»   » ''ನಾನು ಸನ್ನಿ ಲಿಯೋನ್ ಆಗ್ತೀನಿ'': ವರ್ಮ ಬತ್ತಳಿಕೆಯಿಂದ ಬಂದ ಹೊಸ ಅಸ್ತ್ರ.!

''ನಾನು ಸನ್ನಿ ಲಿಯೋನ್ ಆಗ್ತೀನಿ'': ವರ್ಮ ಬತ್ತಳಿಕೆಯಿಂದ ಬಂದ ಹೊಸ ಅಸ್ತ್ರ.!

Posted By:
Subscribe to Filmibeat Kannada

ತಮ್ಮ ಮಕ್ಕಳು ಒಬ್ಬ ಡಾಕ್ಟರ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು, ಪೊಲೀಸ್ ಆಗ್ಬೇಕು.....ದೇಶ ಕಂಡ ಸಾಧಕರ ರೀತಿ ಆಗ್ಬೇಕು ಎನ್ನುವುದು ಪ್ರತಿಯೊಬ್ಬ ತಂದೆ-ತಾಯಿಯ ಆಶಯ. ಆದ್ರೆ, ಇಲ್ಲೊಬ್ಬರು ''ನಾನು ಸನ್ನಿ ಲಿಯೋನ್ ಆಗ್ಬೇಕು'' ಎನ್ನುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ.[ಮುಂಬೈ ಕತ್ತಲೆ ಪ್ರಪಂಚವನ್ನ ಬೆತ್ತಲಾಗಿ ತೋರಿಸಿದ ವರ್ಮ]

ಅಂದ್ಹಾಗೆ, ಇದು ನಿಜ ಜೀವನದಲ್ಲಿ ಅಲ್ಲ, ಹಿಂದಿಯ ಕಿರುಚಿತ್ರದಲ್ಲಿ. ಇಂತಹ ವಿಶೇಷ ಸಿನಿಮಾ ಮಾಡಿರುವುದು ಬೇರೆ ಯಾರು ಅಲ್ಲ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ.

Meri Beti Sunny Leone Banna Chaahti Hai Short Film

ಹೌದು, 'ಮೇರಿ ಬೇಟಿ ಸನ್ನಿ ಲಿಯೋನ್ ಬನ್ನಾ ಚಾಹ್ತಿ ಹೈ' (ನನ್ನ ಮಗಳು ಸನ್ನಿ ಲಿಯೋನ್ ಆಗ ಬಯಸಿದ್ದಾಳೆ) ಎಂಬ ಟೈಟಲ್ ಇಟ್ಟು ಕಿರುಚಿತ್ರವನ್ನ ನಿರ್ದೇಶನ ಮಾಡಿ, ಯ್ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ.[ಸನ್ನಿ ಲಿಯೋನ್‌ಗೆ ಯಾಕೆ ಸ್ಟಾರ್ ನಟರ ಪತ್ನಿಯರ ಮೇಲೆ ಕೆಂಡದಷ್ಟು ಕೋಪ?]

ಹರೆಯದ ಹುಡುಗಿಯೊಬ್ಬಳು ತಾನು ಸನ್ನಿ ಲಿಯೋನ್ ಥರ ಆಗಬೇಕು ಅಂತಾ ಆಸೆ ಪಟ್ಟಾಗ, ಆಕೆಯ ಆಸೆ ಕಂಡು ತಂದೆ-ತಾಯಿ ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಸುತ್ತ ಮುತ್ತಲಿನ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೇ ಈ ಕಿರುಚಿತ್ರವಾಗಿದೆ.

ಯಾವುದೇ ಅಸಹ್ಯ, ಅಶ್ಲೀಲ ಎನ್ನುವಂತಹ ದೃಶ್ಯಗಳಿಲ್ಲದೆ, ತುಂಬಾ ಸರಳವಾಗಿ, ಕಥೆಯನ್ನ ಹೇಳಿದ್ದಾರೆ. ರಾಮ್ ಗೋಪಾಲ್ ವರ್ಮ ಇಂತಹದೊಂದು ಸಾಹಸಕ್ಕೆ ಕೈ ಹಾಕಿರುವುದು ನಿಜಕ್ಕೂ ಎಲ್ಲರ ಹುಬ್ಬೇರಿಸುವತಾಗಿದೆ. ನೈನಾ ಗಂಗೂಲಿ, ಮಕರಂದ್ ದೇಶಪಾಂಡೆ, ದಿವ್ಯ ಜಗದಾಳೆ ಈ ಕಿರುಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಕಿರುಚಿತ್ರ ಮುಂದೆ ನೋಡಿ....

English summary
Director Ram Gopal Varma’s Meri Beti Sunny Leone Banna Chaahti Hai Short Film Released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada