»   » ವಿವಾದದಲ್ಲಿ ಮಲ್ಲಿಕಾ ಶೆರಾವತ್ 'ಡರ್ಟಿ' ಪೋಸ್ಟರ್

ವಿವಾದದಲ್ಲಿ ಮಲ್ಲಿಕಾ ಶೆರಾವತ್ 'ಡರ್ಟಿ' ಪೋಸ್ಟರ್

Posted By:
Subscribe to Filmibeat Kannada

ಚಿತ್ರರಂಗಕ್ಕೂ ವಿವಾದಗಳಿಗೂ ಬಿಡಿಸಲಾರದ ನಂಟು ಅಂಟಿಕೊಂಡಿದೆ. ಇನ್ನೇನು ಚಿತ್ರ ಬಿಡುಗಡೆಯಾಗಬೇಕು ಅನ್ನುವಷ್ಟರಲ್ಲಿ ಒಂದು ವಿವಾದ ಹುಟ್ಟಿಕೊಳ್ಳುತ್ತದೆ. ಅದರಿಂದ ಚಿತ್ರಕ್ಕೆ ಬಿಟ್ಟಿ ಪ್ರಚಾರ ಸಿಕ್ಕುತ್ತದೆ.

ಈಗ ಅಂತಹದ್ದೇ ಒಂದು ವಿವಾದ ಸೆಕ್ಸಿ ಮೈಮಾಟದಿಂದ ಪಡ್ಡೆಗಳನ್ನು ಹಾಫ್ ಮರ್ಡರ್ ಮಾಡಿರುವ ತಾರೆ ಮಲ್ಲಿಕಾ ಶೆರಾವರ್ ಗುರಿಯಾಗಿದ್ದಾರೆ. ಅವರ ಅಭಿನಯದ 'ಡರ್ಟಿ ಪೊಲಿಟಿಕ್ಸ್' ಚಿತ್ರದ ಪೋಸ್ಟರ್ ಗೆ ವಿವಾದದ ಕಲೆ ಅಂಟಿಕೊಂಡಿದೆ. [ಮಲ್ಲಿಕಾ ನಡುರಾತ್ರಿ ಪ್ರೋಗ್ರಾಂಗೆ 1.5 ಕೋಟಿ]


ಈ ಚಿತ್ರದ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಅದರಲ್ಲಿ ಮಲ್ಲಿಕಾ ಶೆರಾವತ್ ಅರೆನಗ್ನ ಸ್ಥಿತಿಯಲ್ಲಿ ತಮ್ಮ ಮೈಗೆ ತ್ರಿವರ್ಣ ಧ್ವಜವನ್ನು ಸುತ್ತಿಕೊಂಡಿದ್ದಾರೆ. ಅಂಬಾಸಿಡರ್ ಕಾರು, ಹಿನ್ನೆಲೆಯಲ್ಲಿ ರಾಜಸ್ತಾನ ವಿಧಾನಸಭೆಯನ್ನೂ ತೋರಿಸಲಾಗಿದೆ. ಈ ಪೋಸ್ಟರ್ ಈಗ ಬಾಲಿವುಡ್ ನಲ್ಲಿ ಚರ್ಚಾರ್ಹ ವಿಷಯವಾಗಿದೆ.

ಮಲ್ಲಿಕಾ ಶೆರಾವತ್ ಅವರು ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬ ಟೀಕೆಗೂ ಗುರಿಯಾಗಿದ್ದಾರೆ. ಮಲ್ಲಿಕಾ ಶೆರಾವತ್ ಕೈಯಲ್ಲಿ ಸಿಡಿ ಹಿಡಿದು ಅಂಬಾಸಿಡರ್ ಕಾರಿನ ಮೇಲೆ ಕುಳಿತಿರುವ ಪೋಸ್ಟರ್ ಬಾಲಿವುಡ್ ನಲ್ಲಿ ಹೊಸ ಬಾಂಬ್ ಸಿಡಿಸಿದೆ.

ಇಷ್ಟಕ್ಕೂ 'ಡರ್ಟಿ ಪೊಲಿಟಿಕ್ಸ್' ಚಿತ್ರ 'ಡರ್ಟಿ ಪಿಕ್ಚರ್'ನಂತೆ ಭಾರಿ ಸದ್ದು ಮಾಡದಿದ್ದರೂ ಕುತೂಹಲವನ್ನಂತೂ ಕೆರಳಿಸಿದೆ. ಈ ಚಿತ್ರದ ಕಥೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ರಾಜಸ್ತಾನದ ಗುರ್ಜಾರಿ ಸಮುದಾಯಕ್ಕೆ ಸೇರಿದ ಭನ್ವಾರಿ ದೇವಿ ಕುರಿತಾದದ್ದು ಎನ್ನಲಾಗಿದೆ. ಆದರೆ ಚಿತ್ರದ ನಿರ್ದೇಶಕರು ಇದು ಭನ್ವಾರಿ ದೇವಿ ಕಥೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಚಿತ್ರದ ಪಾತ್ರವರ್ಗದಲ್ಲಿ ಓಂ ಪುರಿ, ರಾಜ್ ಪಾಲ್ ಯಾದವ್ ಮುಂತಾದವರಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳ ಸುತ್ತ ಕಥೆ ಸುತ್ತುತ್ತದೆ ಎನ್ನಲಾಗಿದೆ. ಮಲ್ಲಿಕಾ ಶೆರಾವತ್ ಅವರು ಅನೂಕಿ ದೇವಿ ಪಾತ್ರವನ್ನು ಚಿತ್ರದಲ್ಲಿ ಪೋಷಿಸಿದ್ದಾರೆ.

ಈ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ಶಾರ್ಟ್ಸ್ ನಲ್ಲಿ ಜಿಂಗಿಚಾಕ್ ಎಂದು ಸೊಂಟ ಕುಣಿಸಿದ್ದರು. ಇದಕ್ಕಾಗಿ ಪ್ರೇಮ್ ರಿಂದ ರು.50 ಲಕ್ಷವನ್ನೂ ಎಣಿಸಿಕೊಂಡು ಹೋಗಿದ್ದರು. ಈಗ ತ್ರಿವರ್ಣ ಧ್ವಜ ಸುತ್ತಿಕೊಂಡು ವಿವಾದವನ್ನೇ ಹೊದ್ದುಕೊಂಡಿದ್ದಾರೆ. (ಏಜೆನ್ಸೀಸ್)

English summary
Mallika Sherawat is back! This time with yet another controversy. A poster of Mallika sitting atop an ambassador car with the Tricolour draped around her has been released for her upcoming film, ‘Dirty Politics’. The background of the poster features the State Legislative Assembly of Rajasthan. Mallika Sherawat is shown flaunting her toned legs with a CD in her hand.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada