»   » ಮನಿಷಾ ದಾಂಪತ್ಯ ಜೀವನದಲ್ಲಿ ಮಹಾ ಬಿರುಕು

ಮನಿಷಾ ದಾಂಪತ್ಯ ಜೀವನದಲ್ಲಿ ಮಹಾ ಬಿರುಕು

Posted By:
Subscribe to Filmibeat Kannada
ಈ ಸುದ್ದಿ ಆಗಿಂದಾಗ್ಗೆ ಕಿವಿಗೆ ಬೀಳುತ್ತಲೇ ಇದೆ. ಆ ರೀತಿ ಸುದ್ದಿ ಹೊರಬಿದ್ದಾಗಲೆಲ್ಲಾ ಏನೇನೋ ಸಬೂಬು ನೀಡುತ್ತಿದ್ದರು ಮನೀಷಾ. ಇಲ್ಲಾ ಇಲ್ಲಾ ಎಲ್ಲಾದರೂ ಉಂಟೇ? ನಾನು ಸೋಡಾಚೀಟಿನೂ ಇಲ್ಲ ಬೀಡಾ ಚೀಟಿನೂ ಇಲ್ಲ ಎಂದು ತಾರೆ ಮನಿಷಾ ಕೋಯಿರಾಲಾ ಸ್ಪಷ್ಟಪಡಿಸುತ್ತಿದ್ದರು.

ಆದರೆ ಈಗ ಆಕೆ ತನ್ನ ಪತಿ ಸಾಮ್ರಾಟ್ ದಹಲ್ ಗೆ ಸೋಡಾಚೀಟಿ ಕೊಡಲು ಸಂಪೂರ್ಣವಾಗಿ ನಿರ್ಧರಿಸಿದಂತಿದೆ. ಇದಕ್ಕಾಗಿ ಆಕೆ ನೇಪಾಳದಿಂದ ಮುಂಬೈಗೆ ಬಂದಿದ್ದಾರೆ. ಮದುವೆಯಾದ ಆರುತಿಂಗಳಲ್ಲೇ ಮನಿಷಾ ದಾಂಪತ್ಯ ಮುರಿದುಬೀಳುವ ಹಂತ ತಲುಪಿದೆ.

ಈ ಹಿಂದೊಮ್ಮೆ ಫೇಸ್ ಬುಕ್ ನಲ್ಲಿ ತನ್ನ ವಿವಾಹ ವಿಚ್ಛೇದನದ ಸುದ್ದಿಯನ್ನು ಹಾಕಿ ಕೂಡಲೇ ಡಿಲೀಟ್ ಮಾಡಿದ್ದರು. ಬಳಿಕ ಕೋಪದಲ್ಲಿ ಹಾಗೆ ಮಾಡಿದೆ ಅಷ್ಟೆ ಎಂದಿದ್ದರು. ಆದರೆ ಗಂಡ ಹೆಂಡತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಜಗಜ್ಜಾಹೀರಾಗಿದೆ. ಇವರ ದಾಂಪತ್ಯದಲ್ಲಿ ಮೂಡಿರುವ ಸಣ್ಣ ಬಿರುಕು ಈಗ ದೊಡ್ಡದಾಗಿದೆ.

ಈ ಬಾರಿ ವಿವಾಹ ವಿಚ್ಛೇದನ ತೆಗೆದುಕೊಳ್ಳಲೇಬೇಕು ಎಂದು ಮನಿಶಾ ನಿರ್ಧರಿಸಿದ್ದಾರೆ ಎನ್ನುತ್ತವೆ ಮೂಲಗಳು. ಉದ್ಯಮಿ ಪತಿಗೆ ಮನೀಷಾಳನ್ನು ರಮಿಸಲು ಸಮಯಕ್ಕೆ ಸಿಗುತ್ತಿರಲಿಲ್ಲ. ಇದು ಮನೀಷಾಳನ್ನು ಬಹುವಾಗಿ ಕಾಡುತ್ತಿತ್ತು. ಮದುವೆಯಾದ ಮೊದಲ ದಿನದಿಂದಲೇ ಈ ಜೋಡಿ ಕಿತ್ತಾಡುತ್ತಿತ್ತು ಎಂಬುದು ತೆರದಿಟ್ಟ ಸತ್ಯ.

ಮನೀಷಾ ವಿಚ್ಛೇದನ ಬಯಸಿರುವುದರಲ್ಲಿ ಅಚ್ಚರಿಯೇನಿಲ್ಲ. ಇದು ನಿರೀಕ್ಷಿತ. ಆಕೆ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿದರೆ ಸ್ವಾಗತ ಎಂದು ಹಿಂದಿ ಚಿತ್ರರಂಗ ಹೇಳುತ್ತಿದೆ. ಮನೀಷಾ ಮುಂದಿನ ನಡೆ ಮಾತ್ರ ಇನ್ನೂ ಬಹಿರಂಗವಾಗಿಲ್ಲ. (ಏಜೆನ್ಸೀಸ್)

English summary
Bollywood actress Manisha Koirala, who has been going through a rough patch in marriage, has at last decided to seek divorce from her businessman husband Samrat Dahal.
Please Wait while comments are loading...