿಮವಾಗಿದೆ ಎನ್ನುವ ಸುದ್ದಿಗಳು ವರದಿಯಾಗಿತ್ತು. ಸೀತಾ ಪಾತ್ರಕ್ಕಾಗಿ ಕರೀನಾ ಭಾರಿ ಸಂಭಾವನೆಯ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಯಿತು. ಕರೀನಾ ಕಪೂರ್ ಹೆಸರು ಮಾತ್ರವಲ್ಲ ಮತ್ತೊಬ್ಬ ನಟಿ ದೀಪಿಕಾ ಪಡುಕೋಣೆಯ ಹೆಸರು ಸಹ ಸೀತಾ ಪಾತ್ರಕ್ಕೆ ಕೇಳಿ ಬಂತು. ಆದ್ರೀಗ, ಅಂತಿಮವಾಗಿ ಕಂಗನಾ ರಣಾವತ್ 'ಸೀತಾ' ಎಂದು ಮಾಹಿತಿ ಹೊರಬಿದ್ದಿದೆ. ಮುಂದೆ ಓದಿ...

  ಸ್ಕ್ರಿಪ್ಟ್ ಮಾಡುವಾಗಲೇ ಕಂಗನಾ ಫಿಕ್ಸ್

  ಸ್ಕ್ರಿಪ್ಟ್ ಮಾಡುವಾಗಲೇ ಕಂಗನಾ ಫಿಕ್ಸ್

  ಸೀತಾ ಚಿತ್ರವನ್ನು ಅಲೌಕಿಕ್ ದೇಸಾಯಿ ನಿರ್ದೇಶಿಸುತ್ತಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮತ್ತು ಮನೋಜ್ ಮುಂಟಶೀರ್ ಕಥೆ ಮತ್ತು ಚಿತ್ರಕಥೆ ರಚಿಸುತ್ತಿದ್ದು, ನಿರ್ದೇಶಕ ಅಲೌಕಿಕ್ ದೇಸಾಯಿ ಸಹ ಕೈ ಜೋಡಿಸಿದ್ದಾರೆ. ಸಲೋನಿ ಶರ್ಮಾ ಮತ್ತು ಅಂಶಿತಾ ದೇಸಾಯಿ ನಿರ್ಮಿಸುತ್ತಿದ್ದಾರೆ. ಸೀತಾ ಪಾತ್ರಕ್ಕೆ ಕಂಗನಾ ರಣಾವತ್ ಮೊದಲ ಆಯ್ಕೆಯಲ್ಲ ಎಂಬ ವದಂತಿ ಬಗ್ಗೆ ಮನೋಜ್ ಮುಂಟಶೀರ್ ಪ್ರತಿಕ್ರಿಯಿಸಿದ್ದು, ''ಸೀತಾ ಪಾತ್ರ ಸೃಷ್ಟಿಸಿದಾಗಲೇ ಕಂಗನಾ ರಣಾವತ್ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರನ್ನು ಬಿಟ್ಟು ಬೇರೆ ಯಾರನ್ನೂ ಈ ಪಾತ್ರಕ್ಕೆ ಊಹೆ ಮಾಡಲು ಸಾಧ್ಯವಿಲ್ಲ'' ಎಂದಿದ್ದಾರೆ.

  ಸೀತೆ ಪಾತ್ರಕ್ಕೆ ಅತೀ ಹೆಚ್ಚು ಸಂಭಾವನೆ ಕೇಳಿ ಟ್ರೋಲ್ ಆದ ಬಗ್ಗೆ ಕೊನೆಗೂ ಮೌನ ಮುರಿದ ಕರೀನಾಸೀತೆ ಪಾತ್ರಕ್ಕೆ ಅತೀ ಹೆಚ್ಚು ಸಂಭಾವನೆ ಕೇಳಿ ಟ್ರೋಲ್ ಆದ ಬಗ್ಗೆ ಕೊನೆಗೂ ಮೌನ ಮುರಿದ ಕರೀನಾ

  ಸೀತಾ ಪಾತ್ರಕ್ಕೆ ಕಂಗನಾ ಅವರೇ ಸೂಕ್ತ

  ಸೀತಾ ಪಾತ್ರಕ್ಕೆ ಕಂಗನಾ ಅವರೇ ಸೂಕ್ತ

  "ಕಂಗನಾ ರಣಾವತ್ ಸೀತಾ ಪಾತ್ರದಲ್ಲಿ ನಟಿಸುತ್ತಿರುವುದು ನನಗೆ ರೋಮಾಂಚನ ಉಂಟು ಮಾಡಿದೆ. ಸ್ಕ್ರಿಪ್ಟ್ ಮಾಡುವಾಗಲೇ ಕಂಗನಾ ನಮ್ಮ ಮೊದಲ ಆದ್ಯತೆಯಾಗಿದ್ದರು. ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಅಪ್ರೋಚ್ ಮಾಡಲಾಗಿದೆ ಎನ್ನುವುದು ಕೇವಲ ವದಂತಿ. ಅವು ನಿಜವಲ್ಲ. ನಾವು ಸ್ಕೆಚ್ ಮಾಡಿರುವ ಸೀತಾದೇವಿ ಪಾತ್ರ ವಿವಿಧ ಛಾಯೆಗಳನ್ನು ಹೊಂದಿದೆ. ಅದಕ್ಕೆ ಕಂಗನಾ ರಣಾವತ್ ಅವರೇ ಅತ್ಯುತ್ತಮ ಪಾತ್ರಧಾರಿ'' ಎಂದು ಬರಹಗಾರ ಮನೋಜ್ ಮುಂಟಶೀರ್ ಹೇಳಿದ್ದಾರೆ.

  ಸಣ್ಣ ವಯಸ್ಸಿನ ಸೀತಾ ಇರ್ತಾರೆ

  ಸಣ್ಣ ವಯಸ್ಸಿನ ಸೀತಾ ಇರ್ತಾರೆ

  'ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಪ್ರೇಕ್ಷಕರು ಒಮ್ಮೆ ನೋಡಿದರೆ ಕಂಗನಾ ಹೊರತುಪಡಿಸಿ ಬೇರೆ ಯಾರನ್ನು ಸೀತಾ ಪಾತ್ರದಲ್ಲಿ ಊಹಿಸಿಕೊಳ್ಳಲು ಸಹ ಸಾಧ್ಯವಾಗುವುದಿಲ್ಲ' ಎಂದು ಮುಂಟಶೀರ್ ಅಭಿಪ್ರಾಯ ವ್ಯಕ್ತಪಡಿಸಿದರು. 'ನಾವು ಸೀತಾ ಪಾತ್ರಕ್ಕೆ ಕಂಗನಾ ಬಿಟ್ಟು ಬೇರೆ ಯಾರನ್ನು ಸಂಪರ್ಕಿಸಿಲ್ಲ. ಇನ್ನು ಸಣ್ಣ ವಯಸ್ಸಿನ ಸೀತಾ ಪಾತ್ರಕ್ಕಾಗಿ ನವ ನಟಿಯನ್ನು ಹುಡುಕಿದ್ದೇವೆ. ಇದು ಪೂರ್ತಿ ರಾಮಾಯಣ ಕಥೆ ಹೊಂದಿಲ್ಲ. ಶ್ರೀರಾಮನನ್ನು ಮದುವೆಯಾಗುವುದಕ್ಕೂ ಮುಂಚೆ ಸೀತೆಯ ಪಾತ್ರದಿಂದ ಕಥೆ ಆರಂಭವಾಗಲಿದ್ದು, ಯುವ ನಟಿಯೊಬ್ಬರು ಇರಲಿದ್ದಾರೆ' ಎಂದು ಮುಂಟಶೀರ್ ಮಾಹಿತಿ ನೀಡಿದ್ದಾರೆ.

  ಕರೀನಾ ಬದಲು ಸೀತೆ ಪಾತ್ರಕ್ಕೆ ಆಯ್ಕೆಯಾದ ನಟಿ ಕಂಗನಾ: ಚಿತ್ರದ ಬಗ್ಗೆ ಹೇಳಿದ್ದೇನು?ಕರೀನಾ ಬದಲು ಸೀತೆ ಪಾತ್ರಕ್ಕೆ ಆಯ್ಕೆಯಾದ ನಟಿ ಕಂಗನಾ: ಚಿತ್ರದ ಬಗ್ಗೆ ಹೇಳಿದ್ದೇನು?

  ಕಂಗನಾ ಸ್ವಾಭಾವಿಕವಾಗಿ ಸೀತೆ ವ್ಯಕ್ತಿತ್ವ ಹೊಂದಿದ್ದಾರೆ

  ಕಂಗನಾ ಸ್ವಾಭಾವಿಕವಾಗಿ ಸೀತೆ ವ್ಯಕ್ತಿತ್ವ ಹೊಂದಿದ್ದಾರೆ

  ಇನ್ನು ಸೀತಾ ಪಾತ್ರಕ್ಕೆ ಕಂಗನಾ ಸೂಕ್ತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮನೋಜ್, ''ಹೆಚ್ಚಿನ ನಟಿಯರು ಸೀತೆಯ ಡಿಎನ್‌ಎ ಎನ್ನಬಹುದು. ಆದರೆ, ಕಂಗನಾ ಅವರೇ ಸೀತೆ. ಅವರ ಸ್ವಾಭಾವಿಕವಾಗಿ ಸೀತೆಯ ವ್ಯಕ್ತಿತ್ವಕ್ಕೆ ಹತ್ತಿರವಿದ್ದಾರೆ. ನನ್ನ ಸೀತಾ ನಾಚಿಕೆ ಸ್ವಭಾವದವಳಲ್ಲ, ಅಂಜುಬುರುಕಳಲ್ಲ ಅಥವಾ ದುರ್ಬಲಳಲ್ಲ. ಅವಳು ನಿಲುವು ತೆಗೆದುಕೊಳ್ಳುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ. ಅದೇ ರೀತಿ ಕಂಗನಾಗೆ ಬಲವಾದ ವ್ಯಕ್ತಿತ್ವವಿದೆ'' ಎಂದರು.

  ಕಂಗನಾ ಹೆಸರು ಸೂಚಿಸಿದ್ದು ವಿಜಯೇಂದ್ರ ಪ್ರಸಾದ್

  ಕಂಗನಾ ಹೆಸರು ಸೂಚಿಸಿದ್ದು ವಿಜಯೇಂದ್ರ ಪ್ರಸಾದ್

  ಸೀತೆ ಪಾತ್ರಕ್ಕಾಗಿ ಸೂಕ್ತ ನಟಿಯನ್ನು ಹುಡುಕಿದ್ದಾಗ ಕಂಗನಾ ರಣಾವತ್ ಹೆಸರು ಸೂಚಿಸಿದ್ದು ವಿಜಯೇಂದ್ರ ಪ್ರಸಾದ್ ಎಂದು ಹೇಳಲಾಗಿದೆ. ತಲೈವಿ ಚಿತ್ರಕ್ಕೂ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಮಾಡಿದ್ದರು. ಕಂಗನಾ ಜೊತೆ ಶ್ರೀರಾಮನ ಪಾತ್ರ ಯಾರು ಮಾಡ್ತಾರೆ ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

  English summary
  Sita Movie Writer Manoj muntashir Reveals 'We Never Approached Other Actress Except Kangana For Sita'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X