For Quick Alerts
  ALLOW NOTIFICATIONS  
  For Daily Alerts

  'ದಿ ಫ್ಯಾಮಿಲಿ ಮ್ಯಾನ್-2' ಚಿತ್ರೀಕರಣ ವೇಳೆ ತಮಿಳಿನ ಆ ಖ್ಯಾತ ನಟನನ್ನು ಭೇಟಿಯಾಗಿದ್ದೇಕೆ ಮನೋಜ್?

  By ಫಿಲ್ಮಿಬೀಟ್ ಡೆಸ್ಕ್
  |

  ದಿ ಫ್ಯಾಮಿಲಿ ಮ್ಯಾನ್-2 ಮೂಲಕ ಸದ್ದು ಮಾಡುತ್ತಿರುವ ಬಾಲಿವುಡ್‌ನ ಖ್ಯಾತ ನಟ ಮನೋಜ್ ಬಾಜಪಾಯಿ ತಮಿಳಿನ ಸ್ಟಾರ್ ನಟನನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2ಗಾಗಿ ಚೆನ್ನೈನಲ್ಲಿ ಬೀಡುಬಿಟ್ಟಿದ್ದ ಮನೋಜ್ ಬಾಜಪೇಯಿ ಮತ್ತು ತಂಡದವರಿಗೆ ಅದು ಅದ್ಭುತವಾದ ಸಮಯವಾಗಿತ್ತು ಎಂದಿದ್ದಾರೆ.

  ಇತ್ತೀಚಿಗೆ ದಿ ಹಿಂದೂಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮನೋಜ್ ಬಾಜಪೇಯಿ ಚೆನ್ನೈನ ಶೂಟಿಂಗ್ ವೇಳೆ ತಮಿಳಿನ ಖ್ಯಾತ ನಟನನ್ನು ಮತ್ತು ಇನ್ನು ಕೆಲವರನ್ನು ಭೇಟಿಯಾಗಿದ್ದು ಸಂತಸ ತಂದಿದೆ ಎಂದಿದ್ದಾರೆ. ಅಂದಹಾಗೆ ಮನೋಜ್ ಬಾಜಪೇಯಿ ಭೇಟಿಯಾದ ಆ ನಟ ಮತ್ಯಾರು ಅಲ್ಲ ವಿಜಯ್ ಸೇತುಪತಿ. ಮುಂದೆ ಓದಿ..

  ವೆಟ್ರಿಮಾರನ್ ಭೇಟಿಯಾಗಿದ್ದ ಮನೋಜ್

  ವೆಟ್ರಿಮಾರನ್ ಭೇಟಿಯಾಗಿದ್ದ ಮನೋಜ್

  ಮನೋಜ್ ಚೆನ್ನೈನಲ್ಲಿ ಚಿತ್ರೀಕರಣ ಮಾಡಿದ ಅನುಭವದ ಜೊತೆಗೆ ಖ್ಯಾತ ನಟರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಎಡಿಟಿಂಗ್ ಸ್ಟುಡಿಯೋದಲ್ಲಿ ನಿರ್ದೇಶಕ ವೆಟ್ರಿಮಾರನ್ ಅವರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ.

  ಸೇತುಪತಿ ಭೇಟಿಯಾಗಿದ್ದು ಅದ್ಭುತ ಅನುಭವ

  ಸೇತುಪತಿ ಭೇಟಿಯಾಗಿದ್ದು ಅದ್ಭುತ ಅನುಭವ

  ಇನ್ನು ಇದೇ ಸಮಯದಲ್ಲಿ ಮನೋಜ್ ಬಾಜಪೇಯಿ, ಖ್ಯಾತ ನಟ ವಿಜಯ್ ಸೇತುಪತಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆಯೂ ಬಹಿರಂಗ ಪಡಿಸಿದರು. "ಚೆನ್ನೈನಲ್ಲಿ ಚಿತ್ರೀಕರಣ ವೇಳೆ ನಟ ವಿಜಯ್ ಸೇತುಪತಿ ಅವರಿಗೆ ಕರೆ ಮಾಡಿದೆವು. ಅವರು ತಕ್ಷಣ ಭೇಟಿಯಾಗಲು ಒಪ್ಪಿಕೊಂಡರು, ರಾತ್ರಿ 12 ಗಂಟೆಗೆ ಸೆಟ್‌ಗೆಬಂದರು. ಅವರ ಜೊತೆ ಉತ್ತಮ ಸಮಯ ಕಳೆದೆವು. ನಾನು ಚೆನ್ನೈ ಜನರನ್ನು ತಿಳಿದುಕೊಳ್ಳಲು, ಸಿನಿಮಾ ನಿರ್ದೇಶಕರು, ನಟರನ್ನು ಭೇಟಿಯಾಗಿವುದು, ನಿಜವಾದ ಚೆನ್ನೈ ಮತ್ತು ಜನರನ್ನು ನೋಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

  ಸೇತುಪತಿ ಮತ್ತು ಮನೋಜ್ ಉತ್ತಮ ಸ್ನೇಹಿತರು

  ಸೇತುಪತಿ ಮತ್ತು ಮನೋಜ್ ಉತ್ತಮ ಸ್ನೇಹಿತರು

  ವಿಜಯ್ ಸೇತುಪತಿ ಮತ್ತು ಮನೋಜ್ ಬಾಜಪೇಯಿ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದರೆ ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ದಿ ಫ್ಯಾಮಿಲಿ ಮ್ಯಾನ್-2 ಸೆಟ್‌ನಲ್ಲಿ ಭೇಟಿಯಾಗುವ ಮೊದಲು ವಿಜಯ್ ಮತ್ತು ಮನೋಜ್ ಇಬ್ಬರು ಮುಂಬೈನಲ್ಲಿ ಒಮ್ಮೆ ಭೇಟಿಯಾಗಿದ್ದರು. ಅಂದಿನಿಂದ ಪ್ರಾರಂಭವಾದ ಸ್ನೇಹ ಸಂಬಂಧ ಹೇಗೆ ಮುಂದುವರೆದಿದೆ.

  ದಿ ಫ್ಯಾಮಿಲಿ ಮ್ಯಾನ್-3ಗೆ ಸಿದ್ಧತೆ

  ದಿ ಫ್ಯಾಮಿಲಿ ಮ್ಯಾನ್-3ಗೆ ಸಿದ್ಧತೆ

  ಸದ್ಯದಲ್ಲೇ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದರು ಅಚ್ಚರಿ ಇಲ್ಲ. ದಿ ಫ್ಯಾಮಿಲಿ ಮ್ಯಾನ್-2 ಬಳಿಕ ಸೀಸನ್ 3ಗೆ ಸಿದ್ಧತೆ ನಡೆಯುತ್ತಿದೆ ಎಂದು ಮನೋಜ್ ಬಾಜಪೇಯಿ ರಿವೀಲ್ ಮಾಡಿದ್ದಾರೆ. ಇನ್ನೊಂದುವರೆ ವರ್ಷದಲ್ಲಿ ದಿ ಫ್ಯಾಮಿಲಿ-3 ಸಿದ್ಧವಾಗಲಿದೆ ಎಂದಿದ್ದಾರೆ.

  ನೋವಾಗುತ್ತೆ ನಿಜ ಆದರೆ ಸಹಿಸಿಕೊಳ್ಳೋದು ಕಷ್ಟ ಅಂತ ಭಾವುಕರಾದ ಶಿವಣ್ಣ | Shivanna | SanchariVijay
  ಭಾರಿ ಸಂಭಾವನೆ ಬೇಡಿಕೆ ಇಟ್ಟ ಮನೋಜ್

  ಭಾರಿ ಸಂಭಾವನೆ ಬೇಡಿಕೆ ಇಟ್ಟ ಮನೋಜ್

  ಅಲ್ಲದೆ ಸೀಸನ್ 3ಗಾಗಿ ಮನೋಜ್ ಬಾಜಪೇಯಿ ಭಾರಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 22 ರಿಂದ 24 ಕೋಟಿ ರೂ. ವರೆಗೂ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ವಿಜಯ್ ಸೇತುಪತಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತುಘಲಕ್ ದರ್ಬಾರ್, ಲಾಬಮ್ ಸೇರಿದಂತೆ ಆರೇಳು ಸಿನಿಮಾಗಳು ಅವರ ಬಳಿ ಇದೆ.

  English summary
  Manoj Bajpayee reveals meeting with Vijay Sethupathi on The Family Men-2 Shooting set in Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X