ಡ್ರಗ್ಸ್ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್: ವಾಟ್ಸಾಪ್ ಗ್ರೂಪ್‌ಗೆ ದೀಪಿಕಾ ಅಡ್ಮಿನ್!

ಡ್ರಗ್ಸ್ ಪ್ರಕರಣದಲ್ಲಿ ಅಳವಾಗಿ ಇಳಿದಿಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯಿಂದ ಆರಂಭವಾದ ಡ್ರಗ್ಸ್ ತನಿಖೆ ಈಗ ಇಡೀ ಬಾಲಿವುಡ್‌ಗೆ ಕಂಟಕ ತಂದೊಡ್ದಿದೆ.

ಎನ್‌ಸಿಬಿ ನೋಟಿಸ್ ಹಿನ್ನೆಲೆ ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಒಂದು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ದೀಪಿಕಾ ಕುರಿತು ಆಘಾತಕಾರಿ ಮಾಹಿತಿ ಎನ್‌ಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ.....

ದೀಪಿಕಾ ವಾಟ್ಸಾಪ್ ಗ್ರೂಪ್ ಅಡ್ಮಿನ್

ದೀಪಿಕಾ ವಾಟ್ಸಾಪ್ ಗ್ರೂಪ್ ಅಡ್ಮಿನ್

ಡ್ರಗ್ಸ್ ಗೆ ಸಂಬಂಧಿಸಿದಂತೆ ವಾಟ್ಸಾಪ್‌ನಲ್ಲಿ ಗ್ರೂಪ್ ಇದ್ದು, ಆ ಗ್ರೂಪ್‌ಗೆ ದೀಪಿಕಾ ಪಡುಕೋಣೆ ಅಡ್ಮಿನ್ ಆಗಿದ್ದಾರೆ ಎಂದು ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಎನ್‌ಸಿಬಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ಕೇವಲ ಮೂವರು ಮಾತ್ರ ಇದ್ದಾರೆ

ಕೇವಲ ಮೂವರು ಮಾತ್ರ ಇದ್ದಾರೆ

ಈ ಗ್ರೂಪ್‌ನಲ್ಲಿ ದೀಪಿಕಾ ಪಡುಕೋಣೆ, ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಹಾಗೂ ಈಗಾಗಲೇ ಬಂಧನವಾಗಿರುವ ಟ್ಯಾಲೆಂಟ್ ಮ್ಯಾನೇಜರ್ ಜಯ ಶಾ ಮಾತ್ರ ಇದ್ದಾರೆ. ಹಾಗೂ ಈ ಗ್ರೂಪ್ 2017 ರಿಂದ ಇದೆ ಎಂದು ದೀಪಿಕಾ ಮ್ಯಾನೇಜರ್ ಹೇಳಿದ್ದಾನೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 26ಕ್ಕೆ ದೀಪಿಕಾ ವಿಚಾರಣೆ

ಸೆಪ್ಟೆಂಬರ್ 26ಕ್ಕೆ ದೀಪಿಕಾ ವಿಚಾರಣೆ

ಇಂದು ನಟಿ ರಕುಲ್ ಪ್ರೀತ್ ಸಿಂಗ್ ಎನ್‌ಸಿಬಿ ವಿಚಾರಣೆಗೆ ಬಂದು ಹೋಗಿದ್ದಾರೆ. ನಾಳೆ (ಸೆಪ್ಟೆಂಬರ್ 26) ದೀಪಿಕಾ ಪಡುಕೋಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆ ಶನಿವಾರ ದೀಪಿಕಾ ಎನ್‌ಸಿಬಿ ಮುಂದೆ ಬರಲಿದ್ದು, ವಾಟ್ಸಾಪ್ ಗ್ರೂಪ್ ಬಗ್ಗೆ ಪ್ರಶ್ನಿಸಲಿದ್ದಾರೆ.

Recommended Video

ಅನುಶ್ರೀ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದ CCB ಪೊಲೀಸ್ | Filmibeat Kannada
ವಾಟ್ಸಾಪ್ ಚಾಟ್ ಕಂಟಕ ಆಗುತ್ತಾ?

ವಾಟ್ಸಾಪ್ ಚಾಟ್ ಕಂಟಕ ಆಗುತ್ತಾ?

ಡ್ರಗ್ಸ್ ವಿಚಾರಕ್ಕಾಗಿ ದೀಪಿಕಾ ವಾಟ್ಸಾಪ್ ಗ್ರೂಪ್ ಇಟ್ಟುಕೊಂಡಿದ್ದರು ಎನ್ನುವುದು ಸಾಬೀತಾದರೆ ಬಹುಶಃ ರಣ್ವೀರ್ ಸಿಂಗ್ ಪತ್ನಿಗೆ ಕಂಟಕವಾಗಬಹುದು. ದೀಪಿಕಾ ಪಡುಕೋಣೆ ಮಾತ್ರವಲ್ಲದೇ, ನಟಿ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಅವರಿಗೂ ನೋಟಿಸ್ ನೀಡಲಾಗಿದೆ.

More from Filmibeat

English summary
Drug Case Probe: Manager Karishma Prakash reveals Deepika Padukone admin of drug chat group.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X