For Quick Alerts
  ALLOW NOTIFICATIONS  
  For Daily Alerts

  ಝಾನ್ಸಿ ರಾಣಿಯಾಗಿ ಅಬ್ಬರಿಸಿದ 'ಮಣಿಕರ್ಣಿಕಾ' ಕಂಗನಾ

  By Bharath Kumar
  |

  ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ್ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ಅಭಿನಯಿಸುತ್ತಿದ್ದಾರೆ. ಈಗ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ 'ಮಣಿಕರ್ಣಿಕಾ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಭಾರಿ ಮೆಚ್ಚುಗೆ ಗಳಿಸಿಕೊಂಡಿದೆ.

  ಇಷ್ಟು ದಿನ ಬರಿ ಮೇಕಿಂಗ್ ನೋಡಿಯೇ 'ಮಣಿಕರ್ಣಿಕಾ' ಚಿತ್ರದ ಬಗ್ಗೆ ಥ್ರಿಲ್ ಆಗಿದ್ದವರಿಗೆ ಈ ಪೋಸ್ಟರ್ ಮತ್ತಷ್ಟು ರೋಚಕತೆ ಹೆಚ್ಚಿಸಿದೆ. ಅಷ್ಟರ ಮಟ್ಟಿಗೆ ದೇಶಭಕ್ತಿಯ ಕಿಚ್ಚು ಹಚ್ಚಿಸಿದೆ.

  ಝಾನ್ಸಿ ರಾಣಿ ಲಕ್ಷ್ಮಿಬಾಯಿ ಪಾತ್ರದಲ್ಲಿ ಅಭಿನಯಿಸಿರುವ ಕಂಗನಾ ರನೌತ್ ಈ ಪೋಸ್ಟರ್ ನಲ್ಲಿ ಅಕ್ಷರಃ ರಾಣಿ ಪ್ರತಿರೂಪವೆನ್ನುವಂತಿದ್ದಾರೆ. ಇನ್ನುಳಿದಂತೆ ಅತುಲ್ ಕುಲಕರ್ಣಿ ತಾತ್ಯಾ ಟೋಪೆ, ಸೋನುಸೂದ್ ಅವರು ಸದಾಶಿವ ಮತ್ತು ಅಂಕಿತಾ ಅವರು ಜಲ್ಕರ್ಬಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್ ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್

  ಕ್ರಿಶ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಝಾನ್ಸಿ ರಾಣಿಯ ದೇಶಭಕ್ತಿ, ಪರಾಕ್ರಮ, ಬ್ರಿಟಿಷರ ವಿರುದ್ಧ ದಂಗೆ ಹೀಗೆ ಪ್ರತಿಯೊಂದು ಅಂಶವನ್ನಿಟ್ಟು ತೆರೆಮೇಲೆ ತರ್ತಿದ್ದಾರೆ.

  ಇನ್ನು ಸಿನಿಮಾ ಪ್ರಮೋಷನ್ ವಿಚಾರದಲ್ಲೂ ಮಣಿಕರ್ಣಿಕಾ ಸಿನಿಮಾ ತುಂಬಾ ವಿಶೇಷವೆನಿಸಿಕೊಳ್ಳುತ್ತಿದೆ. ಯಾಕಂದ್ರೆ, ಸ್ವಾತಂತ್ರ್ಯೋತ್ಸವ ದಿನದಂದು ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಅಕ್ಟೋಬರ್ 2, ಗಾಂಧಿ ಜಯಂತಿಯಂದು ಟೀಸರ್ ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದಾರೆ. 2019ನೇ ಜನವರಿ 25ರಂದು ಅಂದ್ರೆ ಗಣರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ತೆರೆಕಾಣಲಿದೆ.

  ಕಂಗನಾ ವಿಚಾರದಲ್ಲಿ ಇನ್ನೊಂದು ವಿಚಾರ ಅಂದ್ರೆ, 'ಮಣಿಕರ್ಣಿಕಾ' ರಿಲೀಸ್ ಆಗುವ ವೇಳೆಯಲ್ಲೇ ನಟ ಹೃತಿಕ್ ರೋಷನ್ ಅಭಿನಯದ 'ಸೂಪರ್‌ 30' ಸಿನಿಮಾನೂ ತೆರೆಕಾಣುವ ಸಾಧ್ಯತೆ ಎನ್ನಲಾಗಿದೆ. ಹೀಗಾಗಿ, ಸಹಜವಾಗಿ ಇದು ಇವರಿಬ್ಬರ ನಡುವೆ ಯುದ್ಧಕ್ಕೆ ಕಾರಣವಾಗಲಿದೆ.

  English summary
  The first poster of Kangana Ranaut’s Manikarnika was shared on the occasion of the 72nd Independence Day and it is just what we needed to get into the patriotic spirit. The new poster shows Kangana as the fierce warrior queen, Queen Laxmi Bai of Jhansi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X