For Quick Alerts
  ALLOW NOTIFICATIONS  
  For Daily Alerts

  ಆಭರಣ ಜಾಹೀರಾತಿನಲ್ಲಿ ಕರೀನಾ ಕಪೂರ್: ಬಿಂದಿ ಧರಿಸಿಲ್ಲವೆಂದು ಟ್ರೋಲ್

  |

  ಸಿನಿಮಾ ತಾರೆಗಳಿಗೂ ಮತ್ತು ವಿವಾದಗಳಿಗೂ ಬಿಡಿಸಲಾಗದ ನಂಟಿದೆ. ಅವರ ಸಾರ್ವಜನಿಕ ನಡವಳಿಕೆ ಇರಬಹುದು ಅಥವಾ ಅವರು ಮಾತನಾಡುವ ವಿಚಾರಗಳು ಇರಬಹುದು ಪ್ರತಿಯೊಂದರಿಂದ ಅವರು ವಿವಾದಕ್ಕೆ ಗುರಿಯಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಜಾಹೀರಾತುಗಳಿಗೂ ಕೂಡ ವಿಸ್ತರಿಸಿದೆ.

  ಅಮೀರ್ ಖಾನ್ ಅಭಿನಯದ CEAT ಜಾಹೀರಾತು ಆಗಬಹುದು, ವಿವಾದಿತ ಜಾಹೀರಾತು ತನಿಷ್ಕ್ ಗೋಲ್ಡ್ ಆಗಬಹುದು ತದನಂತರ ಇತ್ತೀಚೆಗೆ ಫ್ಯಾಬ್ ಇಂಡಿಯಾ 'ಜಶ್ನ್-ಎ-ರಿವಾಜ್' ವಿವಿಧ ಕಾರಣಗಳಿಗೆ ನೆಟ್ಟಿಗರನ್ನು ಕೆರಳಿಸಿದ್ದರು. ಕೊನೆಗೂ ಟ್ರೋಲ್ ಗಳಿಗೆ ಭಯಬಿದ್ದು ತನಿಷ್ಕ್ ಮತ್ತು ಫ್ಯಾಬ್ ಇಂಡಿಯಾ ತಮ್ಮ ಜಾಹೀರಾತುಗಳನ್ನು ಹಿಂದಕ್ಕೆ ಪಡೆದವು. ಈಗ ಮತ್ತೊಂದು ಇಂತಹದೇ ಜಾಹೀರಾತು ನೆಟ್ಟಿಗರ ವಿರೋಧಕ್ಕೆ ಕಾರಣವಾಗಿದೆ ಅದುವೇ ಮಲಬಾರ್ ಗೋಲ್ಡ್ ಕಂಪನಿಯ ಕರೀನಾ ಕಪೂರ್ ಅಭಿನಯದ ಅಕ್ಷಯ ತೃತೀಯ ಜಾಹೀರಾತು.

  ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಆಭರಣ ಬ್ರ್ಯಾಂಡ್ ತನಿಷ್ಕ್ ತನ್ನ ಜಾಹೀರಾತಿನಲ್ಲಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದೆ ಎಂದು ಕೆಲವು ನೆಟ್ಟಿಜನರು ಆರೋಪಿಸಿದ್ದರು. ನಂತರ ಆ ಜಾಹೀರಾತನ್ನು ಹಿಂತೆಗೆದುಕೊಳ್ಳಲಾಯಿತು. ಈಗ ಕರೀನಾ ಕಪೂರ್ ಅಭಿನಯದ ಮಲಬಾರ್ ಗೋಲ್ಡ್ ಜಾಹೀರಾತು ಸಹ ಚರ್ಚೆಗೆ ಕಾರಣವಾಗಿದೆ.

  ಅಕ್ಷಯ ತೃತೀಯ ಬರುತ್ತಿರುವುದರಿಂದ ಸಹಜವಾಗಿಯೇ ಎಲ್ಲಾ ಗೋಲ್ಡ್ ಕಂಪನಿಗಳು ದೊಡ್ಡಮಟ್ಟದಲ್ಲಿ ಈಗ ಜಾಹೀರಾತುಗಳನ್ನು ನೀಡುತ್ತಿವೆ. ಭಾರತದಲ್ಲಿ ಅತ್ಯಂತ ದೊಡ್ಡ ಗೋಲ್ಡ್ ಮಾರಾಟಗಾರರಲ್ಲಿ ಒಬ್ಬರಾದ ಮಲಬಾರ್ ಆಭರಣಗಳ ಬ್ರ್ಯಾಂಡ್ ಮಲಬಾರ್ ಗೋಲ್ಡ್ ಕೂಡ ತನ್ನ ಅಕ್ಷಯ ತೃತೀಯ ಜಾಹೀರಾತನ್ನು ಬಿಡುಗಡೆ ಮಾಡಿದೆ. ಮಲಬಾರ್ ಗೋಲ್ಡ್ ಕಂಪನಿಗೆ ಕರೀನಾ ಕಪೂರ್ ಖಾನ್ ಮೊದಲಿನಿಂದಲೂ ರಾಯಭಾರಿಯಾಗಿದ್ದಾರೆ. ಇತ್ತೀಚೆಗೆ ಕರೀನಾ ಕಪೂರ್ ಮುಖಪುಟದಲ್ಲಿ ಇರುವಂತಹ ಅಕ್ಷಯ ತೃತಿಯ ಜಾಹೀರಾತೊಂದನ್ನು ಮಲಬಾರ್ ಗೋಲ್ಡ್ ಬಿಡುಗಡೆ ಮಾಡಿದೆ. ಈ ಅಕ್ಷಯ ತೃತೀಯ ಜಾಹೀರಾತಿನಲ್ಲಿ ಕರೀನಾ ಕಪೂರ್ ಖಾನ್ ಬಿಂದಿ ಇಲ್ಲದೆ ಕಾಣಿಸಿಕೊಂಡಿದ್ದರಿಂದ ಮಲಬಾರ್ ಗೋಲ್ಡ್ ಆಭರಣಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನ ಆರಂಭವಾಗಿದೆ.

  Malabar gold advertisement features Kareena Kapoor is massively trolled on online

  ಇತ್ತೀಚೆಗೆ ಸೋಶಿಯಲ್ ಮೀಡಿಯಾ ಗಳು ವಿಶೇಷವಾಗಿ ಟ್ವಿಟರ್ ವೇದಿಕೆಯಿಂದ ಹೊರಡುವ ಬಹಿಷ್ಕಾರದ ಮಾತುಗಳು ಎಷ್ಟು ಬಲವಾಗಿರುತ್ತದೆ ಎಂದರೆ ಇದಕ್ಕೆ ತಾಜಾ ಉದಾಹರಣೆ ತಂಬಾಕು ತಂಬಾಕು ಕಂಪನಿಯೊಂದಕ್ಕೆ ಜಾಹೀರಾತಿನಲ್ಲಿ ಅಭಿನಯಿಸಿದ ಅಕ್ಷಯ್ ಕುಮಾರ್ ಇದಕ್ಕಾಗಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಪಾನ್ ಮಸಾಲಾ ಬ್ರಾಂಡ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ನೆಟ್ಟಿಗರು ಅವರನ್ನು ಟೀಕಿಸಿದ ನಂತರ ಅಕ್ಷಯ್ ಕುಮಾರ್ ಸಾರ್ವಜನಿಕ ಕ್ಷಮೆಯಾಚಿಸಿದಾಗ ನಾವೆಲ್ಲರೂ ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ನೋಡಿದ್ದೇವೆ. ಈಗ ಇದರ ಸರದಿ ಶುಕ್ರವಾರ, ನಟಿ ಕರೀನಾ ಕಪೂರ್ ಖಾನ್ ಅವರು ಮಲಬಾರ್ ಗೋಲ್ಡ್ ತಮ್ಮ ಅಕ್ಷಯ ತೃತಿಯ ವಿಶೇಷ ಜಾಹೀರಾತನ್ನು ಬಿಡುಗಡೆ ಮಾಡಿದ ನಂತರ ಟ್ರೋಲಿಂಗ್‌ಗೆ ಗುರಿಯಾಗುತ್ತಿದೆ.

  ಅಕ್ಷಯ ತೃತೀಯ ಜಾಹೀರಾತಿನಲ್ಲಿ, ಕರೀನಾ ಗುಲಾಬಿ ಬಣ್ಣದ ಲೆಹಂಗಾವನ್ನು ಧರಿಸಿ, ವಿಸ್ತಾರವಾದ ಡೈಮಂಡ್ ನೆಕ್‌ಪೀಸ್, ದೊಡ್ಡ ಕಿವಿಯೋಲೆಗಳು ಮತ್ತು ಮಾಂಗ್ ಟಿಕಾವನ್ನು ಧರಿಸಿದ್ದಾರೆ. ಆದರೆ ಎಲ್ಲರ ಗಮನ ಸೆಳೆದಿದ್ದು ಕರೀನಾ ಹಣೆಯಲ್ಲಿ ಬಿಂದಿ ಇಲ್ಲದಿರುವುದು. ಹಿಂದೂ ವಿವಾಹಿತ ಮಹಿಳೆಯನ್ನು ಸರಿಯಾಗಿ ಚಿತ್ರಿಸದೆ ಹಬ್ಬಕ್ಕೆ ಬಂಗಾರ ಖರೀದಿ ಮಾಡುವಂತೆ, ಹಿಂದೂ ಹಬ್ಬವನ್ನು ಪ್ರಚಾರ ಮಾಡಿದ್ದಕ್ಕಾಗಿ ನೆಟಿಜನ್‌ಗಳು ಬ್ರ್ಯಾಂಡ್ ಅನ್ನು ದೂಷಿಸಿದ್ದಾರೆ.

  English summary
  Malabar gold advertisement features Kareena Kapoor is massively trolled on online. In this advertisement related to Akshaya Tritiya, Kareena is not wearing bindi on her forehead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X