»   » ಅಮೆರಿಕಾದಲ್ಲಿ ತಾರೆ ಮನಿಷಾಗೆ ಕ್ಯಾನ್ಸರ್ ಚಿಕಿತ್ಸೆ

ಅಮೆರಿಕಾದಲ್ಲಿ ತಾರೆ ಮನಿಷಾಗೆ ಕ್ಯಾನ್ಸರ್ ಚಿಕಿತ್ಸೆ

Posted By:
Subscribe to Filmibeat Kannada
ಬಾಲಿವುಡ್ ತಾರೆ ಮನಿಷಾ ಕೋಯಿರಾಲಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ನವೆಂಬರ್ 28ರಂದು ಅವರು ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈಗವರು ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟಿದ್ದಾರೆ.

ಮುಂಬೈನ ಜಾಸ್ಲಕ್ ಆಸ್ಪತ್ರೆಗೆ ದಾಖಲಾಗಿ ಮೂರು ದಿನ ಚಿಕಿತ್ಸೆಯನ್ನೂ ಪಡೆದಿದ್ದ ಅವರು ಈಗ ಕುಟುಂಬ ಸಮೇತ ಅಮೆರಿಕಾ ವಿಮಾನ ಹತ್ತಿದ್ದಾರೆ. ಕೆಲದಿನಗಳ ಹಿಂದೆ ತೀವ್ರವಾಗಿ ಬಳಲಿದ್ದ ಅವರು ಪ್ರಜ್ಞೆ ತಪ್ಪಿ ಬಿದ್ದದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರಿಗೆ ಕ್ಯಾನ್ಸರ್ ಇರುವ ಸಂಗತಿ ಬೆಳಕಿಗೆ ಬಂದಿತ್ತು.

ಆದರೆ ಅವರಿಗೆ ಯಾವ ರೀತಿಯ ಕ್ಯಾನ್ಸರ್ ಇದೆ ಎಂಬುದನ್ನು ವೈದ್ಯರು ಬಹಿರಂಗಪಡಿಸಿಲ್ಲ. ಮುಂಬೈ ಏರ್ ಪೋರ್ಟ್ ನಲ್ಲಿ ತಮ್ಮ ಸರಕು ಸರಂಜಾಮುಗಳೊಂದಿಗೆ ಮಾಧ್ಯಮಗಳ ಕಣ್ಣಿಗೆ ಬಿದ್ದ ಮನಿಷಾ, ತುಂಬಾ ನೀರಸವಾಗಿ ಕಾಣಿಸುತ್ತಿದ್ದರು.

ಮೊದಲು ಬಾಲಿವುಡ್ ನಲ್ಲಿ ಬೇಡಿಕೆ ಇದ್ದ ಈ ತಾರೆ ಬಳಿಕ ದಕ್ಷಿಣದ ಕಡೆ ಮುಖ ಮಾಡಿದ್ದರು. ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಬಂಗಾಳಿ ಹಾಗೂ ನೇಪಾಳಿ ಚಿತ್ರಗಳಲ್ಲೂ ಅಭಿನಯಿಸಿದ್ದರು. ರಾಮ್ ಗೋಪಾಲ್ ವರ್ಮಾ ಅವರ 'ಭೂತ್ ರಿಟರ್ನ್ಸ್' ಚಿತ್ರದ ಮೂಲಕ ಮತ್ತೆ ಬಾಲಿವುಡ್ ಗೆ ಮರಳಿದ್ದರು.

ಮನಿಷಾ ಅವರು ರಾಜಕೀಯಕ್ಕೂ ಸೇರುತ್ತಾರೆ ಎಂಬ ಸುದ್ದಿಯೂ ಇತ್ತು. ಸದ್ಯಕ್ಕೆ ಗಂಡನಿಂದ ದೂರವಾಗಿರುವ ಮನಿಷಾ ಅತ್ತ ಸಂಸಾರದಲ್ಲೂ ಎಡವಟ್ಟು ಮಾಡಿಕೊಂಡಿದ್ದಾರೆ. ಈಗವರಿಗೆ ಕ್ಯಾನ್ಸರ್ ಇದೆ ಎಂಬುದು ಗೊತ್ತಾಗಿ ಇನ್ನಷ್ಟು ಕಳೆಗುಂದಿದ್ದಾರೆ. (ಏಜೆನ್ಸೀಸ್)

English summary
Bollywood actress Manisha Koirala Leaves US for Cancer Treatment. She was discharged from Mumbai's Jaslok hospital on November 30, where she admitted for three days.
Please Wait while comments are loading...