For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಈ ನಿರ್ದೇಶಕನ ಚಿತ್ರದಲ್ಲಿ ಮಾನುಷಿ ಚಿಲ್ಲರ್ ನಟಿಸಬೇಕಂತೆ!

  |

  2017ರ ಮಿಸ್ ವರ್ಲ್ಡ್ ವಿನ್ನರ್ ಮಾನುಷಿ ಚಿಲ್ಲರ್ ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ವಿಶ್ವ ಸುಂದರಿ ಕಿರೀಟ ಗೆದ್ದ ಮೂರು ವರ್ಷದ ಬಳಿಕ ಬಿಟೌನ್ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇದೀಗ, ಸೌತ್ ಇಂಡಸ್ಟ್ರಿಯ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಚಿತ್ರದಲ್ಲಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

  "ರಾಜಮೌಳಿ ಸರ್ ನಮ್ಮ ಕಾಲಘಟ್ಟದ ಅತ್ಯುತ್ತಮ ಸಿನಿಮಾ ಮೇಕರ್. ನಾನು ಅವರ ಕೆಲಸಕ್ಕೆ ದೊಡ್ಡ ಅಭಿಮಾನಿ. ಭಾರತೀಯ ಚಿತ್ರರಂಗವನ್ನು ಮೆಚ್ಚಿಸಲು ಕೆಲವು ಅಪ್ರತಿಮ ಚಲನಚಿತ್ರಗಳನ್ನು ನೀಡಿದ್ದಾರೆ. 'ಬಾಹುಬಲಿ' ಮತ್ತು 'ಮಗಧೀರ' ನನಗೆ ತುಂಬಾ ಇಷ್ಟವಾದ ಚಿತ್ರಗಳು" ಎಂದು ಮಾನುಷಿ ಚಿಲ್ಲರ್ ಹೇಳಿಕೊಂಡಿದ್ದಾರೆ. ಮುಂದೆ ಓದಿ....

  'ಪೃಥ್ವಿರಾಜ'ನ ರಾಣಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಶ್ವ ಸುಂದರಿ ಮಾನುಷಿ ಚಿಲ್ಲರ್'ಪೃಥ್ವಿರಾಜ'ನ ರಾಣಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಶ್ವ ಸುಂದರಿ ಮಾನುಷಿ ಚಿಲ್ಲರ್

  ರಾಜಮೌಳಿ ನನ್ನನ್ನು ಗುರುತಿಸಲಿದ್ದಾರೆ

  ರಾಜಮೌಳಿ ನನ್ನನ್ನು ಗುರುತಿಸಲಿದ್ದಾರೆ

  ತನ್ನ ಕಠಿಣ ಪರಿಶ್ರಮವನ್ನು ರಾಜಮೌಳಿ ಅವರು ಒಂದಲ್ಲ ಒಂದು ಗುರುತಿಸುವರು ಹಾಗೂ ಅವರೊಂದಿಗೆ ಆದಷ್ಟೂ ಬೇಗ ಕೆಲಸ ಮಾಡುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯನ್ನು ಚಿಲ್ಲರ್ ವ್ಯಕ್ತಪಡಿಸಿದ್ದಾರೆ.

  ಇಡೀ ರಾಷ್ಟ್ರ ಮೆಚ್ಚುವ ಪ್ರಾಜೆಕ್ಟ್‌ನಲ್ಲಿ ನಟಿಸಬೇಕು

  ಇಡೀ ರಾಷ್ಟ್ರ ಮೆಚ್ಚುವ ಪ್ರಾಜೆಕ್ಟ್‌ನಲ್ಲಿ ನಟಿಸಬೇಕು

  ''ಬಾಹುಬಲಿ ಇಡೀ ರಾಷ್ಟ್ರವನ್ನು ರಂಜಿಸುವಂತ ಚಿತ್ರ. ಇಂತಹ ಭವ್ಯವಾದ, ಅದ್ಭುತವಾದ ಚಿತ್ರದಲ್ಲಿ ಭಾಗವಾಗುವುದು ಅದೃಷ್ಟ. ಭವಿಷ್ಯದಲ್ಲಿ ಇಂತಹ ಸಿನಿಮಾಗಳಲ್ಲಿ ನಾನು ಭಾಗಿಯಾಗಬೇಕು ಎಂಬ ಆಶಯ ಹೊಂದಿದ್ದೇನೆ'' ಎಂದು ಮಾನುಷಿ ಚಿಲ್ಲರ್ ತಿಳಿಸಿದ್ದಾರೆ.

  ಮಾನುಷಿ ಚಿಲ್ಲರ್ ಮೇಲೆ ಕರಣ್ ಜೋಹರ್ ಕಣ್ಣು ಬಿತ್ತು.!ಮಾನುಷಿ ಚಿಲ್ಲರ್ ಮೇಲೆ ಕರಣ್ ಜೋಹರ್ ಕಣ್ಣು ಬಿತ್ತು.!

  'ಪೃಥ್ವಿರಾಜ್' ಚಿತ್ರದಲ್ಲಿ ಮಾನುಷಿ

  'ಪೃಥ್ವಿರಾಜ್' ಚಿತ್ರದಲ್ಲಿ ಮಾನುಷಿ

  ಅಕ್ಷಯ್ ಕುಮಾರ್ ನಟಿಸುತ್ತಿರುವ ಪೃಥ್ವಿರಾಜ್ ಚಿತ್ರದಲ್ಲಿ ಮಾನುಷಿ ಚಿಲ್ಲರ್ ನಟಿಸುತ್ತಿದ್ದು, ಈ ಮೂಲಕ ಬಿಗ್ ಸ್ಕ್ರೀನ್‌ಗೆ ಪ್ರವೇಶ ಮಾಡುತ್ತಿದ್ದಾರೆ. ರಾಜ ಪೃಥ್ವಿರಾಜ್ ಚೌಹಣ್ ಅವರ ಬಯೋಪಿಕ್ ಚಿತ್ರ ಇದಾಗಿದ್ದು, ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡುತ್ತಿದ್ದಾರೆ.

  ವಿಕ್ಕಿ ಕೌಶಲ್ ಜೊತೆಯಲ್ಲೂ ನಟನೆ

  ವಿಕ್ಕಿ ಕೌಶಲ್ ಜೊತೆಯಲ್ಲೂ ನಟನೆ

  ವಿಕ್ಕಿ ಕೌಶಲ್ ನಟಿಸಲಿರುವ ಹೊಸ ಸಿನಿಮಾದಲ್ಲಿ ಮಾನುಷಿ ಚಿಲ್ಲರ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಯಾವಾಗ ಆರಂಭವಾಗಲಿದೆ ಹಾಗೂ ಇನ್ನಿತರ ಮಾಹಿತಿ ಸಹ ಹೊರಬಿದ್ದಿಲ್ಲ.

  English summary
  Miss World Winner Manushi Chhillar wishes to work with baahubali director SS Rajamouli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X