For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಾಗಿಲು ತೆರೆದ ಚಿತ್ರಮಂದಿರ: ಈ ವಾರ 6 ಕ್ಕೂ ಹೆಚ್ಚು ಹಿಂದಿ ಚಿತ್ರಗಳು ರಿ-ರಿಲೀಸ್

  |

  ಅಕ್ಟೋಬರ್ 15 ರಿಂದ ದೇಶಾದ್ಯಂತ ಚಿತ್ರಮಂದಿರಗಳು ಮತ್ತೆ ಕಾರ್ಯಾರಂಭ ಮಾಡುತ್ತಿದೆ. ಏಳು ತಿಂಗಳ ಬಳಿಕ ಸಿನಿಮಾ ಹಾಲ್‌ಗಳು ತೆರೆಯುತ್ತಿವೆ. ಆದ್ರೆ, ಯಾವುದೇ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಇದು ಕೇವಲ ಒಂದು ಇಂಡಸ್ಟ್ರಿಯ ಕಥೆಯಲ್ಲ, ಎಲ್ಲ ಇಂಡಸ್ಟ್ರಿಯಲ್ಲೂ ಇಂತಹದ್ದೆ ಸ್ಥಿತಿ.

  ಜನರನ್ನು ಥಿಯೇಟರ್‌ಗೆ ಆಕರ್ಷಿಸಲು ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಲಾಕ್‌ಡೌನ್ ವೇಳೆ ಆನ್‌ಲೈನ್‌ನಲ್ಲಿ ರಿಲೀಸ್ ಆಗಿದ್ದ ಮತ್ತು ಲಾಕ್‌ಡೌನ್‌ ಘೋಷಣೆಗೂ ಮುಂಚಿನ ವಾರದಲ್ಲಿ ತೆರೆಕಂಡಿದ್ದ ಚಿತ್ರಗಳು ಈಗ ಚಿತ್ರಮಂದಿರಕ್ಕೆ ಬರ್ತಿದೆ. ಸದ್ಯದ ಮಾಹಿತಿ ಪ್ರಕಾರ, ಹಿಂದಿಯಲ್ಲಿ ಆರು ಸಿನಿಮಾ ಈ ವಾರ ಮತ್ತೆ ರಿಲೀಸ್ ಆಗುತ್ತಿದೆ. ಯಾವುದು? ಮುಂದೆ ಓದಿ....

  'ಪಿಎಂ ನರೇಂದ್ರ ಮೋದಿ' ಬಯೋಪಿಕ್ ನಿರ್ಮಾಪಕರಿಗೆ ಜೀವ ಬೆದರಿಕೆ: ದೂರು ದಾಖಲು

  ಸುಶಾಂತ್ ಸಿಂಗ್ ಸಿನಿಮಾ ರಿಲೀಸ್

  ಸುಶಾಂತ್ ಸಿಂಗ್ ಸಿನಿಮಾ ರಿಲೀಸ್

  ಅಕ್ಟೋಬರ್ 15 ರಂದು ಅಜಯ್ ದೇವಗನ್, ಸೈಫ್ ಅಲಿ ಖಾನ್, ಕಾಜೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ತನ್ಹಾಜಿ ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಇದರ ಜೊತೆಗೆ 2018ರಲ್ಲಿ ಶಾಂತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ನಟಸಿಟಿದ್ದ ಕೇದರ್‌ನಾಥ್ ಚಿತ್ರವೂ ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ.

  ಆಯುಷ್ಮಾನ್ ಖುರಾನ್ ಚಿತ್ರ ಮರು ಬಿಡುಗಡೆ

  ಆಯುಷ್ಮಾನ್ ಖುರಾನ್ ಚಿತ್ರ ಮರು ಬಿಡುಗಡೆ

  2020ರ ಫೆಬ್ರವರಿ ತಿಂಗಳಲ್ಲಿ ಆಯುಷ್ಮಾನ್ ಖುರಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಶುಭಮಂಗಲ್ ಜ್ಯಾದ ಸಾವ್‌ಧಾನ್' ಸಿನಿಮಾ ಈ ವಾರ ಮತ್ತೆ ಪ್ರೇಕ್ಷಕರೆದುರು ಬರ್ತಿದೆ. ಇದರ ಜೊತೆಗೆ 2020 ಫೆಬ್ರವರಿಯಲ್ಲಿ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ ನಟಿಸಿದ್ದ 'ಮಲಾಂಗ್' ಸಿನಿಮಾ ತೆರೆಕಾಣುತ್ತಿದೆ.

  ತಪ್ಪಡ್ ಸಿನಿಮಾವೂ ರಿಲೀಸ್

  ತಪ್ಪಡ್ ಸಿನಿಮಾವೂ ರಿಲೀಸ್

  ತಾಪ್ಸಿ ನಟನೆಯ 'ತಪ್ಪಡ್' ಚಿತ್ರವೂ ಈ ವಾರ ತೆರೆಗೆ ಬರ್ತಿದೆ. ಇದರ ಜೊತೆ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟನೆಯ ವಾರ್ ಸಿನಿಮಾ ಇದೇ ವಾರ ಮರು ಬಿಡುಗಡೆಯಾಗುತ್ತಿದೆ.

  ಕಂಗನಾ ರಣಾವತ್ 'ತಲೈವಿ' ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಎದುರಾಗಿದೆ ಸಮಸ್ಯೆ

  ತನ್ನ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಪ್ರಶಾಂತ್ ನೀಲ್ | Filmibeat Kannada
  ಪಿಎಂ ನರೇಂದ್ರ ಮೋದಿ

  ಪಿಎಂ ನರೇಂದ್ರ ಮೋದಿ

  ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಕುರಿತು ಮೂಡಿ ಬಂದಿದ್ದ ''ಪಿಎಂ ನರೇಂದ್ರಮೋದಿ'' ಸಿನಿಮಾ ಅಕ್ಟೋಬರ್ 15 ರಂದು ಮತ್ತೆ ಥಿಯೇಟರ್‌ಗೆ ಬರ್ತಿದೆ. ಓಮಂಗ್ ಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರ ಮೇ 19, 2019ರಲ್ಲಿ ಬಿಡುಗಡೆಯಾಗಿತ್ತು. ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದರು. ಅಮಿತ್ ಶಾ ಪಾತ್ರದಲ್ಲಿ ಮನೋಜ್ ಜೋಶಿ, ಬೊಮ್ಮನ್ ಹಿರಾನಿ ರತನ್ ಟಾಟಾ, ಅಂಜನ್ ಶ್ರೀವಸ್ತವ್ ಅವರು ವಾಜಪೇಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  As cinemas ready to reopen their doors from this week onwards, more then 6 Hindi films scheduled for re-release this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X