»   » ಹಾರುವ ಸಿಖ್ ಫರ್ಹಾನ್ ಅಖ್ತರ್ ನಿಮ್ಗೆ Role Model ಆಗಲಿ

ಹಾರುವ ಸಿಖ್ ಫರ್ಹಾನ್ ಅಖ್ತರ್ ನಿಮ್ಗೆ Role Model ಆಗಲಿ

Posted By:
Subscribe to Filmibeat Kannada

ಈಗ ರೋಲ್ ಮಾಡೆಲ್, ಯೂತ್ ಐಕಾನ್ ಅಂತ ಯಾರಿದ್ದಾರೆ ಹೇಳಿ? ಅದೂ ಸಿನಿಮಾ ಕ್ಷೇತ್ರದಲ್ಲಂತೂ ಯಾರೂ ಇಲ್ಲ. ದುಬೈನಿಂದ ಹಾರಿಬಂದ ಕನ್ನಡತಿ ಐಶ್ವರ್ಯಾ ರೈರನ್ನು ಸ್ವಾಗತಿಸಲು ಆಕೆಯ ಪತಿ ಅಭಿಶೇಕ್ ಬಚ್ಚನ್ ಬಂದರೆ ಅದು ಬ್ರೇಕಿಂಗ್ ನ್ಯೂಸ್ ಆಗುವ ಇಂದಿನ ದಿನಮಾನದಲ್ಲಿ ಯಾರತ್ತ ರೋಲ್ ಮಾಡೆಲ್ ಎಂದು ಕತ್ತೆತ್ತಿ/ಎದೆಯುಬ್ಬಿಸಿ ನೋಡುವುದು?

ಏನೋ, ಅತ್ತ ಉತ್ತರಾಖಂಡದಲ್ಲಿ ಜಲಪ್ರಳಯದಲ್ಲಿ ಸಿಕ್ಕಿಕೊಂಡವರನ್ನು ರಕ್ಷಿಸುತ್ತಿರುವ ಸೈನಿಕರ ಬಗ್ಗೆಯಾದರೂ ಒಂದಷ್ಟು ಹೆಮ್ಮೆ ಮೂಡುತ್ತದೆ. ಆದು ಬಿಟ್ಟರೆ ನಮ್ಮ ಮಧ್ಯೆ ಇಂದಿನ ಯುವಜನಾಂಗಕ್ಕೆ ಪ್ರೇರಣೆಯಾಗಬಲ್ಲ ವ್ಯಕ್ತಿಗಳು ಎಲ್ಲಿದ್ದಾರೆ?

ಯಾವುದೇ ಅಣೆ ಅಡೆತಡೆಯಿಲ್ಲದೆ ಯುವಶಕ್ತಿ ನಿರ್ವೀಯವಾಗುತ್ತಿರುವ ಇಂದಿನ ದಿನಗಳಲ್ಲಿ, ಈ ಹಿಂದೆ ಭಾರತ ಯುವಜನತೆಗೆ ಅಪಾರ ಪ್ರೇರಣೆಯಾಗಿದ್ದ 'ಹಾರುವ ಸಿಖ್' ಮಿಲ್ಕಾ ಸಿಂಗ್ ಮೂಲಕ ಫರ್ಹಾನ್ ಅಖ್ತರ್ ಎಂಬ ಬಾಲಿವುಡ್ ಯುವಕ ಇಂದಿನ ಯುವಜನತೆಗೆ ಮಾರ್ಗದರ್ಶಕನಾಗಿ ನಾನಿದ್ದೇನೆ ಎಂದು ಎದೆಯುಬ್ಬಿಸಿ ಹೇಳಿದ್ದಾನೆ.

'ಹಾರುವ ಸಿಖ್'ನನ್ನೇ ಮೀರಿಸುವ ಫರ್ಹಾನ್ ಅಖ್ತರ್

ಏನಪ್ಪಾ ಅಂದರೆ ಬಾಲಿವುಡ್ ನಲ್ಲಿ ಈಗಾಗಲೇ ನಾನಾ ಅವತಾರಗಳಲ್ಲಿ ವಿಜೃಂಭಿಸಿರುವ ಫರ್ಹಾನ್ ಅಖ್ತರ್ ಎಂಬ ನಟ 'ಹಾರುವ ಸಿಖ್' ಮಿಲ್ಕಾ ಸಿಂಗ್ ಪಾತ್ರಧಾರಿಯಾಗಿ Bhaag Milkha Bhaag ಸಿನಿಮಾದಲ್ಲಿ ನಟಿಸಿದ್ದಾನೆ. ಅಲ್ಲಲ್ಲ 'ಹಾರುವ ಸಿಖ್'ನನ್ನೇ ಮೀರಿಸುವ ಮತ್ತೊಬ್ಬ ಮಿಲ್ಕಾ ಸಿಂಗ್ ಆಗಿ ವಿಜೃಂಭಿಸಿದ್ದಾರೆ.

ಯುವಕರು ವ್ಯಾಯಾಮ ಶಾಲೆಗಳತ್ತ ದೌಡು

ಅದಕ್ಕಾಗಿ ಆತ ನಡೆಸಿರುವ ದೈಹಿಕ ಕಸರತ್ತಿನ ಬಗ್ಗೆ ಕೇಳಿದರೆ/ ನೋಡಿದರೆ ನಿದ್ದೆಯಲ್ಲಿರುವ ನಮ್ಮ ಯುವಕರು ಖಂಡಿತ ಧಿಡಿಗ್ಗನೆ ಎದ್ದು ವ್ಯಾಯಾಮ ಶಾಲೆಗಳತ್ತ ಹಾರುವುದು ಗ್ಯಾರಂಟಿ. ನಾನಾ ಮಂಗ್ಯಾಟಗಳ ಮೂಲಕ ಅದೆಂಥದ್ದೋ ಸಿಕ್ಸ್ ಪ್ಯಾಕ್ ಕಥೆ ಕಟ್ಟುವ/ ಯುವತಿಯರಿಗಾಗಿ ಜೀರೋ ಸೈಜ್ ಬಗ್ಗೆ ಮಾತನಾಡುವ ನಟೀಮಣಿಗಳ ಮಧ್ಯೆ ಒಬ್ಬ ಫರ್ಹಾನ್ ಅಖ್ತರ್ ಸದೃಢವಾಗಿ ಎದ್ದುನಿಂತಿದ್ದಾನೆ.

ಜಾವೆದ್ ಅಖ್ತರ್-ಹನಿ ಇರಾನಿ ದಂಪತಿ ಸುಪುತ್ರ

ಅಂದಹಾಗೆ 39 ವರ್ಷದ ಫರ್ಹಾನ್ ಅಖ್ತರ್, ಜಾವೆದ್ ಅಖ್ತರ್ ಮತ್ತು ಹನಿ ಇರಾನಿ ದಂಪತಿಯ ಸುಪುತ್ರ. ಈಗಾಗಲೇ ಫರ್ಹಾನ್ ಅಖ್ತರ್ director, screenwriter, producer, actor, playback singer, lyricist ಮತ್ತು television host ಆಗಿ ಖ್ಯಾತಿ ಗಳಿಸಿದ್ದಾರೆ.

ದೇಹ ದಂಡಿಸಿರುವುದು ನೋಡಿದರೆ ಮೈ ಝುಂ

ಅದೇನೇ ಇರಲಿ 'ಹಾರುವ ಸಿಖ್' ಚಿತ್ರಕ್ಕಾಗಿ ಫರ್ಹಾನ್ ಅಖ್ತರ್ ದೇಹವನ್ನು ದಂಡಿಸಿ, ದುಡಿದಿರುವುದು ನೋಡಿದರೆ ಮೈಝುಮ್ಮೆನ್ನುತ್ತದೆ. ಸ್ವತಃ 'ಹಾರುವ ಸಿಖ್' ಮಿಲ್ಕಾ ಸಿಂಗ್ ಅವರೇ ತಮ್ಮ ಕುರಿತಾದ ಚಿತ್ರವನ್ನು ನೋಡಿ ಕಣ್ಣೀರಾಗಿದ್ದಾರೆ.

Bhaag Milkha Bhaag ಮಿಸ್ ಮಾಡಬೇಡಿ:

ದಂತಕಥೆಯಾಗಿ 82 ವರ್ಷದ ಮಿಲ್ಕಾ ಸಿಂಗ್ ಇನ್ನೇನು ನಮ್ಮ ಸ್ಮೃತಿಪಟಲದಿಂದ ಕಣ್ಮರೆಯಾಗುತ್ತಿದ್ದಾರೆ ಎನ್ನುವಾಗ ಫರ್ಹಾನ್ ಅಖ್ತರ್ ಅದನ್ನು ಮತ್ತೊಮ್ಮೆ ದೃಶ್ಯೀಕರಿಸಿ ನಮ್ಮ ಮುಂದೆ ಕಾಣಿಸುತ್ತಾರೆ. ಜುಲೈ 12ಕ್ಕೆ ಬಿಡುಗಡೆಯ ಭಾಗ್ಯ ಕಾಣಲಿರುವ Bhaag Milkha Bhaag ಚಿತ್ರವನ್ನು ಮಿಸ್ ಮಾಡ್ಕೋಬೇಡಿ.

English summary
Milkha Singh watch Bhaag Milkha Bhaag with tears. I burst into tears after watching Bhaag Milkha Bhaag, says Milkha Singh Legendary athlete Milkha Singh said that some scenes of soon-to-release (on July 12) Bhaag Milkha Bhaag, his biopic by Rakeysh Omprakash Mehra, made him emotional as they reminded him of his days of hardship and struggle.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada