For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್: ಹಲವು ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ

  |

  ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳ ಪುನರಾರಂಭ ಘೋಷಣೆ ಆಗುತ್ತಿದ್ದಂತೆ ಹಲವು ಬಾಲಿವುಡ್ ಸಿನಿಮಾಗಳು ಬಿಡುಗಡೆ ಘೋಷಿಸಿವೆ.

  ಮಹಾರಾಷ್ಟ್ರದಲ್ಲಿ ಇದೇ ಅಕ್ಟೋಬರ್ 22 ರಿಂದ ಚಿತ್ರಮಂದಿರಗಳು, ರಂಗಮಂದಿರಗಳು ಪುನಃ ಕಾರ್ಯಾರಂಭ ಮಾಡಬಹುದಾಗಿದೆ. ಈ ಕುರಿತು ಸರ್ಕಾರವು ಶೀಘ್ರದಲ್ಲಿಯೇ ಮಾರ್ಗಸೂಚಿ ಹೊರಡಿಸಲಿದೆ.

  ಸರ್ಕಾರವು ಚಿತ್ರಮಂದಿರ ತೆರೆಯುವುದಾಗಿ ಘೋಷಣೆ ಮಾಡುತ್ತಿದ್ದಂತೆ ಹಲವು ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು ತಮ್ಮ ಸಿನಿಮಾಗಳ ಬಿಡುಗಡೆ ದಿನಾಂಕ ಪ್ರಕಟಿಸಿವೆ. ನಿನ್ನೆ ಒಂದೇ ದಿನ ಸುಮಾರು 10 ಹಿಂದಿ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

  ಚಿತ್ರಮಂದಿರಗಳು ತೆರೆಯುವ ಸುದ್ದಿ ಹೊರಗೆ ಬೀಳುತ್ತಿದ್ದಂತೆ ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಂ' ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟಿಸಲಾಯಿತು. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ 29ರಂದು ತೆರೆಗೆ ಬರುತ್ತಿದೆ.

  ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಮ್ಸ್ ಸಹ ಹಲವು ಸಿನಿಮಾಗಳನ್ನು ಪ್ರಕಟಿಸಿದೆ. ಸೈಫ್ ಅಲಿ ಖಾನ್, ರಾಣಿ ಮುಖರ್ಜಿ ನಟಿಸಿರುವ 'ಬಂಟಿ ಔರ್ ಬಬ್ಲಿ 2' ಸಿನಿಮಾವು ನವೆಂಬರ್ 19ಕ್ಕೆ ಬಿಡುಗಡೆ ಆಗಲಿದೆ.

  ಯಶ್ ರಾಜ್ ಫಿಲಮ್ಸ್‌ನ ಮತ್ತೊಂದು ಭಾರಿ ಬಜೆಟ್ ಸಿನಿಮಾ 'ಪೃಥ್ವಿರಾಜ್' ಮುಂದಿನ ವರ್ಷ ಜನವರಿ 21ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದು, ಸಿನಿಮಾವು ರಾಜಾ ಪೃಥ್ವಿರಾಜ್ ಕುರಿತಾಗಿದೆ. ಈ ಸಿನಿಮಾದಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮೊದಲ ಬಾರಿಗೆ ನಟಿಸಿದ್ದಾರೆ.

  ರಣ್ವೀರ್ ಸಿಂಗ್ ಹಾಗೂ ಶಾಲಿನಿ ಪಾಂಡೆ ನಟಿಸಿರುವ 'ಜಯೇಶ್‌ಭಾಯ್ ಜೋರ್‌ದಾರ್' ಸಿನಿಮಾವು ಫೆಬ್ರವರಿ 25, 2022ಕ್ಕೆ ಬಿಡುಗಡೆ ಆಗಲಿದೆ. ರಣಬೀರ್ ಕಪೂರ್ ನಟಿಸಿರುವ 'ಶಂಶೇರಾ' ಸಿನಿಮಾವು ಮಾರ್ಚ್ 18ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ವಾಣಿ ಕಪೂರ್ ನಾಯಕಿಯಾಗಿದ್ದು, ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಅಮಿತಾಬ್ ಬಚ್ಚನ್ ಹಾಗೂ ಅಜಯ್ ದೇವಗನ್ ಒಟ್ಟಿಗೆ ನಟಿಸುತ್ತಿರುವ 'ಮೇ ಡೇ' ಸಿನಿಮಾವು ಮುಂದಿನ ವರ್ಷ ಏಪ್ರಿಲ್ 29ಕ್ಕೆ ಬಿಡುಗಡೆ ಆಗಲಿದೆ.

  ರಣ್ವೀರ್ ಸಿಂಗ್ ನಟಿಸಿರುವ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಜೀವನ ಆಧರಿಸಿರುವ ಸಿನಿಮಾ '83' ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಅದೇ ದಿನ ತೆಲುಗಿನ 'ಪುಷ್ಪ' ಸಿನಿಮಾ ಬಿಡುಗಡೆ ಆಗಲಿದೆ. ಅಲ್ಲದೆ ಬೇರೆ ಹಲವು ಸಿನಿಮಾಗಳು ಆ ದಿನದಂದು ಬಿಡುಗಡೆ ಆಗುತ್ತಿವೆ.

  ತೆಲುಗಿನ ಆರ್‌ಎಕ್ಸ್-100 ಸಿನಿಮಾದ ಹಿಂದಿ ರೀಮೇಕ್ 'ತಡಪ್' ಸಿನಿಮಾವು ಡಿಸೆಂಬರ್ 03ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ ಸಿನಿಮಾವು 4 ಮಾರ್ಚ್, 2020ಕ್ಕೆ ಬಿಡುಗಡೆ ಆಗಲಿದೆ. ಟೈಗರ್ ಶ್ರಾಫ್ ನಟನೆಯ 'ಹೀರೋಪನ್ತಿ 2' ಸಿನಿಮಾವು ಮೇ 6ಕ್ಕೆ ಬಿಡುಗಡೆ ಆಗಲಿದೆ.

  English summary
  Maharashtra government allows to open theaters in the state. So many Bollywood movies announce their release date.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X