For Quick Alerts
  ALLOW NOTIFICATIONS  
  For Daily Alerts

  ನನ್ನ ಹೆಸರನ್ನು ಬಲವಂತವಾಗಿ ಬದಲಾಯಿಸಲಾಯಿತು; ಮನೋಜ್ ಬಾಜಪೇಯಿ ಪತ್ನಿ ಶಬಾನಾ

  |

  ಬಾಲಿವುಡ್ ನಟ ಮನೋಜ್ ಬಾಜಪೇಯಿ ಸದ್ಯ ಫ್ಯಾಮಿಲಿ ಮ್ಯಾನ್-2 ಸಕ್ಸಸ್ ನ ಸಂತಸದಲ್ಲಿದ್ದಾರೆ. ಇತ್ತೀಚಿಗೆ ಬಿಡುಗೆಯಾದ ದಿ ಫ್ಯಾಮಿಲಿ ಮ್ಯಾನ್2 ವೆಬ್ ಸರಣಿ ಸೂಪರ್ ಹಿಟ್ ಆಗಿದ್ದು ಶ್ರೀಕಾಂತ್ ತಿವಾರಿಯಾಗಿ ಕಾಣಿಸಿಕೊಂಡಿರುವ ಮನೋಜ್ ಬಾಜಪೇಯಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಅಂದಹಾಗೆ ಮನೋಜ್ ಬಾಜಪೇಯಿ ರೀಲ್ ಮೇಲೆ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಫ್ಯಾಮಿಲಿ ಮ್ಯಾನ್ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪತ್ನಿ ಶಬಾನಾ ಮತ್ತು ಮಗಳು ಅವಾ ಎಂದರೆ ಮನೋಜ್ ಗೆ ಅಪಾರ ಪ್ರೀತಿ. ಇತ್ತೀಚಿಗೆ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಮನೋಜ್ ತನಗೆ ಕುಟುಂಬವೇ ಮೊದಲು ಎಂದು ಹೇಳಿದ್ದರು.

  ಕೆಲಸ ಅಥವಾ ಕುಟುಂಬ ಎರಡರಲ್ಲಿ ಯಾವುದು ಮೊದಲು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮನೋಜ್, 'ಕುಟುಂಬ ಮೊದಲು. ಮೊದಲು ಕುಟುಂಬದ ಎಲ್ಲಾ ನಿರೀಕ್ಷೆ ಮತ್ತು ಅವಶ್ಯಕತೆಗಳನ್ನು ಪೂರೈಸಬೇಕು. ಆಗ ಮಾತ್ರ ನಾನು ನೆಮ್ಮದಿಯಿಂದ ಹೊರಬರಲು ಸಾಧ್ಯ ಎಂದು ಹೇಳಿದ್ದಾರೆ. ಮುಂದೆ ಓದಿ..

  ಕುಟುಂಬ ಚೆನ್ನಾಗಿದ್ದರೆ ಮಾತ್ರ ಉತ್ತಮ ಕೆಲಸ ಮಾಡಬಹುದು

  ಕುಟುಂಬ ಚೆನ್ನಾಗಿದ್ದರೆ ಮಾತ್ರ ಉತ್ತಮ ಕೆಲಸ ಮಾಡಬಹುದು

  'ಒಂದುವೇಳೆ ನನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ನನ್ನ ಹೆಂಡತಿಗೆ ಆನಾರೋಗ್ಯವಾದರೆ ನಾನು ಸಂಪೂರ್ಣವಾಗಿ ಡಿಸ್ಟರ್ಬ್ ಆಗುತ್ತೆ. ನನಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕುಟುಂಬದ ಸಂತೋಷವೇ ಹೆಚ್ಚು. ಆಗ ಮಾತ್ರ ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಒಂದುವೇಳೆ ನೋವಾಗಿದ್ದರೂ ಸಹ ನೀವು ಹೆದರುವುದಿಲ್ಲ. ನಿಮ್ಮನ್ನು ಕಾಡುವುದಿಲ್ಲ. ಚೆನ್ನಾಗಿ ಕೆಲಸ ಮಾಡಬೇಕು ಎಂದರೆ ಕುಟುಂಬ ಸಂತೋಷವಾಗಿರಬೇಕು' ಎಂದು ಹೇಳಿದ್ದಾರೆ.

  ಪತ್ನಿ ಶಬಾನಾ ಕೂಡ ನಟಿ

  ಪತ್ನಿ ಶಬಾನಾ ಕೂಡ ನಟಿ

  ಅಂದಹಾಗೆ ಮನೋಜ್ ಬಾಜಪೇಯಿ ಪತ್ನಿ ಶಬಾನಾ ಕೂಡ ನಟಿ. ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. 1998ರಲ್ಲಿ ಕರೀಬ್ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಶಬಾನಾ ಬಳಿಕ ಹೃತಿಕ್ ರೋಷನ್, ಅಜಯ್ ದೇವನ್ ಸೇರಿದಂತೆ ಅನೇಕ ಸ್ಚಾರ್ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾರಂಗಕ್ಕೆ ಕಾಲಿಡುವ ಪ್ರಾರಂಭದಲ್ಲಿ ಶಬಾನಾ ಹೆಸರನ್ನು ನೇಹಾ ಎಂದು ಬದಲಾಯಿಸಲಾಯಿತು. ಅಪ್ಪ-ಅಮ್ಮ ಇಟ್ಟರನ್ನು ಬಲವಂತವಾಗಿ ಬದಲಾಯಿಸಲಾಗಿದೆ ಎಂದು ಶಬಾನಾ ಈ ಹಿಂದೆ ನೀಡಿದ ಸಂದರ್ಶವೊಂದರಲ್ಲಿ ಹೇಳಿದ್ದರು.

  ಬಲವಂತವಾಗಿ ನನ್ನ ಹೆಸರು ಬದಲಾಯಿಸಲಾಯಿತು

  ಬಲವಂತವಾಗಿ ನನ್ನ ಹೆಸರು ಬದಲಾಯಿಸಲಾಯಿತು

  'ನಾನು ಎಂದಿಗೂ ನೇಹಾ ಆಗಿಲ್ಲ. ನಾನು ಯಾವಾಗಲು ಶಬಾನಾ. ನನ್ನ ಹೆಸರನ್ನು ಬಲವಂತವಾಗಿ ಬದಲಾಯಿಸಲಾಗಿದೆ. ಅದರಲ್ಲಿ ನನ್ನ ತಪ್ಪಿಲ್ಲ. ನನ್ನ ಹೆತ್ತವರು ನನಗೆ ಶಬಾನಾ ಎಂದು ಹೆಸರಿಟ್ಟಿದ್ದರು. ಅದನ್ನು ಬದಲಾಯಿಸಬೇಕಿಲ್ಲ. ಆದರೆ ಅಂದ ನನ್ನ ಮಾತನ್ನು ಯಾರು ಕೇಳಿಲ್ಲ' ಎಂದು ಹೇಳಿದ್ದರು.

  ಅಂದು ಮಾತನ್ನು ಯಾರು ಕೇಳಲಿಲ್ಲ

  ಅಂದು ಮಾತನ್ನು ಯಾರು ಕೇಳಲಿಲ್ಲ

  'ಸಿನಿಮಾರಂಗಕ್ಕೆ ಪ್ರವೇಶ ಪಡೆದ ಬಳಿಕ ನಾನು ತುಂಬಾ ಪ್ರಬುದ್ಧಳಾಗಿದ್ದೇನೆ. ಮೊದಲು ನನಗೆ ಎಲ್ಲದರ ಬಗ್ಗೆಯೂ ತುಂಬಾ ಭಯವಿತ್ತು. ಆದರೆ ಈಗ ನನಗೆ ಎಲ್ಲಾ ಚೆನ್ನಾಗಿ ಅರ್ಥವಾಗುತ್ತೆ' ಎಂದು ಹೇಳಿದ್ದರು. 'ಸಿನಿಮಾಗಾಗಿ ನೇಹಾ ಎಂದು ಹೆಸರು ಬದಲಾಯಿಸಿದ ಬಳಿಕ ನನ್ನ ಮೂಲ ಹೆಸರಿಗೆ ನಾನು ಹಿಂದಿರುಗಬೇಕೆಂದು ಬಯಸಿದಾಗ ಯಾರು ನನ್ನ ಮಾತು ಕೇಳಿಲ್ಲ.'

  Yash Radhikaರ ಮಗನ ಹೊಸ ವಿಡಿಯೋ ಫುಲ್ ವೈರಲ್ | Filmibeat Kannada
  ನನ್ನ ಮೂಲ ಹೆಸರನ್ನು ಮತ್ತೆ ಪಡೆದಿದ್ದೇನೆ

  ನನ್ನ ಮೂಲ ಹೆಸರನ್ನು ಮತ್ತೆ ಪಡೆದಿದ್ದೇನೆ

  '2008ರಲ್ಲಿ ಬಿಡುಗಡೆಯಾದ 'ಅಲಿಬಗ್' ಸಿನಿಮಾದಿಂದ ಮತ್ತೆ ಹಳೆಯ ಹೆಸರನ್ನು ಮರಳಿ ಪಡೆದರು. ಈ ಮೂಲಕ ಮೂಲ ಹೆಸರನ್ನು ಸಿನಿಮಾದಲ್ಲಿ ಬಳಸುವಲ್ಲಿ ಯಶಸ್ವಿಯಾದರು. 'ಅಲಿಬಗ್ ಚಿತ್ರದಲ್ಲಿ ನಟಿಸುವ ಸಮಯದಲ್ಲಿ ಶಬಾನಾ ಹೆಸರಿಗೆ ಮರಳಿದೆ. ನಾನು ನನ್ನ ಗುರುತನ್ನು ಕಳೆದುಕೊಂಡಿದ್ದೆ. ಆದರೆ ಈಗ ಮರಳಿ ಪಡೆದಿದ್ದೇನೆ' ಎಂದು ಹೇಳಿದ್ದರು. ಶಬಾನಾ 2009ರ ಬಳಿಕ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

  English summary
  Manoj Bajpayee wife Shabana reveals she was forced to change her name for film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X