»   » ಕೋಕ್ ಗಿಂತ ಹಾಲೇ ಹೆಚ್ಚು ವಿಷಕಾರಕ: ಅಮೀರ್

ಕೋಕ್ ಗಿಂತ ಹಾಲೇ ಹೆಚ್ಚು ವಿಷಕಾರಕ: ಅಮೀರ್

Posted By:
Subscribe to Filmibeat Kannada

ಚೆನ್ನೈ. ಆ.13: ಹಿಂದಿ ಚಿತ್ರರಂಗದ ಪ್ರಬುದ್ಧ ನಟ ಎನಿಸಿರುವ ಅಮೀರ್ ಖಾನ್ ಈ ನಡುವೆ ವಿವಾದಗಳೊಡನೆ ಗಂಟು ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ತಮ್ಮ ಬ್ಲಾಗಿನಲ್ಲಿ ಬರೆವ ಲೇಖನಗಳಿಂದ ಒಂದಿಷ್ಟು ಕಿರಿಕಿರಿ ಸೃಷ್ಟಿಸಿದ ಅಮೀರ್ ಈಗ ತಮ್ಮ ನೆಚ್ಚಿನ ಪೇಯ ಕೋಕಾ ಕೋಲಾಕ್ಕೆ ಪ್ರಚಾರ ನೀಡುವ ಭರದಲ್ಲಿ ಭಾರತೀಯರು ಅಮೃತ ಸಮಾನ ಎಂದು ಭಾವಿಸುವ ಶುಭ್ರವಾದ ಹಾಲಿಗೆ ಕಳಂಕ ತರುವಂಥ ಮಾತುಗಳನ್ನಾಡಿದ್ದಾರೆ. ದಕ್ಷಿಣ ಭಾರತದ ಭಾಷೆಗಳಲ್ಲಿ ತಾರೇ ಜಮೀನ್ ಪರ್ ಚಿತ್ರವನ್ನು ಭಟ್ಟಿ ಇಳಿಸುವ ಹಂಚಿಕೆಯಲ್ಲಿರುವ ಅಮೀರ್ ಚೆನ್ನೈಗೆ ಬಂದಿದ್ದರು.

ಕೋಕಾಕೋಲಾದಲ್ಲಿ ಕ್ರಿಮಿನಾಶಕ ಇರುವುದು ಸಾಬೀತಾದ ಮೇಲೂ ನೀವು ಅದಕ್ಕೆ ಪ್ರಚಾರ ಕೊಡುವುದೇಕೆ ಎಂಬ ಪ್ರಶ್ನೆಗೆ ಉತ್ತರ ರೂಪದಲ್ಲಿ ಅಮೀರ್ ಹೇಳಿದಿಷ್ಟು: "ಕೋಕ್ ಇಂದ ಆರೋಗ್ಯಕ್ಕೆ ಏನು ಹಾನಿಯಿಲ್ಲ. ಬದಲಿಗೆ ದಿನನಿತ್ಯ ಉಪಯೋಗಿಸುವ ಹಾಲು, ನೀರು, ಮೊಟ್ಟೆ ಹಾಗೂ ತರಕಾರಿಗಳಲ್ಲೇ ಹೆಚ್ಚಿನ ಪ್ರಮಾಣದ ಕಲುಷಿತ ರಾಸಾಯನಿಕಗಳಿರುತ್ತದೆ. ಕ್ರಿಮಿನಾಶಕದ ಪ್ರಮಾಣದ ಕೋಕ್ ಗಿಂತ ಹಾಲಿನಲ್ಲೇ ಹೆಚ್ಚು" ಎಂದಿದ್ದಾರೆ. ನಾನು ಎಳೆಯ ವಯಸ್ಸಿನಲ್ಲಿದ್ದಾಗನಿಂದ ಕೋಕ್ ಕುಡಿಯುತ್ತಿದ್ದೇನೆ. ಕೋಕ್ ಅಂದರೆ ನನಗೆ ಇಷ್ಟ. ಶಾಲಾ ಮಕ್ಕಳು ಹಾನಿಕಾರಕ ಪೇಯವನ್ನು ಕುಡಿದರೆ ಏನು ಗತಿ ಎಂದು ಕೇಳಿದರೆ, ನಿಮ್ಮ ಪ್ರಶ್ನೆಯಲ್ಲಿ ಹುರುಳಿಲ್ಲ ಎಂದು ಉತ್ತರಿಸದೇ ಜಾಣ ನಟ ನುಣುಚಿಕೊಂಡಿದ್ದಾರೆ.

ಸ್ವಾಮಿನಿಷ್ಠೆಯ ಪರಮಾವಧಿಗೆ ಅಮೀರ್ ಜೀವಂತ ಉದಾಹರಣೆ ಎನ್ನಬಹುದು. ಅಮೆರಿಕದ ಕಂಪೆನಿಗಳು ಕೊಡುವ ಕಾಂಚನ ಕುಣಿಸಿದಂತೆ ಕುಣಿಯುವ ಈ ನಟರನ್ನು ಭವ್ಯ ಭಾರತದ ಭವಿಷ್ಯದ ನಾಗರೀಕರು ಅನುಕರಿಸುತ್ತಾ ಹಿಂಬಾಲಿಸುತ್ತಿದ್ದಾರೆ ಎನ್ನುವುದು ಶೋಚನೀಯ ಸಂಗತಿ.

(ದಟ್ಸ್ ಕನ್ನಡ ಜಾಲಿವುಡ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada