»   » ಮುಂಬೈ ಕತ್ತಲೆ ಪ್ರಪಂಚವನ್ನ ಬೆತ್ತಲಾಗಿ ತೋರಿಸಿದ ವರ್ಮ

ಮುಂಬೈ ಕತ್ತಲೆ ಪ್ರಪಂಚವನ್ನ ಬೆತ್ತಲಾಗಿ ತೋರಿಸಿದ ವರ್ಮ

Posted By:
Subscribe to Filmibeat Kannada

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಿನ್ನೆ ಒಂದು ಗುಡ್ ನ್ಯೂಸ್ ಹೇಳುತ್ತೇನೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. ಅದರಂತೆ ವಿಷ್ಯವನ್ನ ಹೇಳಿದ್ದಾರೆ. ತಾನೊಂದು ವೆಬ್ ಸೀರಿಸ್ ನಿರ್ದೇಶನ ಮಾಡುತ್ತಿದ್ದೇನೆ. ಅದರ ಹೆಸರು 'ಗನ್ಸ್ ಅಂಡ್ ಥೈಯ್ಸ್' ಎಂದು ಟ್ವೀಟ್ ಮಾಡಿದ್ದರು.[ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುವಂತೆ ಮಾಡಿದ ವರ್ಮ]

ಈ ಟೈಟಲ್ ಕೇಳಿಯೇ ಕೆಲವೊಂದಿಷ್ಟು ಜನರು ಈ ವರ್ಮ ಏನಪ್ಪಾ ಇಂತಹ ಟೈಟಲ್ ಇಟ್ಟಿದ್ದಾನೆ ಎಂದು ಯೋಚನೆ ಮಾಡುತ್ತಿರುವಾಗಾಲೇ 'ಗನ್ಸ್ ಅಂಡ್ ಥೈಯ್ಸ್' ಟೀಸರ್ ಕೂಡ ಬಿಡುಗಡೆ ಮಾಡಿದರು. ಈ ಟೀಸರ್ ನೋಡಿದ ಮೇಲೆ ಇಡೀ ಚಿತ್ರಜಗತ್ತು ಆಶ್ಚರ್ಯಗೊಂಡಿದೆ. ಅಶ್ಲೀಲ ದೃಶ್ಯಗಳು, ಆಶ್ಲೀಲ ಮಾತುಗಳು ಹೀಗೆ ಎಲ್ಲವನ್ನ ಹಸಿಬಿಸಿಯಾಗಿ ತೆರೆಗೆ ತಂದಿರುವ ವರ್ಮ ಮುಂಬೈ ನಗರವನ್ನ ಬೆತ್ತಲು ಮಾಡಿದ್ದಾರೆ. ಮುಂದೆ ಓದಿ.....

ಸೆನ್ಸಾರ್ ಇಲ್ಲದ ಟೀಸರ್!

'ಗನ್ಸ್ ಅಂಡ್ ಥೈಯ್ಸ್' ಟೈಟಲ್ ಮಾತ್ರ ಹೀಗಿರಬಹುದು ಎಂದು ನೋಡಿದ್ರೆ, ಇಡೀ ಟೀಸರ್ ಪೂರ್ತಿ ಟೈಟಲ್ ಗೆ ತಕ್ಕ ಹಾಗೆ ಇದೆ. ಅಶ್ಲೀಲ ದೃಶ್ಯಗಳು, ಆಶ್ಲೀಲ ಮಾತುಗಳು, ರಕ್ತ, ಕೊಲೆ, ಹೀಗೆ ಈ ಟೀಸರ್ ತುಂಬಾ ಕ್ರೂರತೆ ಎದ್ದು ಕಾಣುತ್ತಿದೆ.[ಕನ್ನಡಿಗರನ್ನ ಕೆಣಕಿದ ವರ್ಮಾಗೆ ಚಾಟಿ ಏಟು ಕೊಟ್ಟ ನಟ ಜಗ್ಗೇಶ್]

ಬೆತ್ತಲಾದ ನಟಿ

'ಗನ್ಸ್ ಅಂಡ್ ಥೈಯ್ಸ್' ಟೀಸರ್ ನಲ್ಲಿ ನಟಿಯೊಬ್ಬಳು ಸಂಪೂರ್ಣವಾಗಿ ಬೆತ್ತಲಾಗಿದ್ದಾಳೆ. ಮೈಮೇಲೆ ಒಂದು ತುಂಡು ಬಟ್ಟೆ ಕೂಡ ಧರಿಸಿಲ್ಲ. ಇದನ್ನ ಯಾವುದೇ ಸೆನ್ಸಾರ್ ಮತ್ತು ಬ್ಲರ್ (Blur) ಮಾಡದೆ ನೇರವಾಗಿ ತೋರಿಸಲಾಗಿದೆ.['ಮಹಿಳಾ ದಿನ'ಕ್ಕೆ ವರ್ಮಾ ಕೀಳು ಶುಭಾಶಯ, ದೂರು ದಾಖಲು]

ಕೆಟ್ಟ ಮಾತುಗಳ ಸಂಭಾಷಣೆ

ಇನ್ನು ಡೈಲಾಗ್ ವಿಚಾರಕ್ಕೆ ಬಂದ್ರೆ, ಒಬ್ಬ ಮನುಷ್ಯ ಎಷ್ಟು ಕೆಟ್ಟದಾಗಿ ಬೈಯಬಹುದೋ ಆ ಮಾತುಗಳನ್ನ ಇಲ್ಲಿ ಸಂಭಾಷಣೆಯಾಗಿ ಬಳಸಲಾಗಿದೆ.[ತಮಿಳುನಾಡಿನ 'ಶಶಿಕಲಾ' ಮೇಲೆ ಬಿತ್ತು 'ವರ್ಮ' ಕಣ್ಣು!]

ಮುಂಬೈನ 'ನಗ್ನ' ಕಥೆ

ಮುಂಬೈ ನಗರದಲ್ಲಿ ನಡೆಯುತ್ತಿದ್ದ ನಗ್ನ ಕಥೆಗಳನ್ನ ಯಾವುದೇ ಮುಲಾಜಿಲ್ಲದೇ ಈ ವೆಬ್ ಸೀರಿಸ್ ನಲ್ಲಿ ವರ್ಮ ತೋರಿಸಲಿದ್ದಾರೆ. ಚಿಕ್ಕ ಹುಡುಗನ ಮುಖದ ಮೇಲೆ ರಕ್ತ, ನಡುಬೀದಿಯಲ್ಲಿ ಕೊಲೆ, ಪೊಲೀಸರ ಅಕ್ರಮ, ವೇಶ್ಯವಾಟಿಕೆ, ಅಂಡರ್ ವರ್ಲ್ಡ್ ಹೀಗೆ ಯಾವುದನ್ನ ಬಿಡದೆ ನಿಷ್ಪಕ್ಷಪಾತವಾಗಿ ತೆರೆ ಮೇಲೆ ತಂದಿದ್ದಾರೆ.[ಟೈಗರ್ ಶ್ರಾಫ್ 'ನಪುಂಸಕ': ಜಾಕಿ ಶ್ರಾಫ್ ಮಗನಿಗೆ ವರ್ಮ ಕಮೆಂಟ್]

ಇದು 'ಭಾಗ-1'.....

'ಗನ್ಸ್ ಅಂಡ್ ಥೈಯ್ಸ್' ಇದು ಮೊದಲ ಭಾಗ. ಒಟ್ಟು ನಾಲ್ಕು ಭಾಗಗಳು ತಯಾರಾಗುತ್ತಿದ್ದು, ಪ್ರತಿ ಭಾಗದಲ್ಲೂ 10 ಎಪಿಸೋಡ್ ಗಳನ್ನ ಒಳಗೊಂಡಿರುತ್ತಂತೆ.

ರಾಮ್ ಗೋಪಾಲ್ ವರ್ಮ ಉದ್ದೇಶ

''ರಾಮ್ ಗೋಪಾಲ್ ವರ್ಮಗೆ 'ಮುಂಬೈ ಮಾಫಿಯಾದ ಸತ್ಯ ಸಂಗಂತಿಗಳನ್ನ ಯಾವುದೇ ಕಟ್ಟುಪಾಡುಗಳಿಲ್ಲದೆ ನೇರವಾಗಿ, ಇದ್ದಿದ್ದಹಾಗೆ ಹೇಳಬೇಕು ಎನ್ನುವ ಆಸೆಯಂತೆ. ಆದ್ರೆ, ಅದನ್ನ ಸಿನಿಮಾ ತೋರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವೆಬ್ ಸೀರಿಸ್ ಆಯ್ಕೆ ಮಾಡಿಕೊಂಡಿದ್ದಾರೆ.

'ಗನ್ಸ್ ಅಂಡ್ ಥೈಯ್ಸ್' ಟೀಸರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Director Ram Gopal Varma’s New Web series 'Guns and Thighs' Teaser Released.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada