For Quick Alerts
  ALLOW NOTIFICATIONS  
  For Daily Alerts

  ಡೈವೋರ್ಸ್ ಪಡೆಯುವ ಹಿಂದಿನ ರಾತ್ರಿಯೂ ಬೇಡ ಎಂದಿದ್ದರು: ಮಲೈಕಾ ಅರೋರಾ

  |

  ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ 2016ರಲ್ಲಿ ತಾವಿಬ್ಬರೂ ವೈವಾಹಿಕ ಜೀವನ ಕಡಿದುಕೊಂಡು ಬೇರೆಯಾಗುವುದಾಗಿ ಘೋಷಿಸಿದಾಗ ಇಡೀ ಬಾಲಿವುಡ್ ಆಘಾತಗೊಂಡಿತ್ತು. ಅದರ ಬೆನ್ನಲ್ಲೇ ವಿಚ್ಛೇದನಕ್ಕೆ ಕಾರಣವಾದ ಸಂಗತಿಗಳ ಸುತ್ತಲೂ ಊಹಾಪೋಹಗಳು ಹುಟ್ಟಿಕೊಂಡಿದ್ದವು.

  ಮಲೈಕಾ ಅವರ ವಿವಾಹೇತರ ಸಂಬಂಧವನ್ನು ಅರ್ಬಾಜ್ ಕುಟುಂಬ ವಿರೋಧಿಸಿತ್ತು ಎಂದು ಹೇಳಲಾಗಿತ್ತು. ಇದೆಲ್ಲ ಸುಳ್ಳು ಮತ್ತು ಕಪೋಲಕಲ್ಪಿತ ಮಾಹಿತಿ ಎಂದು ಆ ಕುಟುಂಬ ತಳ್ಳಿ ಹಾಕಿತ್ತು. 2017ರ ಮೇನಲ್ಲಿ ಅವರ ವಿಚ್ಛೇದನಕ್ಕೆ ಕಾನೂನಿನ ಅಂಕಿತ ದೊರಕಿತ್ತು.

  ತನಗಿಂತ 12 ವರ್ಷ ಕಿರಿಯ ಪ್ರಿಯಕರನ ಜೊತೆ ಮಲೈಕಾ ಹೊಸ ವರ್ಷ ಸಂಭ್ರಮ.!

  1998ರಲ್ಲಿ ಈ ಜೋಡಿ ಮದುವೆಯಾಗಿತ್ತು. ಸುಮಾರು 18 ವರ್ಷ ಜತೆಗೆ ಸಂಸಾರ ನಡೆಸಿದ ಬಳಿಕ ಇಬ್ಬರೂ ದೂರಾಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆದರೆ ಅರ್ಬಾಜ್ ಮತ್ತು ಮಲೈಕಾ ಇಬ್ಬರೂ ತಮ್ಮ ವಿಚ್ಛೇದನದ ಕುರಿತು ಹೆಚ್ಚಿನ ವಿವರಗಳನ್ನು ನೀಡುವ ಉಸಾಬರಿಗೆ ಹೋಗಿರಲಿಲ್ಲ. ಇತ್ತೀಚೆಗೆ ಕರೀನಾ ಕಪೂರ್ ಅವರ ರೇಡಿಯೋ ಶೋದಲ್ಲಿ ಮಲೈಕಾ ಕೆಲವು ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

  ಕರೀನಾ ಕಪೂರ್ ಕಾರ್ಯಕ್ರಮ

  ಕರೀನಾ ಕಪೂರ್ ಕಾರ್ಯಕ್ರಮ

  ಕರೀನಾ ಕಪೂರ್ ನಡೆಸಿಕೊಡುವ 'ವಾಟ್ ವಿಮೆನ್ ವಾಂಟ್' ರೇಡಿಯೋ ಶೋದಲ್ಲಿ ಮಲೈಕಾ ಅರೋರಾ, ತಮ್ಮ ತೀರ್ಮಾನದ ಬಗ್ಗೆ ಮತ್ತೆ ಆಲೋಚನೆ ಮಾಡುವಂತೆ ಕುಟುಂಬದವರು ಮನವಿ ಮಾಡಿದ್ದರು. ಡೈವೋರ್ಸ್ ಸಿಗುವ ಹಿಂದಿನ ರಾತ್ರಿ ಕೂಡ ಅದರ ಬಗ್ಗೆ ಯೋಚಿಸುವಂತೆ ಹೇಳಿದ್ದರು ಎಂದು ತಿಳಿಸಿದ್ದಾರೆ.

  ಯೋಚನೆ ಮಾಡು ಎಂದೇ ಹೇಳುತ್ತಾರೆ

  ಯೋಚನೆ ಮಾಡು ಎಂದೇ ಹೇಳುತ್ತಾರೆ

  'ನನಗನ್ನಿಸುತ್ತದೆ, ಪ್ರತಿಯೊಬ್ಬರ ಮೊದಲ ಪ್ರತಿಕ್ರಿಯೆಯೂ 'ಅದನ್ನು ಮಾಡಬೇಡ' ಎಂದೇ ಆಗಿರುತ್ತದೆ. 'ಹೌದು ನೀನು ಇದರಲ್ಲಿ ಮುಂದುವರಿ' ಎಂದು ಯಾರೂ ಹೇಳುವುದಿಲ್ಲ. ಯಾವುದೇ ಒಂದು ನಿರ್ಧಾರಕ್ಕೆ ಬರುವ ಮುನ್ನ ಯೋಚನೆ ಮಾಡು ಎಂದೇ ಪ್ರತಿಯೊಬ್ಬರೂ ಹೇಳುವ ಮೊದಲ ಸಂಗತಿ. ನಾನೂ ಇದೇ ರೀತಿಯ ಸನ್ನಿವೇಶವನ್ನು ಎದುರಿಸಿದ್ದೆ' ಎಂದು ಹೇಳಿದ್ದಾರೆ.

  'ಮುದುಕಿ' ಎಂದು ಮಲೈಕಾಗೆ ಮಹಾ ಮಂಗಳಾರತಿ ಮಾಡಿದ ಟ್ರೋಲಿಗರು

  ಜತೆಯಲ್ಲಿದ್ದವರು ಪದೇ ಪದೇ ಕೇಳುತ್ತಾರೆ

  ಜತೆಯಲ್ಲಿದ್ದವರು ಪದೇ ಪದೇ ಕೇಳುತ್ತಾರೆ

  'ನಾನು ವಿಚ್ಛೇದನ ಪಡೆದುಕೊಳ್ಳುವ ಹಿಂದಿನ ರಾತ್ರಿ ಕೂಡ ನನ್ನ ಕುಟುಂಬದವರು ಜತೆಯಲ್ಲಿ ಕುಳಿತು ನನ್ನನ್ನು ಮತ್ತೊಮ್ಮೆ ಕೇಳಿದ್ದರು. ನಿಜಕ್ಕೂ ನೀನು ಖಚಿತವಾಗಿದ್ದೀಯಾ? ನಿನ್ನ ನಿರ್ಧಾರದ ಬಗ್ಗೆ ಶೇ 100ರಷ್ಟು ದೃಢವಾಗಿದ್ದೀಯಾ? ಎಂದು ಕೇಳಿದ್ದರು. ಇದನ್ನು ನಾನು ಹಲವು ಬಾರಿ ಕೇಳಿದ್ದೆ ಕೂಡ. ನಮ್ಮ ಬಗ್ಗೆ ಚಿಂತಿಸುವ, ಕಾಳಜಿ ವಹಿಸುವ ಇಂತಹ ಜನರು ಖಂಡಿತವಾಗಿಯೂ ಅದನ್ನು ಕೇಳುತ್ತಾರೆ' ಎಂದಿದ್ದಾರೆ.

  ಒಬ್ಬರ ಮೇಲೊಬ್ಬರು ತಪ್ಪು ಹೊರಿಸುವುದು ಸುಲಭ

  ಒಬ್ಬರ ಮೇಲೊಬ್ಬರು ತಪ್ಪು ಹೊರಿಸುವುದು ಸುಲಭ

  'ಬೇರೆಯಾಗುವುದು ಸುಲಭವಾಗಿರಲಿಲ್ಲ. ಜೀವನದಲ್ಲಿ ಇಷ್ಟುದೊಡ್ಡ ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿರಲಿಲ್ಲ. ಕೊನೆಯಲ್ಲಿ ಯಾರಾದರೂ ಒಬ್ಬರ ಮೇಲೆ ಅಪವಾದ ಹೊರಿಸಲಾಗುತ್ತದೆ. ಯಾರಕಡೆಗಾದರೂ ಬೆರಳು ತೋರಿಸಬೇಕಾಗುತ್ತದೆ. ಈ ರೀತಿ ಮಾಡುವುದು ಮಾನವ ಸಹಜ ಗುಣ ಎನಿಸುತ್ತದೆ' ಎಂದು ಬೇರ್ಪಡುವ ನಿರ್ಧಾರದ ಕುರಿತು ಮಾತನಾಡಿದ್ದಾರೆ.

  ಕ್ಯಾಮರಾಗೆ ಪೋಸ್ ನೀಡುವ ಭರದಲ್ಲಿ ಜಾರಿದ ಈ ನಟಿಯ ಡ್ರೆಸ್: ನೆಟ್ಟಿಗರಿಂದ ಟ್ರೋಲ್

  ಜತೆಯಲ್ಲಿದ್ದವರಿಗೂ ತೊಂದರೆ

  ಜತೆಯಲ್ಲಿದ್ದವರಿಗೂ ತೊಂದರೆ

  'ನಾವು ಪರಸ್ಪರ ಉತ್ತಮ ವ್ಯಕ್ತಿಗಳಾಗುವ ಸಲುವಾಗಿ ನಮ್ಮದೇ ಬೇರೆ ದಾರಿಗಳಲ್ಲಿ ಸಾಗುವುದು ಒಳಿತು ಎಂದು ನಿರ್ಧರಿಸಿದೆವು. ಏಕೆಂದರೆ ನಾವಿಬ್ಬರೂ ಒಬ್ಬರನ್ನೊಬ್ಬರು ಅತಿಯಾಗಿ ನೆಮ್ಮದಿ ಹಾಳುಮಾಡುವ ಸನ್ನಿವೇಶದಲ್ಲಿದ್ದೆವು. ಇದು ನಮ್ಮ ಸುತ್ತಲೂ ಬದುಕುತ್ತಿದ್ದ ಪ್ರತಿಯೊಬ್ಬರ ಜೀವನಕ್ಕೂ ತೊಂದರೆಯುಂಟುಮಾಡುತ್ತಿತ್ತು' ಎಂದು ಹೇಳಿದ್ದಾರೆ.

  ಕಿರಿಯ ಅರ್ಜುನ್ ಜತೆ ಮಲೈಕಾ ಸುತ್ತಾಟ

  ಕಿರಿಯ ಅರ್ಜುನ್ ಜತೆ ಮಲೈಕಾ ಸುತ್ತಾಟ

  ಅರ್ಬಾಜ್ ಜತೆಗೆ ಸಂಬಂಧ ಕಡಿದುಕೊಂಡ 45ರ ಮಲೈಕಾ ತಮಗಂತಲೂ ಹನ್ನೊಂದು ವರ್ಷ ಚಿಕ್ಕವರಾದ ಅರ್ಜುನ್ ಕಪೂರ್ ಜತೆಗೆ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮಿಬ್ಬರ ಪ್ರೀತಿಯ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅರ್ಬಾಜ್ ಜತೆಗೆ ಸಂಸಾರ ನಡೆಸುವಾಗಲೇ ಮಲೈಕಾ ಮತ್ತು ಅರ್ಜುನ್ ಕಪೂರ್ ಸಂಬಂಧ ಬಿಟೌನ್‌ನಲ್ಲಿ ಸದ್ದು ಮಾಡಿತ್ತು. ವಯಸ್ಸಿನ ಅಂತರದ ಕಾರಣಕ್ಕೆ ತೀವ್ರ ಟೀಕೆ ಒಳಗಾದರೂ ಇಬ್ಬರೂ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

  English summary
  Bollywood actress Malaika Arora has shared details of her divorce from Arbaaz Khan. She said that family asked her to reconsider it again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X