Don't Miss!
- News
ಸರ್ಕಾರದಿಂದ 84 ಸಾವಿರ ರೆಮಿಡಿಸ್ವಿರ್ ಖರೀದಿ: ಸುಧಾಕರ್
- Sports
ಐಪಿಎಲ್ 2021: ಪಂಜಾಬ್ vs ಚೆನ್ನೈ, ಪ್ಲೇಯಿಂಗ್ XI, ಅಪ್ಡೇಟ್ಸ್
- Automobiles
ಇ ಕಾಮರ್ಸ್ ಸೇವಾ ಕಂಪನಿಗೆ ಎಲೆಕ್ಟ್ರಿಕ್ ಸ್ಕೂಟರ್ ಒದಗಿಸಲಿದೆ ಒಕಿನಾವ
- Finance
Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋಟ್ಯಂತರ ಹಣ ವಂಚನೆ: ನಟಿ ಅಮೀಷಾ ಪಟೇಲ್ ವಿರುದ್ಧ ಪ್ರಕರಣ ದಾಖಲು
ಕೋಟ್ಯಂತರ ರೂಪಾಯಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಅಮೀಷಾ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ನೊಟೀಸ್ ಸಹ ಜಾರಿ ಆಗಿದೆ.
ಕಹೋನಾ ಪ್ಯಾರ್ ಹೇ, ಗದರ್ ಸೇರಿದಂತೆ ಇನ್ನೂ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಅಮೀಷಾ ಪಟೇಲ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ನಟಿಯು ವ್ಯಕ್ತಿಯೊಬ್ಬರಿಗೆ 2.50 ಕೋಟಿ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಿವುಡ್ ನಟಿ ಅಮೀಶಾ ಪಟೇಲ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ
ನಟಿ ಅಮೀಷಾ ಪಟೇಲ್ ವಿರುದ್ಧ ಅಜಯ್ ಕುಮಾರ್ ಸಿಂಗ್ ಎಂಬುವರು ಜಾರ್ಖಂಡ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಟಿ ಅಮಿಷಾ ಪಟೇಲ್ 2017 ರ ಸಮಯದಲ್ಲಿ ಅಜಯ್ ಗೆ ಪರಿಚಯವಾಗಿ, ತಮ್ಮ ನಿರ್ಮಾಣದ ಸಿನಿಮಾ 'ದೇಸಿ ಮ್ಯಾಜಿಕ್' ನಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿದ್ದರಂತೆ.

ಅಮೀಷಾ ಖಾತೆಗೆ 2.50 ಕೋಟಿ ಹಣ ವರ್ಗಾವಣೆ
ಅಂತೆಯೇ ಅಜಯ್ ಕುಮಾರ್ ಸಿಂಗ್, 2.50 ಕೋಟಿ ಹಣವನ್ನು ಅಮೀಷಾ ಪಟೇಲ್ ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಅಮೀಷಾ ಪಟೇಲ್ 'ದೇಸಿ ಮ್ಯಾಜಿಕ್' ಸಿನಿಮಾದ ನಿರ್ಮಾಣ ಮಾಡಲಿಲ್ಲ. ಸಿನಿಮಾ ನಿಂತುಹೋಗಿದೆ.

ಅಮೀಷಾ ನೀಡಿದ್ದ ಚೆಕ್ ಬೌನ್ಸ್ ಆಗಿದೆ
ಅಜಯ್ ಕುಮಾರ್ ಅವರು ತಮ್ಮ ಹಣ ವಾಪಸ್ ಕೇಳಿದ್ದಕ್ಕೆ ಬಹು ಸತಾಯಿಸಿದ ಅಮೀಷಾ ಪಟೇಲ್ ತಮ್ಮ ಹೆಸರಿನ ಚೆಕ್ ನೀಡಿದ್ದಾರೆ. ಆದರೆ ಆ ಚೆಕ್ ಸಹ ಬೌನ್ಸ್ ಆಗಿದೆ. ಹೀಗಾಗಿ ಅಜಯ್ ಕುಮಾರ್ ಅವರು ಅಮೀಷಾ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಂಧನ ವಾರೆಂಟ್ ಸಹ ಹೊರಡಿಸಲಾಗಿತ್ತು
ವಿಚಾರಣೆ ನಡೆಸಿರುವ ನ್ಯಾಯಾಲಯ ಎರಡೂ ಪಕ್ಷಗಳವರು ಪ್ರಕರಣದ ಬಗ್ಗೆ ತಮ್ಮ ಲಿಖಿತ ಹೇಳಿಕೆಯನ್ನು ದಾಖಲಿಸುವಂತೆ ಹೇಳಿದ್ದು, ಎರಡು ವಾರದ ಕಾಲಾವಕಾಶ ನೀಡಿದೆ. ಇದೇ ಪ್ರಕರಣದಲ್ಲಿ 2019 ರಲ್ಲಿ ಅಮಿಷಾ ಪಟೇಲ್ ವಿರುದ್ಧ ರಾಂಚಿ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿತ್ತು. ನ್ಯಾಯಾಲಯಕ್ಕೆ ಹಾಜರಾದ ಅಮೀಷಾ ಪಟೇಲ್, ಆ ನಂತರ ಜಾಮೀನು ಪಡೆದುಕೊಂಡರು.

ತೆಲುಗು-ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ
ಅಮೀಷಾ ಪಟೇಲ್ ಅವರು 2000 ರಲ್ಲಿ ಬಿಡುಗಡೆ ಆದ 'ಕಹೋ ನಾ ಪ್ಯಾರ್ ಹೇ' ಸಿನಿಮಾ ಮೂಲಕ ಹೃತಿಕ್ ರ ರೋಷನ್ ಜೊತೆ ಸಿನಿಮಾ ರಂಗಕ್ಕೆ ಕಾಲಿಟ್ಟರು. ಆ ನಂತರ ಅವರು ಹಲವಾರು ಹಿಟ್ ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ತೆಲುಗಿನಲ್ಲಿಯೂ ಸಹ ಪವನ್ ಕಲ್ಯಾಣ್, ಮಹೇಶ್ ಬಾಬು, ಜೂ ಎನ್‌ಟಿಆರ್ ಇನ್ನೂ ಕೆಲವು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ.