For Quick Alerts
  ALLOW NOTIFICATIONS  
  For Daily Alerts

  ಕಂಗನಾ ರನೌತ್ ವಿರುದ್ಧ ಮತ್ತೊಂದು ದೂರು ದಾಖಲು

  |

  ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸರು ಕಂಗನಾ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾರೆ.

  ಹಕ್ಕುಚ್ಯುತಿ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಗನಾ ರನೌತ್ ಸೇರಿದಂತೆ ಅವರ ಸಹೋದರಿ ರಂಗೋಲಿ, ಸಹೋದರ ಆಕಾಶ್ ರನೌತ್, ಕಮಾಲ್ ಕುಮಾರ್ ಜೈನ್, ಅಶಿಶ್ ಕೌಲ್ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

  ಕಂಗನಾ ಅವರು, 'ದಿಡ್ಡಾ; ದಿ ವಾರಿಯರ್ ಕ್ವೀನ್ ಆಫ್ ಕಾಶ್ಮೀರ್' ಹೆಸರಿನ ಸಿನಿಮಾವನ್ನು ಘೋಶಿಸಿದ್ದರು. ಅದೇ ಸಿನಿಮಾ ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ.

  ರಾಣಿ ದಿಡ್ಡಾ ಬಗ್ಗೆ ಪುಸ್ತಕ ರಚಿಸಿದ್ದ ಆಶಿಶ್ ಕೌಲ್ ಅವರು ಕಂಗನಾ ಹಾಗೂ ಇತರರ ವಿರುದ್ಧ ಹಕ್ಕುಚ್ಯುತಿ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ತಮ್ಮ ಕತೆಯನ್ನು ಅನುಮತಿ ಇಲ್ಲದೆ ಸಿನಿಮಾಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

  ರಾಣಿ ದಿಡ್ಡಾ ಕತೆಯ ಹಕ್ಕು ತನ್ನ ಬಳಿ ಇದ್ದು ತಮ್ಮ ಅನುಮತಿ ಇಲ್ಲದೆ ಕಂಗನಾ ಅವರು ಕತೆಯನ್ನು ಸಿನಿಮಾಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಲೇಖಕ ಆಶಿಕ್ ಕೌಲ್ ಆರೋಪಿಸಿದ್ದಾರೆ.

  ಆರ್ಥಿಕ ಸಂಕಷ್ಟದಲ್ಲಿದ್ದ ಆಶಿಕ್ ಕೌಲ್, ದಿಡ್ಡಾ ಕತೆಯನ್ನು ಕೆಲವು ನಿರ್ಮಾಪಕರಿಗೆ ಹೇಳಿದ್ದರಂತೆ. ತಮ್ಮ ಪುಸ್ತಕವನ್ನು ಸಿನಿಮಾ ಮಾಡಿರೆಂದು ಮನವಿ ಮಾಡಿದ್ದರಂತೆ. ಕಂಗನಾ ಗೆ ಸಹ ಕತೆಯ ಕೆಲವು ಭಾಗಗಳನ್ನು ಇ-ಮೇಲ್ ಮಾಡಿದ್ದರಂತೆ. ಆದರೆ ಅಚಾನಕ್ಕಾಗಿ ಕಂಗನಾ ಅವರು ದಿಡ್ಡಾ ಕತೆಯನ್ನು ಸಿನಿಮಾ ಮಾಡುವುದಾಗಿ ಘೋಷಿಸಿದಾಗ ಆಶಿಕ್ ಗೆ ಆಶ್ಚರ್ಯವಾಗಿದೆ. 'ನನ್ನದೇ ಕತೆಯನ್ನು ನನ್ನ ಅನುಮತಿ ಇಲ್ಲದೆ ಕಂಗನಾ ಸಿನಿಮಾ ಮಾಡುತ್ತಿದ್ದಾರೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ದಿನೇ ದಿನೇ ಏರುತ್ತಿದೆ ರಾಬರ್ಟ್ ಕಲೆಕ್ಷನ್ | Roberrt Collection | Filmibeat Kannada

  ಈ ಮೊದಲು 'ಮಣಿಕರ್ಣಿಕಾ; ಕ್ವೀನ್ ಆಫ್ ಝಾನ್ಸಿ' ಸಿನಿಮಾವನ್ನು ಕಂಗನಾ ನಿರ್ದೇಶಿಸಿದ್ದರು. ಈಗ ಅದರದ್ದೇ ಮುಂದುವರೆದ ಭಾಗವಾಗಿ ರಾಣಿ ದಿಡ್ಡಾ ಕತೆಯನ್ನು ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ ಕಂಗನಾ.

  English summary
  Manikarnika Returns Case Filed Against Kangana Ranaut For Cheating Copyright violation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X