»   » ಈ ವರ್ಷ ಹಿಂದಿಯಲ್ಲಿ ನೋಡಬಹುದಾದ 'ಬಿಗ್' ಚಿತ್ರಗಳು

ಈ ವರ್ಷ ಹಿಂದಿಯಲ್ಲಿ ನೋಡಬಹುದಾದ 'ಬಿಗ್' ಚಿತ್ರಗಳು

Posted By:
Subscribe to Filmibeat Kannada

ಬಾಲಿವುಡ್ ಸಿನಿಮಾಗಳಿಗೆ ದೊಡ್ಡ ಮಾರ್ಕೆಟ್ ಇದೆ. ಹಿಂದಿ ಚಿತ್ರಗಳನ್ನ ದೇಶದ ಎಲ್ಲ ಕಡೆಯೂ ನೋಡುವ ಪ್ರೇಕ್ಷಕರಿದ್ದಾರೆ. ಕಳೆದ ವರ್ಷದ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳು ಅಷ್ಟಾಗಿ ಅಬ್ಬರಿಸಲಿಲ್ಲ. ಖಾನ್, ಕಪೂರ್ ಗಳು ಅದ್ಯಾಕೋ ಸೈಲಾಂಟ್ ಆಗಿಬಿಟ್ಟರು.

ಕಳೆದ ವರ್ಷ ಬಾಲಿವುಡ್ ನಲ್ಲೂ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದ 'ಬಾಹುಬಲಿ-2' ಚಿತ್ರದ್ದೇ ಹವಾ. ಆದ್ರೆ, ಈ ವರ್ಷ ಸಲ್ಮಾನ್ ಖಾನ್, ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್ ಚಿತ್ರಗಳು ರೇಸ್ ನಲ್ಲಿದೆ. ಒಂದಕ್ಕಿಂತ ಒಂದು ಚಿತ್ರಗಳು ಕಥೆ ಹಾಗೂ ಪಾತ್ರಗಳಲ್ಲಿ ವಿಭಿನ್ನತೆ ಹೊಂದಿದೆ.

ಬಿಗ್ ಸ್ಟಾರ್ ಗಳ ಜೊತೆಯಲ್ಲಿ ದೀಪಿಕಾ ಪಡುಕೋಣೆ, ಕಂಗನಾ ರನೌತ್, ಐಶ್ವರ್ಯ ರೈ ಅಭಿನಯದ ಚಿತ್ರಗಳು ನಿರೀಕ್ಷೆ ಮೂಡಿಸಿದೆ. ಕೆಲವು ಯುವ ನಟಯರು ಇಂಡಸ್ಟ್ರಿಗೆ ಬರ್ತಿದ್ದಾರೆ. ಹಾಗಿದ್ರೆ, 2018 ರಲ್ಲಿ ಬಾಲಿವುಡ್ ಇಂಡಸ್ಟ್ರಿ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ.

'ಪದ್ಮಾವತ್' ಮತ್ತು 'ಪ್ಯಾಡ್ ಮ್ಯಾನ್'

ವಿವಾದ ಮೂಲಕವೇ ದೊಡ್ಡ ಸುದ್ದಿಯಾಗಿರುವ 'ಪದ್ಮಾವತ್' ಚಿತ್ರದಲ್ಲಿ ಏನಿದೆ ಎಂಬ ಕುತೂಹಲದಿಂದಲೇ ಈ ಚಿತ್ರವನ್ನ ಹಲವು ಮಂದಿ ನೋಡಲಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಚಿತ್ರವೂ ನಿರೀಕ್ಷೆ ಹೆಚ್ಚಿಸಿದೆ. ಇವರೆಡು ಚಿತ್ರಗಳು ಜನವರಿ 25 ರಂದು ಬಿಡುಗಡೆಯಾಗುತ್ತಿದೆ.

ಐಶ್ವರ್ಯ ರೈ ಸಿನಿಮಾ

ಅನಿಲ್ ಕಪೂರ್ ಮತ್ತು ಐಶ್ವರ್ಯ ರೈ ಬಚ್ಚನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ 'ಫೆನ್ನಿ ಖಾನ್'. 2016ರಲ್ಲಿ ತೆರೆಕಂಡ 'ಹೇ ದಿಲ್ ಹೈ ಮುಷ್ಕಿಲ್' ಚಿತ್ರದ ನಂತರ ಐಶ್ ಕಾಣಿಸಿಕೊಂಡಿರುವ ಸಿನಿಮಾ. ಫೆಬ್ರವರಿ 2 ರಂದು 'ಫೆನ್ನಿ ಖಾನ್' ಬಿಡುಗಡೆಯಾಗುತ್ತಿದೆ.

ಕಂಗನಾ ರನೌತ್ ಚಿತ್ರ

ಕಳೆದ ವರ್ಷ ಕಂಗನಾ ಅಭಿನಯದ 'ಸಿಮ್ರಾನ್' ಸಿನಿಮಾ ರಿಲೀಸ್ ಆಗಿತ್ತು. ಈ ವರ್ಷ 'ಮಣಿಕರ್ಣಿಕಾ' ಬಿಡುಗಡೆಯಾಗಲಿದೆ. ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರ ಜೀವನ ಆಧಾರಿತ ಸಿನಿಮಾ ಇದಾಗಿದ್ದು, ಏಪ್ರಿಲ್ 27 ರಂದು ಬಿಗ್ ಸ್ಕ್ರೀನ್ ಮೇಲೆ ಬರಲಿದೆ.

ಸಲ್ಮಾನ್ ಖಾನ್ 'ರೇಸ್'

'ಟೈಗರ್ ಜಿಂದಾ ಹೈ' ಚಿತ್ರದ ಮೂಲಕ 2017ಕ್ಕೆ ಗುಡ್ ಬೈ ಹೇಳಿದ್ದ ಸಲ್ಮಾನ್ ಈ ವರ್ಷ 'ರೇಸ್-3' ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ. ರೆಮೋ ಡಿಸೋಜಾ ನಿರ್ದೇಶನ ಮಾಡುತ್ತಿರುವ ಈ ಚಿತ್ರ ವರ್ಷದ ಮಧ್ಯದಲ್ಲಿ ಬರುವ ಸಾಧ್ಯತೆ ಇದೆ.

ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ: ಶೂಟಿಂಗ್ ರದ್ದು

ಶ್ರೀದೇವಿ ಪುತ್ರಿಯ ಚಿತ್ರ

ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿಯ ಮಗಳು ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ದಡಕ್' ಇದೇ ವರ್ಷ ತೆರೆಕಾಣಲಿದೆ. ಮರಾಠಿಯ 'ಸೈರಾಟ್' ಚಿತ್ರದ ರೀಮೇಕ್ ಇದಾಗಿದ್ದು, ಇಶಾಂತ್ ಕತಾರ್ ನಾಯಕನಾಗಿದ್ದಾರೆ. ಬಹುಶಃ ಜುಲೈ ತಿಂಗಳಿನಲ್ಲಿ ಬೆಳ್ಳಿತೆರೆಗೆ ಬರಲಿದೆ.

ಅಮೀರ್ ಖಾನ್ ಸಿನಿಮಾ

'ದಂಗಲ್' ಚಿತ್ರದ ನಂತರ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಅಮೀರ್ ಖಾನ್, 'ಸೀಕ್ರೆಟ್ ಸೂಪರ್ ಸ್ಟಾರ್' ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದರು. 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಕ್ಕಾಗಿ ಭರ್ಜರಿ ಶೂಟಿಂಗ್ ಮಾಡ್ತಿರುವ ಅಮೀರ್ ಈ ವರ್ಷಾಂತ್ಯಕ್ಕೆ ಬರಲಿದ್ದಾರೆ. ದಾಖಲೆಗಳ ಪ್ರಕಾರ 'ಥಗ್ಸ್ ಆಫ್ ಹಿಂದೂಸ್ತಾನ್' ಅಕ್ಟೋಬರ್ 7 ರಂದು ತೆರೆಕಾಣಲಿದೆ.

ಚೀನಾದಲ್ಲಿ ಹೊಸ ದಾಖಲೆ ಬರೆದ ಅಮೀರ್ ಖಾನ್

ಶಾರೂಖ್ ಖಾನ್ 'ಜೀರೋ'

ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಸದ್ದು ಮಾಡಿರುವ ಶಾರೂಕ್ ಖಾನ್ ಸಿನಿಮಾ 'ಜೀರೋ'. ಡಿಸೆಂಬರ್ ಗೆ ಶಾರೂಖ್ 'ಜೀರೋ' ಅವತಾರದಲ್ಲಿ ಎಲ್ಲರನ್ನ ನಕ್ಕು ನಗಿಸಲಿದ್ದಾರೆ.

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಇನ್ನು ಮುಂದೆ 'ಜೀರೋ'

ಬೇರೆ ಬೇರೆ ಸಿನಿಮಾನೂ ಇದೆ

ಇನ್ನುಳಿದಂತೆ ರಾಣಿ ಮುಖರ್ಜಿ ಅಭಿನಯದ 'ಹಿಚ್ಕಿ', ಟೈಗರ್ ಶ್ರಾಫ್ ಅಭಿನಯದ 'ಭಾಗಿ-2', ಸುಶಾಂತ್ ಸಿಂಗ್ ರಜಪೂತ್ ಅಭಿನಯದ 'ಕೇದರಾನಾಥ್', ಸೋನಂ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ 'ವೀರೇ ದಿ ವೆಡ್ಡಿಂಗ್', ಅಕ್ಷಯ್ ಕುಮಾರ್ ಅಭಿನಯದ 'ಗೋಲ್ಡ್', ವರುಣ್ ಧವನ್ ಅಭಿನಯದ 'ಅಕ್ಟೋಬರ್' ಹಾಗೂ ಅಜಯ್ ದೇವಗನ್ ಅಭಿನಯದ 'ಟೋಟಲ್ ಧಮಾಲ್' ಚಿತ್ರಗಳು ಈ ವರ್ಷ ಹೆಚ್ಚು ನಿರಿಕ್ಷೆ ಮೂಡಿಸಿದೆ.

English summary
A lot of content based movies are produced in Bollywood, of late. And therefore, 2018 is going to be a great year for the movie enthusiasts. Here we have listed the most awaited Bollywood movies of 2018.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X