»   » ''ತುಜ್ಹೆ ದೇಖಾ ತೋಯೆ ಜಾನಾ ಸನಂ....'' ಗುಡ್ ಬೈ

''ತುಜ್ಹೆ ದೇಖಾ ತೋಯೆ ಜಾನಾ ಸನಂ....'' ಗುಡ್ ಬೈ

Posted By:
Subscribe to Filmibeat Kannada

ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ - ''ಆಲ್ ಗುಡ್ ಥಿಂಗ್ಸ್ ಕಮ್ ಟು ಆನ್ ಎಂಡ್'' ಅಂತ. ಆ ಮಾತು ಇಂದು ಬಾಲಿವುಡ್ ಅಂಗಳದ ಮೂಲೆ ಮೂಲೆಯಲ್ಲೂ ಕೇಳಿಬರುತ್ತಿದೆ. ಅದಕ್ಕೆ ಕಾರಣ 19 ವರ್ಷಗಳ ಕಾಲ ಸುದೀರ್ಘ ಪ್ರದರ್ಶನ ಕಂಡ ಶಾರುಖ್-ಕಾಜೋಲ್ ಅಭಿನಯದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ'.

ಬರೋಬ್ಬರಿ 1009 ವಾರಗಳ ಕಾಲ ಪ್ರದರ್ಶನ ಕಂಡ 'ಡಿ.ಡಿ.ಎಲ್.ಜೆ' ಚಿತ್ರಕ್ಕೆ ಇಂದು ಅಧಿಕೃತ ತೆರೆ ಬಿದ್ದಿದೆ. ಬೆಳ್ಳಗ್ಗೆ 9.15 ರಂದು ಮುಂಬೈನ 'ಮರಾಠಾ ಮಂದಿರ್' ಥಿಯೇಟರ್ ನಲ್ಲಿ ಶಾರುಖ್ ಖಾನ್ ರ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಸಿನಿಮಾದ ಕೊನೆಯ ಶೋ ನೆರವೇರಿತು. [1000 ವಾರ ಕಂಡ 19ರ ಹರೆಯ ಶಾರುಖ್- ಕಾಜೋಲ್]

Maratha Mandir screens last show of DDLJ today

1995, ಅಕ್ಟೋಬರ್ 19 ರಂದು 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ' ಚಿತ್ರ ಬಿಡುಗಡೆ ಗೊಂಡಿತ್ತು. ಡಿಸೆಂಬರ್ 12, 2014 ರಂದು 1000 ವಾರಗಳ ಪ್ರದರ್ಶನದ ಸಂಭ್ರಮವನ್ನ 'ಡಿ.ಡಿ.ಎಲ್.ಜೆ' ತಂಡ ಭರ್ಜರಿಯಾಗಿ ಆಚರಿಸಿಕೊಂಡಿತ್ತು.

ಹತ್ತೊಂಬತ್ತು ವರ್ಷಗಳಲ್ಲಿ ಯಾವುದೇ ಹೊಸ ಚಿತ್ರಗಳು ರಿಲೀಸ್ ಆದರೂ, 'ಮರಾಠಾ ಮಂದಿರ್' ಚಿತ್ರಮಂದಿರದಲ್ಲಿ ಮ್ಯಾಟನಿ ಶೋ 'ಡಿ.ಡಿ.ಎಲ್.ಜೆ' ಗೆ ಮಾತ್ರ ಮೀಸಲಿಡಲಾಗಿತ್ತು. ಬೆಳ್ಳಗ್ಗೆ 11.30 ಕ್ಕೆ ಶುರುವಾಗುತ್ತಿದ್ದ ಶೋಗೆ ಮಯಾನಗರಿಯ ಜನ ತಪ್ಪದೇ ಬರುತ್ತಿದ್ದರು. ['ಡಿ.ಡಿ.ಎಲ್.ಜೆ' ಚಿತ್ರಕ್ಕಿಂದು ಸಹಸ್ರ ಸಂಭ್ರಮ]

ಆದ್ರೆ, 1000 ವಾರಗಳ ನಂತರ ಶೋ ಸಮಯದಲ್ಲಿ ಕೊಂಚ ಬದಲಾವಣೆ ತಂದ 'ಮರಾಠಾ ಮಂದಿರ್' ಚಿತ್ರಮಂದಿರದ ಮಾಲೀಕರು 11.30 ರ ಬದಲಾಗಿ 9.15 ಕ್ಕೆ ಶಿಫ್ಟ್ ಮಾಡಿದ್ದರು. ಒಂಬತ್ತು ವಾರಗಳ ಕಾಲ 'ಡಿ.ಡಿ.ಎಲ್.ಜೆ' ಮಾರ್ನಿಂಗ್ ಶೋ ಪ್ರದರ್ಶನ ಕಾಣ್ತು.

Maratha Mandir screens last show of DDLJ today

ಆದ್ರೆ, ಥಿಯೇಟರ್ ನ ಸಿಬ್ಬಂದಿ ವರ್ಗದವರ ಕಾರ್ಯಾವಧಿಯಲ್ಲಿ ತೊಂದರೆ ಉಂಟಾಗಿದ್ದರಿಂದ ಮಾರ್ನಿಂಗ್ ಶೋಗೆ ತಿಲಾಂಜಲಿ ಬಿಡುವುದಕ್ಕೆ 'ಮಾರಾಠಿ ಮಂದಿರ್' ಆಡಳಿತ ಮಂಡಳಿ ನಿರ್ಧರಿಸಿದೆ. ಇದನ್ನ ಪುರಸ್ಕರಿಸಿದ ಯಶ್ ರಾಜ್ ಸಂಸ್ಥೆ 'ಡಿ.ಡಿ.ಎಲ್.ಜೆ' ಯುಗಕ್ಕೆ ಫುಲ್ ಸ್ಟಾಪ್ ಹೇಳುವುದಕ್ಕೆ ನಿರ್ಧರಿಸಿದೆ.

ಅದರಂತೆ ಇಂದು 'ಮರಾಠಾ ಮಂದಿರ್'ನಲ್ಲಿ 'ಡಿ.ಡಿ.ಎಲ್.ಜೆ' ಚಿತ್ರದ ಕೊನೆಯ ಪ್ರದರ್ಶನ ಕಂಡಿತು. ಅಲ್ಲಿಗೆ, 19 ವರ್ಷಗಳ ನವಿರಾದ ಪ್ರೇಮ ಪರ್ವ ಇಂದು ಮುಕ್ತಾಯ ಗೊಂಡಿದೆ. (ಏಜೆನ್ಸೀಸ್)

English summary
After a historic 1000 week run, Iconic Maratha Mandir screens All time Block-Buster movie Dilwale Dulhania Le Jayenge for the last time today.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more