For Quick Alerts
  ALLOW NOTIFICATIONS  
  For Daily Alerts

  ಬಿಲಿಯನೇರ್ ಬಿಲ್ ಗೇಟ್ಸ್ ಜೊತೆ ಮಲ್ಲಿಕಾ ಶೆರಾವತ್ ಮಾತುಕತೆ: ಏನ್ ವಿಷ್ಯ.?

  |
  ಬಿಲಿಯನೇರ್ ಭೇಟಿ ಮಾಡಿದ್ಯಾಕೆ ಮಲ್ಲಿಕಾ? | Mallika | Billionaire | Filmibeat Kannada

  ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಯಾರಿಗ್ತಾನೆ ಗೊತ್ತಿಲ್ಲ ಹೇಳಿ.? ಬಾಲಿವುಡ್ ನ 'ಮರ್ಡರ್' ಚಿತ್ರದಲ್ಲಿ ಹಸಿ ಬಿಸಿಯಾಗಿ ಕಾಣಿಸಿಕೊಂಡ ಮಲ್ಲಿಕಾ ಶೆರಾವತ್ 'ಬಚ್ಕೆ ರೆಹ್ನಾ ರೇ ಬಾಬಾ', 'ಡರ್ನಾ ಝರೂರಿ ಹೇ', 'ವೆಲ್ ಕಮ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.

  ಕನ್ನಡದಲ್ಲಿ 'ಜೋಗಿ' ಪ್ರೇಮ್ ರವರ 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ಹಾಡೊಂದಲ್ಲೂ ಸೊಂಟ ಬಳುಕಿಸಿದ್ದ ಮಲ್ಲಿಕಾ ಶೆರಾವತ್ ಕೆಲ ಚೀನಿ ಮತ್ತು ಆಂಗ್ಲ ಭಾಷೆಯ ಚಿತ್ರಗಳಲ್ಲೂ ಅಭಿನಯಿಸಿ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದಾರೆ.

  ಸಿನಿಮಾಗಳನ್ನು ಹೊರತು ಪಡಿಸಿ ಮಹಿಳೆಯರ ಹಕ್ಕುಗಳಿಗಾಗಿ ಮಲ್ಲಿಕಾ ಶೆರಾವತ್ ಆಗಾಗ ದನಿಯೆತ್ತುತ್ತಲಿರುತ್ತಾರೆ. 2018 ರ ಕ್ಯಾನೆ ಚಲನಚಿತ್ರೋತ್ಸವದಲ್ಲಿ 12 ಗಂಟೆಗಳ ಕಾಲ ಪಂಜರದಲ್ಲಿದ್ದು ಎನ್.ಜಿ.ಓ ಪರವಾಗಿ ಮಕ್ಕಳ ವೇಶ್ಯಾವಾಟಿಕೆ ಕುರಿತು ಮಲ್ಲಿಕಾ ಶೆರಾವತ್ ಜನಜಾಗೃತಿ ಮೂಡಿಸಿದ್ದರು.

  ಹೀರೋ ಜೊತೆ ಡೇಟ್ ಮಾಡಿಲ್ಲ, ಅದಕ್ಕೆ ಸಿನಿಮಾ ಸಿಕ್ಕಿಲ್ಲ: ಮಲ್ಲಿಕಾ ಶೆರಾವತ್ಹೀರೋ ಜೊತೆ ಡೇಟ್ ಮಾಡಿಲ್ಲ, ಅದಕ್ಕೆ ಸಿನಿಮಾ ಸಿಕ್ಕಿಲ್ಲ: ಮಲ್ಲಿಕಾ ಶೆರಾವತ್

  ಇದೀಗ ಇದೇ ಮಲ್ಲಿಕಾ ಶೆರಾವತ್ ವಿಶ್ವದ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಬಿಲಿಯನೇರ್ ಬಿಲ್ ಗೇಟ್ಸ್ ರನ್ನ ಭೇಟಿ ಮಾಡಿದ್ದಾರೆ.

  ಇತ್ತೀಚೆಗೆಷ್ಟೇ ವಾಷಿಂಗ್ಟನ್ ಡಿ.ಸಿಯಲ್ಲಿ ಅಮೇಜಾನ್ ಸಿ.ಇ.ಓ ಮತ್ತು ಸಂಸ್ಥಾಪಕ ಜೆಫ್ ಬೆಝೋಸ್ ಒಂದು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ನ ಮಲ್ಲಿಕಾ ಶೆರಾವತ್ ಮೀಟ್ ಮಾಡಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದಾರೆ.

  ಮಾಧ್ಯಮಗಳ ಎದುರು ಆತಂಕ ವ್ಯಕ್ತಪಡಿಸಿದ ಮಲ್ಲಿಕಾ ಶೆರಾವತ್ಮಾಧ್ಯಮಗಳ ಎದುರು ಆತಂಕ ವ್ಯಕ್ತಪಡಿಸಿದ ಮಲ್ಲಿಕಾ ಶೆರಾವತ್

  ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಮಲ್ಲಿಕಾ ಶೆರಾವತ್, ''ಮಹಿಳಾ ಸಬಲೀಕರಣದ ಬಗ್ಗೆ ಬಿಲ್ ಗೇಟ್ಸ್ ಜೊತೆಗೆ ಚರ್ಚೆ ಮಾಡಿದ್ದು ಖುಷಿ ಕೊಟ್ಟಿದೆ'' ಎಂದು ಮಲ್ಲಿಕಾ ಶೆರಾವತ್ ಬರೆದುಕೊಂಡಿದ್ದಾರೆ.

  ಅಂದ್ಹಾಗೆ, 2017 ರಲ್ಲಿ ತೆರೆಕಂಡ 'ಝೀನತ್' ಚಿತ್ರದ ಬಳಿಕ ಬೇರೆ ಯಾವುದೇ ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ಅಭಿನಯಿಸಿಲ್ಲ.

  English summary
  Bollywood Actress Mallika Sherawat talks about Female Empowerment with Bill Gates.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X