For Quick Alerts
  ALLOW NOTIFICATIONS  
  For Daily Alerts

  ತಗಳಪ್ಪಾ... ಅನುಷ್ಕಾ ಕೋಪಕ್ಕೆ ಗುರಿಯಾದವ ಒಂದ್ಕಾಲದಲ್ಲಿ 'ಬಾಲನಟ'.!

  By Harshitha
  |
  ಅನುಷ್ಕಾ ಹತ್ರ ಬೈಸ್ಕೊಂಡವನ ಅದೃಷ್ಟವೇ ಬದಲಾಯ್ತು ನೋಡಿ...!!

  ಅದ್ಯಾವ ಸಮಯದಲ್ಲಿ ತಮ್ಮ ಲಕ್ಷುರಿ ಕಾರಿನಿಂದ ಪ್ಲಾಸ್ಟಿಕ್ ಬಿಸಾಕಿದ್ರೋ ಏನೋ... ರಾತ್ರೋ ರಾತ್ರಿ 'ಆ' ಶ್ರೀಮಂತ ವ್ಯಕ್ತಿ ಇಡೀ ದೇಶದಲ್ಲೇ ಫೇಮಸ್ ಆಗ್ಬಿಟ್ಟಿದ್ದಾರೆ.

  'ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಕಬೇಡಿ. ದಯವಿಟ್ಟು ಕಸದ ಬುಟ್ಟಿ ಉಪಯೋಗಿಸಿ' ಎಂದು ಅನುಷ್ಕಾ ಶರ್ಮಾ 'ಆ' ಶ್ರೀಮಂತ ವ್ಯಕ್ತಿಗೆ ಬಿಸಿ ಮುಟ್ಟಿಸಿದ ವಿಡಿಯೋನ ಪತಿ ವಿರಾಟ್ ಕೊಹ್ಲಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದೇ ತಡ 'ಆ' ಅಪರಿಚಿತ ವ್ಯಕ್ತಿ ಏಕ್ದಂ ಟ್ರೆಂಡಿಂಗ್ ಆದರು. ಎಷ್ಟೋ ಜನ 'ಆ' ಅಪರಿಚಿತ ವ್ಯಕ್ತಿ ಪರ ಬ್ಯಾಟಿಂಗ್ ಮಾಡುತ್ತಿರುವುದು ಕೂಡ ವಾಸ್ತವವೇ.

  ಅಂದ್ಹಾಗೆ, ಪ್ಲಾಸ್ಟಿಕ್ ಬಿಸಾಕಿದ ಆ ವ್ಯಕ್ತಿ ಹೆಸರು ಅರ್ಹಾನ್ ಸಿಂಗ್ ಅನ್ನೋದು ಈಗ ಜಗಜ್ಜಾಹೀರಾಗಿರುವ ವಿಷಯ. ಆದ್ರೆ, ಅರ್ಹಾನ್ ಸಿಂಗ್ ಓರ್ವ ನಟ. ಅವರೂ ಕೂಡ ಬಣ್ಣದ ಬದುಕಿನ ನಂಟು ಹೊಂದಿದ್ದಾರೆ ಅನ್ನೋದು ನಿಮ್ಗೆ ಗೊತ್ತಾ.? ಗೊತ್ತಿಲ್ಲ ಅಂದ್ರೆ, ಸಂಪೂರ್ಣ ಮಾಹಿತಿ ಓದಿರಿ...

  ಅಚ್ಚರಿ ವಿಷಯ...

  ಅಚ್ಚರಿ ವಿಷಯ...

  ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಇದೇ ನೋಡಿ... ಐಷಾರಾಮಿ ಕಾರಿನಿಂದ ಪ್ಲಾಸ್ಟಿಕ್ ಬಿಸಾಕಿ, ಅನುಷ್ಕಾ ಶರ್ಮಾ ಕೋಪಕ್ಕೆ ಗುರಿಯಾದ ಅರ್ಹಾನ್ ಸಿಂಗ್ ಈಗಾಗಲೇ ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಹಾಗೂ ಶಾಹಿದ್ ಕಪೂರ್ ಜೊತೆಗೆ ಅಭಿನಯಿಸಿದ್ದಾರೆ.

  ಅನುಷ್ಕಾ ಬಾಯಿಂದ ಬಂದ ಮಾತುಗಳು ಕಸಕ್ಕಿಂತ ಕೀಳು ಎಂದ 'ಆ' ಶ್ರೀಮಂತ.!ಅನುಷ್ಕಾ ಬಾಯಿಂದ ಬಂದ ಮಾತುಗಳು ಕಸಕ್ಕಿಂತ ಕೀಳು ಎಂದ 'ಆ' ಶ್ರೀಮಂತ.!

  ಬಾಲನಟ ಅರ್ಹಾನ್ ಸಿಂಗ್

  ಬಾಲನಟ ಅರ್ಹಾನ್ ಸಿಂಗ್

  1996 ರಲ್ಲಿ ತೆರೆಕಂಡ 'ಇಂಗ್ಲೀಷ್ ಬಾಬು ದೇಸಿ ಮೆಮ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ಅರ್ಹಾನ್ ಸಿಂಗ್ ಅಭಿನಯಿಸಿದ್ದರು. ಅದು ಬಾಲನಟನಾಗಿ.!

  ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದವನ ಮುಖಕ್ಕೆ ಮಂಗಳಾರತಿ ಮಾಡಿದ ಅನುಷ್ಕಾ.!ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದವನ ಮುಖಕ್ಕೆ ಮಂಗಳಾರತಿ ಮಾಡಿದ ಅನುಷ್ಕಾ.!

  ಶಾಹಿದ್ ಕಪೂರ್ ಜೊತೆಗೆ ನಟನೆ

  ಶಾಹಿದ್ ಕಪೂರ್ ಜೊತೆಗೆ ನಟನೆ

  2010 ರಲ್ಲಿ ಬಿಡುಗಡೆ ಆದ ಶಾಹಿದ್ ಕಪೂರ್ ಅಭಿನಯದ 'ಪಾಠಶಾಲಾ' ಚಿತ್ರದಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಪಾತ್ರದಲ್ಲಿ ಅರ್ಹಾನ್ ಸಿಂಗ್ ನಟಿಸಿದ್ದರು.

  ಒಳ್ಳೆಯದನ್ನೇ ಹೇಳಿದರೂ ಅನುಷ್ಕಾ ಕೆಟ್ಟವಳು: ಟ್ರೋಲಿಗರಿಗೆ ಶೇಮ್ ಎಂದ ವಿರಾಟ್.!ಒಳ್ಳೆಯದನ್ನೇ ಹೇಳಿದರೂ ಅನುಷ್ಕಾ ಕೆಟ್ಟವಳು: ಟ್ರೋಲಿಗರಿಗೆ ಶೇಮ್ ಎಂದ ವಿರಾಟ್.!

  'ರಾಜಾ' ಚಿತ್ರದಲ್ಲಿ ಅಭಿನಯ

  'ರಾಜಾ' ಚಿತ್ರದಲ್ಲಿ ಅಭಿನಯ

  ಮಾಧುರಿ ದೀಕ್ಷಿತ್ ಹಾಗೂ ಸಂಜಯ್ ಕಪೂರ್ ಅಭಿನಯದ 'ರಾಜಾ' ಚಿತ್ರದಲ್ಲಿಯೂ ಬಾಲನಟನಾಗಿ ಅರ್ಹಾನ್ ಸಿಂಗ್ ಕಾಣಿಸಿಕೊಂಡಿದ್ದರು.

  ಸೀರಿಯಲ್ ನಲ್ಲಿ ಆಕ್ಟಿಂಗ್

  ಸೀರಿಯಲ್ ನಲ್ಲಿ ಆಕ್ಟಿಂಗ್

  1993 ರಲ್ಲಿ ಪ್ರಸಾರ ಆದ 'ದೇಖ್ ಭಾಯ್ ದೇಖ್' ಧಾರಾವಾಹಿಯಲ್ಲಿಯೂ ಅರ್ಹಾನ್ ಸಿಂಗ್ ನಟಿಸಿದ್ದರು.

  English summary
  Did you know: Man in Anushka Sharma's video was a child artist. He had worked with Shahrukh Khan, Shahid Kapoor and Madhuri Dixit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X