For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಪಾಲಿಗಿದ್ದ ತುಪ್ಪ ಜಾರಿ ಬಿದ್ದದ್ದು ಮೃಣಾಲ್ ಠಾಕೂರ್ ತಟ್ಟೆಗೆ.!

  |

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದ್ದ ಸಮಯವದು. ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ಗೆ ಜಿಗಿದ ರಶ್ಮಿಕಾ ಮಂದಣ್ಣ ಅಲ್ಲೇ ಭದ್ರವಾಗಿ ನೆಲೆಯೂರಿದರು. ತೆಲುಗು ಸಿನಿ ಅಂಗಳದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಡುತ್ತಿರುವ ರಶ್ಮಿಕಾ ಮಂದಣ್ಣ ಇನ್ನೇನು ಬಾಲಿವುಡ್ ಗೆ ಹಾರಬೇಕಿತ್ತು.

  ಬಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣಗಾಗಿ ರತ್ನಗಂಬಳಿ ಹಾಸಲು ವೇದಿಕೆ ಸಿದ್ಧವಾಗಿತ್ತು. ಆದ್ರೆ ಅಷ್ಟರಲ್ಲಿ ಆ ಗೋಲ್ಡನ್ ಚಾನ್ಸ್ ಬೇರೆಯವರ ಪಾಲಾಗಿದೆ. ರಶ್ಮಿಕಾ ಮಂದಣ್ಣ ಪಾಲಿಗಿದ್ದ ತುಪ್ಪ ಜಾರಿ ಮೃಣಾಲ್ ಠಾಕೂರ್ ಎಂಬ ಬೆಡಗಿಯ ತಟ್ಟೆಗೆ ಬಿದ್ದಿದೆ.

  ಅಷ್ಟಕ್ಕೂ, ನಾವು ಯಾವ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದೇವೆ ಅಂತ ಕನ್ ಫ್ಯೂಸ್ ಆಗಿದ್ದರೆ ಪೂರಾ ಮ್ಯಾಟರ್ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ಜೆರ್ಸಿ' ರೀಮೇಕ್ ನಲ್ಲಿ ಶಾಹಿದ್ ಕಪೂರ್

  'ಜೆರ್ಸಿ' ರೀಮೇಕ್ ನಲ್ಲಿ ಶಾಹಿದ್ ಕಪೂರ್

  ತೆಲುಗಿನ ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಚಿತ್ರದ ಹಿಂದಿ ರೀಮೇಕ್ 'ಕಬೀರ್ ಸಿಂಗ್' ಮೂವಿಯಲ್ಲಿ ಶಾಹಿದ್ ಕಪೂರ್ ನಟಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. 'ಕಬೀರ್ ಸಿಂಗ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಬಳಿಕ ಮತ್ತೊಂದು ತೆಲುಗಿನ ಚಿತ್ರದ ಮೇಲೆ ಶಾಹಿದ್ ಕಪೂರ್ ಕಣ್ಣು ಹಾಕಿದ್ದಾರೆ. ಟಾಲಿವುಡ್ ನಲ್ಲಿ ಯಶಸ್ಸು ಗಳಿಸಿದ್ದ 'ಜೆರ್ಸಿ' ಚಿತ್ರವನ್ನ ಬಾಲಿವುಡ್ ನಲ್ಲಿ ರೀಮೇಕ್ ಮಾಡಲು ಶಾಹಿದ್ ಕಪೂರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ರಶ್ಮಿಕಾಗೆ ಹೊಡಿತು ಲಾಟರಿ: ಶಾಹೀದ್ ಕಪೂರ್ ಚಿತ್ರಕ್ಕೆ ಕೊಡಗಿನ ಕುವರಿ ನಾಯಕಿ!ರಶ್ಮಿಕಾಗೆ ಹೊಡಿತು ಲಾಟರಿ: ಶಾಹೀದ್ ಕಪೂರ್ ಚಿತ್ರಕ್ಕೆ ಕೊಡಗಿನ ಕುವರಿ ನಾಯಕಿ!

  ರಶ್ಮಿಕಾ ಮಂದಣ್ಣಗೆ ಸಿಗಬೇಕಿತ್ತು ಸುವರ್ಣಾವಕಾಶ

  ರಶ್ಮಿಕಾ ಮಂದಣ್ಣಗೆ ಸಿಗಬೇಕಿತ್ತು ಸುವರ್ಣಾವಕಾಶ

  'ಜೆರ್ಸಿ' ಚಿತ್ರದ ಹಿಂದಿ ರೀಮೇಕ್ ನಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಾರೆ ಎಂದು ಈ ಹಿಂದೆ ಸುದ್ದಿ ಆಗಿತ್ತು. ರಶ್ಮಿಕಾ ಮಂದಣ್ಣ ಇನ್ನೇನು ಬಾಲಿವುಡ್ ಗೆ ಹಾರೇಬಿಟ್ಟರು ಎನ್ನುವಷ್ಟರಲ್ಲಿ ಆ ಸುದ್ದಿ ಸುಳ್ಳಾಗಿದೆ. 'ಜೆರ್ಸಿ' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಬದಲು ಬೇರೊಬ್ಬ ನಾಯಕಿ ಎಂಟ್ರಿಕೊಟ್ಟಿದ್ದಾರೆ. ಆ ನಟಿ ಬೇರೆ ಯಾರೂ ಅಲ್ಲ.. ಮೃಣಾಲ್ ಠಾಕೂರ್.

  ಕೈ ತಪ್ಪಿದ ರಶ್ಮಿಕಾ ಬಾಲಿವುಡ್ ಸಿನಿಮಾ: 'ಜೆರ್ಸಿ'ಗೆ ಬೇರೊಬ್ಬ ನಾಯಕಿಕೈ ತಪ್ಪಿದ ರಶ್ಮಿಕಾ ಬಾಲಿವುಡ್ ಸಿನಿಮಾ: 'ಜೆರ್ಸಿ'ಗೆ ಬೇರೊಬ್ಬ ನಾಯಕಿ

  'ಜೆರ್ಸಿ' ಚಿತ್ರದ ನಾಯಕಿ ಇವರೇ.!

  'ಜೆರ್ಸಿ' ಚಿತ್ರದ ನಾಯಕಿ ಇವರೇ.!

  'ಸೂಪರ್ 30', 'ಬಾಟ್ಲಾ ಹೌಸ್' ಚಿತ್ರಗಳಲ್ಲಿ ಮಿಂಚಿದ್ದ ಮೃಣಾಲ್ ಠಾಕೂರ್ ಇದೀಗ ಶಾಹಿದ್ ಕಪೂರ್ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ 'ಜೆರ್ಸಿ' ಚಿತ್ರವನ್ನ ನೋಡಿದ್ಮೇಲೆ, ಕಣ್ಮುಚ್ಚಿಕೊಂಡು ಈ ಅವಕಾಶವನ್ನು ಒಪ್ಪಿಕೊಂಡಿದ್ದಾರಂತೆ ಮೃಣಾಲ್ ಠಾಕೂರ್. ತೆಲುಗಿನಲ್ಲಿ ಆಕ್ಷನ್ ಕಟ್ ಹೇಳಿದ್ದ ಗೌತಮ್ ತಿನ್ನನುರಿ ಎಂಬುವರೇ 'ಜೆರ್ಸಿ' ಚಿತ್ರದ ಹಿಂದಿ ಅವತರಣಿಕೆಯನ್ನು ನಿರ್ದೇಶನ ಮಾಡುತ್ತಿದ್ದಾರೆ.

  ಈ ಚಿತ್ರವನ್ನ ರೀಮೇಕ್ ಮಾಡೋಕೆ 35 ಕೋಟಿ ಚೆಕ್ ಪಡೆದಿದ್ದಾರಂತೆ ಶಾಹೀದ್.!ಈ ಚಿತ್ರವನ್ನ ರೀಮೇಕ್ ಮಾಡೋಕೆ 35 ಕೋಟಿ ಚೆಕ್ ಪಡೆದಿದ್ದಾರಂತೆ ಶಾಹೀದ್.!

  'ಜೆರ್ಸಿ' ಚಿತ್ರದ ಕುರಿತು...

  'ಜೆರ್ಸಿ' ಚಿತ್ರದ ಕುರಿತು...

  ಕಳೆದ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಿದ್ದ ಸಿನಿಮಾ 'ಜೆರ್ಸಿ'. ಓರ್ವ ಕ್ರಿಕೆಟಿಗನ ಸುತ್ತ ಈ ಕಥೆ ಸಾಗಲಿದ್ದು, ಇದರಲ್ಲಿ ನಾನಿ, ಶ್ರದ್ಧಾ ಶ್ರೀನಾಥ್, ಸನುಷಾ, ಸತ್ಯರಾಜ್ ಮುಂತಾದವರು ನಟಿಸಿದ್ದರು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು.

  English summary
  Bollywood Actress Mrunal Thakur replaces Rashmika Mandanna in Jersey Bollywood Remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X