»   » ಭಟ್ಟರ ಹಿಂದಿ ಚಿತ್ರಕ್ಕೆ ಓಂ ಪುರಿ? ಲೇಟೇಸ್ಟ್ ಏನಿದೆ?

ಭಟ್ಟರ ಹಿಂದಿ ಚಿತ್ರಕ್ಕೆ ಓಂ ಪುರಿ? ಲೇಟೇಸ್ಟ್ ಏನಿದೆ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ಗೆ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಪ್ರವೇಶ ಖಚಿತವಾಗುತ್ತಿದ್ದಂತೆ ಕಥೆ, ತಾರಾಗಣದ ಬಗ್ಗೆ ಕುತೂಹಲ ಹೆಚ್ಚಾಗತೊಡಗಿದೆ. ಹದಿಹರೆಯದ ಮನಸ್ಸಿಗೆ ಮುದ ನೀಡುವ ಚಿತ್ರ ಕಥೆ ರೆಡಿ ಮಾಡಿಕೊಂಡಿರುವ ಭಟ್ಟರು, ರೋಮ್ಯಾನ್ಸ್, ಸೆಂಟಿಮೆಂಟ್ ಮಿಕ್ಸ್ ಮಾಡಿರುವ ಒಳ್ಳೆ ಕಥೆ ನೀಡುತ್ತಾರೆ ಎಂಬ ಸುದ್ದಿಯನ್ನು ನಿರ್ಮಾಪಕ ಬಿ.ಸುರೇಶ ಅವರು ಖಚಿತಪಡಿಸಿದ್ದರು.

ಇನ್ನು ಈ ಚಿತ್ರಕ್ಕೆ ಭಟ್ರು ಒಂದೆರಡು ಟೈಟಲ್ ಗಳನ್ನೂ ಸೆಲೆಕ್ಟ್ ಮಾಡಿದ್ದಾರೆ. ಒಂದು 'ಸೌಂಡ್ ಬಡಾ ದೇ' ಹಾಗೂ ಇನ್ನೊಂದು 'ಹೆಲ್ಮಟ್'. ಆದರೆ ಎರಡೂ ಟೈಟಲ್ ಗಳಲ್ಲಿ ಯಾವುದನ್ನೂ ಫೈನಲ್ ಮಾಡಿಲ್ಲ. ಪ್ರಕಾಶ್ ರೈ ಅವರಂತೂ ಚಿತ್ರದಲ್ಲಿರುತ್ತಾರೆ ಎಂಬುದನ್ನು ಭಟ್ಟರೇ ಈ ಹಿಂದೆ ಹೇಳಿದ್ದರು.

ಈಗ ಹೊಸ ಸುದ್ದಿ ಎಂದರೆ, fukrey ಚಿತ್ರ ಖ್ಯಾತಿಯ ಮಂಜಿತ್ ಸಿಂಗ್ ಅವರನ್ನು ಪ್ರಮುಖ ಪಾತ್ರದಲ್ಲಿ ಹಾಕಿಕೊಳ್ಳಲಾಗಿದೆಯಂತೆ. ರಿಪಬ್ಲಿಕ್ ಡೇ ದಿನ ಸೆಟ್ಟೇರಬೇಕಿದ್ದ ಚಿತ್ರ ಈಗ ಫೆಬ್ರವರಿ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಕಂಡು ಬಂದಿದೆ.

Manjot Singh In Yogaraj Bhat's Bollywood Movie

ಚಿತ್ರದ ಟೈಟಲ್ ಬಗ್ಗೆ ಭಟ್ರು ತಲೆಕೆಡಿಸಿಕೊಂಡಿದ್ದರೆ, ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಬಿ. ಸುರೇಶ್ ಅವರು ಆಡಿಷನ್ ಜವಾಬ್ದಾರಿ ಹೊತ್ತಿದ್ದಾರೆ. ಒಂದು ಮೂಲದ ಪ್ರಕಾರ ಓಂ ಪುರಿ ಅವರಿಗೆ ಪ್ರಮುಖ ಪಾತ್ರ ಸಿಗಲಿದೆಯಂತೆ. ಪಾತ್ರದ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

ಅಮಿತಾಬ್ ಬಚ್ಚನ್ ಅವರಿಗೆ ಪ್ರಧಾನ ಪಾತ್ರ( ಭಟ್ಟರ ಪಂಚರಂಗಿಯ ಅನಂತ್ ನಾಗ್ ಪಾತ್ರದಂತೆ) ನೀಡುವ ಸಾಧ್ಯತೆ ಬಗ್ಗೆ ಸುದ್ದಿ ಹರಡಿತು. ಭಟ್ಟರು ಕೂಡಾ ಬಿಗ್ ಬಿ ಒಳ್ಳೆ ಪಾತ್ರ ಸೃಷ್ಟಿಸಿರುವ ಬಗ್ಗೆ ಹೇಳಿಕೊಂಡಿದ್ದರು.

ಬಿಗ್ ಬಿ ಜೊತೆಗೆ ಡೈಲಾಗ್ ಕಿಂಗ್ ನಾನಾ ಪಾಟೇಕರ್ ಅವರನ್ನು ತಾರಾಗಣದಲ್ಲಿ ಸೇರಿಸಿಕೊಳ್ಳಲಾಗಿದೆಯಂತೆ. 1999ರಲ್ಲಿ ಮೆಹುಲ್ ಕುಮಾರ್ ಅವರ ಕೊಹ್ರಾಂ ಚಿತ್ರದಲ್ಲಿ ಬಿಗ್ ಬಿ ಹಾಗೂ ನಾನಾ ಪಾಟೇಕರ್ ಒಟ್ಟಿಗೆ ನಟಿಸಿದ್ದರು. ಅದರೆ, ಚಿತ್ರ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿರಲಿಲ್ಲ. ಈಗ ಮತ್ತೊಮ್ಮೆ ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಅವಕಾಶವನ್ನು ಭಟ್ಟರು ಸೃಷ್ಟಿಸುತ್ತಿದ್ದಾರೆ ಎನ್ನಲಾಗಿತ್ತು.

ಒಟ್ಟಾರೆ, ಸುದೀಪ್, ಯಶ್ ಸಿನಿಮಾಗಳನ್ನು ನಿರ್ದೇಶಿಸುವ 'ಯೋಗ' ಸಿಕ್ಕರೂ ಮುಂಬೈಗೆ ಹೊಸ ಕನಸು ಹೊತ್ತು ಸಾಗಿರುವ ಭಟ್ಟರ ಬಾಲಿವುಡ್ ಜರ್ನಿ ಸುಗಮವಾಗಿರಲಿ ಎಂಬುದಷ್ಟೆ ನಮ್ಮ ಹಾರೈಕೆ.

English summary
Sandalwood ace director Yogaraj Bhat has roped in Hindi actor Manjot Singh to play lead role in his Bollywood debut. The director is likely to start the shooting for the untitled movie in February for which he is working on the script from eight years. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada