»   » ಶ್ರೀದೇವಿಯನ್ನ ಬೋನಿ ಕೈಹಿಡಿದಾಗ, ಮೊದಲ ಪತ್ನಿ ಮೋನಾಗಾದ ಆಘಾತ ಅಷ್ಟಿಷ್ಟಲ್ಲ.!

ಶ್ರೀದೇವಿಯನ್ನ ಬೋನಿ ಕೈಹಿಡಿದಾಗ, ಮೊದಲ ಪತ್ನಿ ಮೋನಾಗಾದ ಆಘಾತ ಅಷ್ಟಿಷ್ಟಲ್ಲ.!

Posted By:
Subscribe to Filmibeat Kannada
ಶ್ರೀದೇವಿಯನ್ನ ಬೋನಿ ವರಿಸಿದಾಗ , ಮೊದಲ ಪತ್ನಿಗಾದ ಆಘಾತ ಅಷ್ಟಿಷ್ಟಲ್ಲ.! | FIlmibeat Kannada

ನಿರ್ಮಾಪಕ ಬೋನಿ ಕಪೂರ್ ಪತ್ನಿ ಶ್ರೀದೇವಿ ಇನ್ನು ನೆನಪು ಮಾತ್ರ. ಪ್ರೀತಿಯ ಪತ್ನಿಯನ್ನು ಕಳೆದುಕೊಂಡ ಬೋನಿ ದುಃಖತಪ್ತರಾಗಿದ್ದಾರೆ. ಅಷ್ಟಕ್ಕೂ, ಬೋನಿ ಕಪೂರ್ ಗೆ ಶ್ರೀದೇವಿ ಎರಡನೇ ಪತ್ನಿ. ಬೋನಿ ಕಪೂರ್ ಮೊದಲ ಪತ್ನಿ ಮೋನಾ ಕಪೂರ್ ಆರು ವರ್ಷಗಳ ಹಿಂದೆಯೇ ಇಹಲೋಕ ತ್ಯಜಿಸಿದ್ದರು. ಕ್ಯಾನ್ಸರ್ ರೋಗಕ್ಕೆ ತುತ್ತಾದ ಮೋನಾ ಕಪೂರ್ 2012, ಮಾರ್ಚ್ 25 ರಂದು ಕೊನೆಯುಸಿರೆಳೆದರು.

ಅಸಲಿಗೆ, ಬೋನಿ ಕಪೂರ್ ಜೀವನಕ್ಕೆ ನಟಿ ಶ್ರೀದೇವಿ ಬಂದ್ಮೇಲೆ, ಮೋನಾ ಕಪೂರ್ ಭವಿಷ್ಯವೇ ಅತಂತ್ರವಾಯ್ತು. ಶ್ರೀದೇವಿಯನ್ನ ಮದುವೆ ಆಗಲು, ಮೋನಾ ಕಪೂರ್ ಗೆ ಬೋನಿ ಕಪೂರ್ ವಿಚ್ಛೇದನ ನೀಡಿದರು.

ತಮ್ಮ ಸಂಸಾರ ಮುರಿದು ಬಿದ್ದಾಗ ಮೋನಾ ಕಪೂರ್ ಗೆ ಆದ ಆಘಾತ ಅಷ್ಟಿಷ್ಟಲ್ಲ. ಅವತ್ತು ತಮಗಾದ ನೋವು, ಎದುರಿಸಿದ ಸಂಕಷ್ಟವನ್ನ ಮೋನಾ ಕಪೂರ್ ಕೆಲ ಪತ್ರಿಕಾ ಮಿತ್ರರ ಜೊತೆಗೆ ಹಂಚಿಕೊಂಡಿದ್ದರು. ಅಂದು ಮೋನಾ ಕಪೂರ್ ನೀಡಿದ್ದ ಸಂದರ್ಶನದ ಅನುವಾದ ಇಲ್ಲಿದೆ ಓದಿರಿ...

ನಮ್ಮದು ಅರೇಂಜ್ಡ್ ಮ್ಯಾರೇಂಜ್

''ಬೋನಿ ಕಪೂರ್ ಜೊತೆಗೆ ನನ್ನ ಮದುವೆಯನ್ನ ಕುಟುಂಬದವರು ನಿಶ್ಚಯಿಸಿದರು. ನಮ್ಮದು ಅರೇಂಜ್ಡ್ ಮ್ಯಾರೇಜ್. ನಾನು ಬೋನಿ ಕಪೂರ್ ರನ್ನ ಮದುವೆ ಆದಾಗ ನನ್ನ ವಯಸ್ಸು 19 ವರ್ಷ. ಅವರು ನನಗಿಂತ ಹತ್ತು ವರ್ಷ ದೊಡ್ಡವರು. 13 ವರ್ಷಗಳ ಕಾಲ ನಾವು ಸಂಸಾರ ಮಾಡಿದ್ವಿ. ಬೇರೊಬ್ಬಳನ್ನ ನನ್ನ ಪತಿ ಪ್ರೀತಿಸುತ್ತಿದ್ದಾರೆ ಎಂದು ಅರಿವಾದಾಗ ನನಗಾದ ಆಘಾತ ಅಷ್ಟಿಷ್ಟಲ್ಲ'' - ಮೋನಾ ಕಪೂರ್, ಬೋನಿ ಕಪೂರ್ ಮೊದಲ ಪತ್ನಿ

ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

ಶ್ರೀದೇವಿ ಹೊಟ್ಟೆಯಲ್ಲಿ ಮಗು ಇತ್ತು

''ಅನೈತಿಕ ಸಂಬಂಧಗಳ ಬಗ್ಗೆ ನಾನು ಕೇಳಿದ್ದೆ, ಪತ್ರಿಕೆಗಳಲ್ಲಿ ಓದಿದ್ದೆ. ಆದ್ರೆ, ಅದರಿಂದ ನನ್ನ ಮದುವೆಯೇ ಮುರಿದು ಬಿತ್ತು. ನನಗೆ ಗೌರವ ಬಹಳ ಮುಖ್ಯ. ಪ್ರೀತಿ ಆಮೇಲೆ. ಬದಲಾವಣೆ ಜಗದ ನಿಯಮ ನಿಜ. ಬೋನಿ ಕಪೂರ್ ಗೆ ಬೇರೊಬ್ಬರು ಬೇಕಾಗಿತ್ತು. ನಾನಲ್ಲ. ಇನ್ನೊಂದು ಅವಕಾಶ ಕೊಡಲು ನಮ್ಮಿಬ್ಬರ ಸಂಬಂಧದಲ್ಲಿ ಏನೂ ಉಳಿದಿರಲಿಲ್ಲ. ಯಾಕಂದ್ರೆ, ಶ್ರೀದೇವಿ ಹೊಟ್ಟೆಯಲ್ಲಿ ಅದಾಗಲೇ ಒಂದು ಮಗು ಬೆಳೆಯುತ್ತಿತ್ತು. ಹೀಗಾಗಿ, ನಾನು ಬೋನಿ ಜೀವನದಿಂದ ಹೊರಗೆ ಬಾರದೆ ಬೇರೆ ದಾರಿಯೇ ಇರಲಿಲ್ಲ'' - ಮೋನಾ ಕಪೂರ್, ಬೋನಿ ಕಪೂರ್ ಮೊದಲ ಪತ್ನಿ

ಸಂಕಟ ಅನುಭವಿಸಿದ್ದು ಮಕ್ಕಳು

''ನನಗಿಂತ ಹೆಚ್ಚಾಗಿ ನನ್ನ ಮಗ ಅರ್ಜುನ್ ಹಾಗೂ ಮಗಳು ಅನ್ಷುಲಾ ಹೆಚ್ಚು ಸಂಕಟ ಅನುಭವಿಸಿದರು. ಅವರಿಬ್ಬರು ಸ್ಕೂಲ್ ಗೆ ಹೋಗುತ್ತಿದ್ದಾಗ, ಕ್ಲಾಸ್ ಮೇಟ್ ಗಳು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು. ಕಾಲ ಕ್ರಮೇಣ ಅರ್ಜುನ್ ಹಾಗೂ ಅನ್ಷುಲಾಗೆ ಮಾನಸಿಕ ಸ್ಥೈರ್ಯ ಹೆಚ್ಚಾಯ್ತು'' - ಮೋನಾ ಕಪೂರ್, ಬೋನಿ ಕಪೂರ್ ಮೊದಲ ಪತ್ನಿ

ನನ್ನ ಜಾಗ ಕಸಿದುಕೊಂಡ ಹೀರೋಯಿನ್

''ನನ್ನ ಕುಟುಂಬದಲ್ಲಿ ನನ್ನ ತಂದೆ, ತಾಯಿ, ಸಹೋದರಿ ಎಲ್ಲರೂ ನನಗೆ ಸಪೋರ್ಟ್ ಮಾಡಿದರು. ಆದ್ರೆ, ಹೀರೋಯಿನ್ ಒಬ್ಬಳು ನನ್ನ ಜಾಗ ಕಸಿದುಕೊಂಡಾಗ, ''ನೀವು ತೂಕ ಇಳಿಸಬೇಕಿತ್ತು. ನೀವು ಸ್ಪಾ ಗೆ ಹೋಗಿ'' ಎಂಬೆಲ್ಲ ಸಲಹೆಗಳು ಚಿತ್ರರಂಗದಿಂದ ಬರಲು ಶುರು ಆಯ್ತು. ಆದ್ರೆ, ನನಗೆ ನನ್ನದೇ ರೀತಿಯಲ್ಲಿ ಗುರುತಿಸಿಕೊಳ್ಳುವ ಹಂಬಲ ಇತ್ತು'' - ಮೋನಾ ಕಪೂರ್, ಬೋನಿ ಕಪೂರ್ ಮೊದಲ ಪತ್ನಿ

ಪುಟಿದೆದ್ದ ಮೋನಾ ಕಪೂರ್

''ಯಾರ ಜೀವನದಲ್ಲಿ ನಿನಗೆ ಜಾಗ ಇಲ್ಲವೋ, ಅಂಥವರಿಗೆ ನಿನ್ನ ಜೀವನದಲ್ಲೂ ಜಾಗವಿಲ್ಲ'' ಎಂದು ನನ್ನ ಸ್ನೇಹಿತೆಯ ತಾಯಿ ಹೇಳಿದ ಮಾತು ನನಗೆ ಆಕಾಶವಾಣಿ ಆಯಿತು. ನಾನು ಸೋತಿಲ್ಲ, ನನ್ನ ಸಂಬಂಧ ಮಾತ್ರ ಸೋತಿದೆ ಎಂದು ನನಗೆ ಅರ್ಥ ಆಯಿತು'' - ಮೋನಾ ಕಪೂರ್, ಬೋನಿ ಕಪೂರ್ ಮೊದಲ ಪತ್ನಿ

ಟಿವಿ ಶೋ ನಿರ್ಮಾಪಕಿ ಆದ ಮೋನಾ

''ನನ್ನ ಸಹೋದರಿ ಜೊತೆಗೆ ಟಿವಿ ಪ್ರೊಡಕ್ಷನ್ ಶುರು ಮಾಡಿದೆ. 'ಯುಗ್', 'ವಿಲಾಯತಿ ಬಾಬು', 'ಹೇರಾ ಪೇರಿ' ಸೇರಿದಂತೆ ಹಲವು ಶೋಗಳನ್ನ ನಿರ್ಮಾಣ ಮಾಡಿದ್ವಿ. ಸಿನಿಮಾ ಸೆಟ್ ಗಳನ್ನ ಹಾಕಲು ಶುರು ಮಾಡಿದ್ವಿ. ಹಾಗೆ ಶುರುವಾಗಿದ್ದೇ 'ಫ್ಯೂಚರ್ ಸ್ಟುಡಿಯೋಸ್'' - ಮೋನಾ ಕಪೂರ್, ಬೋನಿ ಕಪೂರ್ ಮೊದಲ ಪತ್ನಿ

ಬೋನಿ ಖುಷಿ ಆಗಿರಬೇಕಿತ್ತು

''ನನ್ನ ಮಕ್ಕಳು ಅವರ ತಂದೆಯೊಂದಿಗೂ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ತಂದೆ ಜೊತೆಗೆ ಊಟ ಮಾಡ್ತಾರೆ, ಪಿಕ್ ನಿಕ್ ಗೂ ಹೋಗಿ ಬರ್ತಾರೆ. ನನಗೆ ಬೋನಿ ಮೇಲೆ ದ್ವೇಷ ಇಲ್ಲ. ತಂದೆಯಿಂದ ಮಕ್ಕಳನ್ನು ಬೇರ್ಪಡಿಸುವ ಕ್ರೌರ್ಯ ಮನಃಸ್ಥಿತಿ ನನಗಿರಲಿಲ್ಲ. ನನಗೆ ಬೋನಿ ಖುಷಿ ಆಗಿರಬೇಕಿತ್ತು. ಎಷ್ಟೇ ಆಗಲಿ, ನಾನು ನನ್ನ ಜಾಗವನ್ನ ಬಿಟ್ಟುಕೊಟ್ಟಿದ್ದೇ ಬೋನಿ ಸಂತೋಷವಾಗಿರಲಿ ಎಂಬ ಕಾರಣಕ್ಕೆ. ನನ್ನ ಜೀವನದಲ್ಲಿ ತುಂಬಾ ಏರಿಳಿತಗಳಾದವು. ಇಂದು ನನಗೆ ಯಾವುದರ ಬಗ್ಗೆಯೂ ಬೇಸರ ಇಲ್ಲ. ನನ್ನ ಜೋಳಿಗೆ ತುಂಬಿದೆ'' - ಮೋನಾ ಕಪೂರ್, ಬೋನಿ ಕಪೂರ್ ಮೊದಲ ಪತ್ನಿ

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಲು ಮೊದಲ ಪತಿ(?) ಬರಲೇ ಇಲ್ಲ!

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

English summary
During the struggle to find her own identity, Mona Kapoor had spoken about splintered marriage with Producer Boney Kapoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada