»   » ಕತ್ರಿನಾ ಕೈಫ್ ಭಾರೀ ಮುಜುಗರಕ್ಕೀಡಾದ ಘಟನೆಗಳು

ಕತ್ರಿನಾ ಕೈಫ್ ಭಾರೀ ಮುಜುಗರಕ್ಕೀಡಾದ ಘಟನೆಗಳು

Posted By:
Subscribe to Filmibeat Kannada

ಸೆಲೆಬ್ರಿಟಿಗಳು ಎಂದ ಮೇಲೆ ಮುಜುಗರ, ವಿವಾದ ಅಂಟಿಕೊಂಡೇ ಬರುತ್ತದೆ. ಯಾವ ತಂಟೆ ತಕರಾರು ಬೇಡವೆಂದು ಎಷ್ಟೇ ಜಾಗರೂಕತೆಯಿಂದ ಇದ್ದರೂ ಒಂದಲ್ಲಾ ಒಂದು ಕಿರಿಕಿರಿ ಅನುಭವಿಸುತ್ತಲೇ ಇರಬೇಕಾಗುತ್ತದೆ.

ವಿವಾದ, ಮುಜುಗರಕ್ಕೀಡಾಗುವ ಘಟನೆಯಿಂದ ಬಾಲಿವುಡ್ ನಲ್ಲಿ ಟಾಪ್ ಪಟ್ಟಿಯಲ್ಲಿರುವ ಕತ್ರಿನಾ ಕೈಫ್ ಕೂಡಾ ಹೊರತಾಗಿಲ್ಲ.

ವಿವಾದದಿಂದಲೇ ಬಾಲಿವುಡ್ ಜಗತ್ತಿಗೆ ಎಂಟ್ರಿ ಕೊಟ್ಟ ಕತ್ರಿನಾ, ರಣಬೀರ್ ವಿಚಾರದಲ್ಲಂತೂ ಸುದ್ದಿ, ಗಾಸಿಪ್ ಸುದ್ದಿಗಳಿಗೆ ಬಿಸಿಬಿಸಿ ಬಿರಿಯಾನಿಯಾಗಿದ್ದರು.

ಕತ್ರಿನಾ ಕೈಫ್ ಮುಜುಗರಕ್ಕೀಡಾದ ಕೆಲವೊಂದು ಸ್ಲೈಡಿನಲ್ಲಿ...

ಸಿದ್ದಾರ್ಥ ಮಲ್ಯ

ಈ ಹಿಂದಿನ ಐಪಿಎಲ್ ಪಂದ್ಯಾವಳಿಯಲ್ಲಿ ಕತ್ರಿನಾ ಕೈಫ್ RCB ಬ್ರಾಂಡ್ ಅಂಬಾಸಿಡರ್ ಆಗಿದ್ದರು. RCBಯ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ಕತ್ರಿನಾಳನ್ನು ಸಿದ್ದಾರ್ಥ್ ಮಲ್ಯ ಆಲಂಗಿಸಿ ಸ್ಕರ್ಟ್ ಒಳಗೆ ಕೈಹಾಕುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದವು.

ಬೂಮ್

ಬೂಮ್ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟ ಕತ್ರಿನಾ ಕೈಫಿಗೆ ಮೊದಲ ಚಿತ್ರದಲ್ಲೇ ಮುಜುಗರ ಎದುರಿಸ ಬೇಕಾಯಿತು. ಅಬ್ಬರದ ಪ್ರಚಾರದೊಂದಿಗೆ ಬಿಡುಗಡೆಯಾಗಿದ್ದ ಚಿತ್ರಕ್ಕೆ ಮ್ಯಾಟನಿ ನೋಡಲು ಜನವೇ ಇರಲಿಲ್ಲ. ಚಿತ್ರದಲ್ಲಿ ಕತ್ರಿನಾ ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿ ನಟಿಸಿಯೂ ಚಿತ್ರ ಮಠ ಸೇರಿದ್ದರಿಂದ ಚಿತ್ರತಂಡದವರೇ ಈಕೆಯನ್ನು ಲೇವಡಿ ಮಾಡಿದ್ದರಂತೆ.

ನಕಲಿ ವಿಡಿಯೋ

ಕತ್ರಿನಾ ತನ್ನ ಜೀವನದಲ್ಲಿ ಅತ್ಯಂತ ಮುಜುಗರಕ್ಕೀಡಾಗುವ ಘಟನೆಯಲ್ಲಿ ಒಂದೆಂದರೆ ಆಕೆಯ ನಕಲಿ ಸೆಕ್ಸ್ ವಿಡಿಯೋ ಅಂತರ್ಜಾಲದಲ್ಲಿ ಗಿರಿಗಿಟ್ಲೆಯಾಡಿದ್ದು. ಇದು ನಕಲಿ ವಿಡಿಯೋ ಎಂದು ಸಮರ್ಥಿಸಿಕೊಳ್ಳುವ ಹೊತ್ತಿಗೆ ಕತ್ರಿನಾ ಕೈಫ್ ಹೈರಾಣವಾಗಿದ್ದರು.

ಒಳ ಉಡುಪು ಬಹಿರಂಗವಾಗಿದ್ದು

ಜಬ್ ತಕ್ ಹೈ ಜಾನ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕತ್ರಿನಾ ಕೈಫ್ ಮಾಧ್ಯಮದವರ ಮುಂದೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಉತ್ತರಿಸುತ್ತಿದ್ದರು. ಪತ್ರಿಕಾಗೋಷ್ಠಿ ಮುಗಿಸಿ ಕುರ್ಚಿಯಿಂದ ಎದ್ದೇಳುತ್ತಿರಬೇಕಾದರೆ ಕತ್ರಿನಾಳ ಒಳಉಡುಪು ದರ್ಶನ ಅಲ್ಲಿ ನೆರೆದಿದ್ದವರಿಗೆಲ್ಲಾ ಆಗಿದೆ.

ಸಹೋದರಿಯ ಎಂಎಂಎಸ್

ತನ್ನ ಸಹೋದರಿಯ ಎಂಎಂಎಸ್ ಸೆಕ್ಸ್ ಹಗರಣ ಬಟ್ಟಾಬಯಲಾಗಿದ್ದರಿಂದ ಕತ್ರಿನಾ ಸಾಕಷ್ಟು ಈ ವಿಚಾರದಲ್ಲಿ ಮುಜುಗರ ಅನುಭವಿಸಬೇಕಾಯಿತು.

ರಣಬೀರ್ ಕಪೂರ್

ಕಪೂರ್ ಮನೆತನದ ರಣಬೀರ್ ಕಪೂರ್ ಜೊತೆಗಿನ ಕತ್ರಿನಾ ಹಲ್ಲಾಗುಲ್ಲಾ ಭಾರೀ ಸುದ್ದಿಯಾಗಿತ್ತು. ಇವರಿಬ್ಬರ ನಡುವಣ ಸಂಬಂಧದ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದ್ದು ಕತ್ರಿನಾಗೆ ಭಾರೀ ಮುಜುಗರಕ್ಕೀಡಾಗುವಂತಾಗಿತ್ತು. ಸ್ಪೈನ್, ಶ್ರೀಲಂಕಾ ಬೀಚಿನಲ್ಲಿ ಇಬ್ಬರ ಪ್ರಣಯದಾಟದ ಸುದ್ದಿ ಸಾಕಷ್ಟು ಬಿಸಿಬಿಸಿ ಚರ್ಚೆಯಾಗಿದ್ದವು.

English summary
Most embarrassing controversy of Bollywood actress Katrina Kaif.
Please Wait while comments are loading...