For Quick Alerts
  ALLOW NOTIFICATIONS  
  For Daily Alerts

  ಮೆಕ್ಸಿಕೊ ಬ್ಯೂಟಿಗೆ ಮಿಸ್ ಯೂನಿವರ್ಸ್ 2021 ಕಿರೀಟ: ಕರಾವಳಿ ಸುಂದರಿಗೆ ಎಷ್ಟನೇ ಸ್ಥಾನ?

  |

  2021ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟ ಮೆಕ್ಸಿಕೊ ಸುಂದರಿಯ ಪಾಲಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ನಡೆದ 69ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮೆಕ್ಸಿಕೊದ ಆಂಡ್ರಿಯಾ ಮೆಜಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

  ಕೊರೋನಾ ಪ್ರಶ್ನೆಗೆ ಉತ್ತರ ಕೊಟ್ಟು ಮಿಸ್ ಯೂನಿವರ್ಸ್ ಆದ್ರು ಆಂಡ್ರಿಯಾ ಮೆಜಾ | Filmibeat Kannada

  ವಿಶ್ವದಾದ್ಯಂತ ಬಂದಿದ್ದ 73 ಸ್ಪರ್ಧಿಗಳ ಜೊತೆ ಸ್ಪರ್ಧಿಸಿ ಆಂಡ್ರಿಯಾ ಕಿರೀಟ ತನ್ನದಾಗಿಸಿಕೊಂಡಿದ್ದಾರೆ. 2020ರ ಮಿಸ್ ಯೂನಿವರ್ಸ್ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ ಕಿರೀಟ ಧಾರಣೆ ಮಾಡಿದರು. ವಿನ್ನರ್ ಹೆಸರು ಘೋಷಿಸುತ್ತಿದ್ದಂತೆ ಆಂಡ್ರಿಯಾ ಒಮ್ಮೆ ಸ್ಟನ್ ಆದರು.

  ಆಂಡ್ರಿಯಾಗೆ ಭಾರತದ ಮಂಗಳೂರು ಮೂಲದ ಸುಂದರಿ ಆಡ್ಲೈನ್ ಕ್ಯಾಸ್ಟೆಲಿನೊ ಕೂಡ ಪ್ರಬಲ ಸ್ಪರ್ಧಿಯಾಗಿಯಾಗಿದ್ದರು. ಟಾಪ್ 5 ನಲ್ಲಿ ಭಾರತದ ಸ್ಪರ್ಧಿ ಆಡ್ಲೈನ್ ಕ್ಯಾಸ್ಟೆಲಿನೊ ಕೂಡ ಸ್ಥಾನ ಪಡೆದಿದ್ದಾರೆ. ಗೆಲ್ಲುವ ಬರವಸೆ ಹೊಂದಿದ್ದ ಕ್ಯಾಸ್ಟೆಲಿನೊ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

  ಆಡ್ಲೈನ್ ಕ್ಯಾಸ್ಟೆಲಿನೊ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಬಾರಿ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಮೂರನೇ ರನ್ ಅಪ್ ಆಗಿ ಹೊರಹೊಮ್ಮಿದ್ದಾರೆ.

  ಇನ್ನು ಆಂಡ್ರಿಯಾ ಮೆಜಾ ಈ ಬಾರಿ ಗೆದ್ದು ಬೀಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಿರೀಟ ಗೆದ್ದ ಮೆಕ್ಸಿಕೊದ ಮೂರನೇ ಸುಂದರಿ ಎನ್ನುವ ಹೆಗ್ಗಳಿಕೆ ಗಳಿಸಿದ್ದಾರೆ. ಆಂಡ್ರಿಯಾ ಮೆಜಾ ಮಾಡಲಿಂಗ್ ಜೊತೆಗೆ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

  ಆಂಡ್ರಿಯಾ ಮೆಜಾ ಲಿಂಗ ಸಮಾನತೆ ಬಗ್ಗೆ ಧ್ವನಿ ಎತ್ತಿದ್ದು ಸಾಕಷ್ಟು ಹೋರಾಟ ಮಾಡಿದ್ದಾರೆ. 26 ವರ್ಷದ ಆಂಡ್ರಿಯಾ ಚಿಹೋವಾ ನಗದಲ್ಲಿ ಜನಿಸಿದರು. ಚಿಹೋವಾ ಆಟಾನಮಸ್ ವಿಶ್ವವಿದ್ಯಾಲಯದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಪದವಿ ಪಡೆದರು. ಮಿಸ್ ಯೂನಿವರ್ಸ್ ಆಗಿ ಗೆದ್ದು ಬೀಗಿರುವ ಆಂಡ್ರಿಯಾಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

  English summary
  69th Miss Universe: Andrea Meza of Mexico gets the crown. India's Adline Castelino placed 4th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X