For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟ್ ನಿಂದ ಮನರಂಜನೆ ಉದ್ಯಮಕ್ಕೆ ಹಾರಿದ ಎಂಎಸ್ ಧೋನಿ

  |

  ಖ್ಯಾತ ಕ್ರಿಕೆಟರ್ ಎಂಎಸ್ ಧೋನಿ ಕ್ರಿಕೆಟ್ ಯುಗ ಬಹುತೇಕ ಅಂತ್ಯವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅವರು ಈಗಾಗಲೇ ವಿದಾಯ ಹೇಳಿದ್ದಾರೆ. ಪ್ರಸ್ತುತ ಐಪಿಎಲ್ ಆಡುತ್ತಿರುವ ಧೋನಿಗೆ ಇದು ಕೊನೆಯ ಐಪಿಎಲ್ ಎನ್ನಲಾಗುತ್ತಿದೆ.

  ಕ್ರಿಕೆಟ್ ಅನ್ನೇ ಉಸಿರಾಗಿಸಿಕೊಂಡಿದ್ದ ಎಂಎಸ್ ಧೋನಿ ನಿವೃತ್ತಿ ಬಳಿಕ ಈಗ ಮನೊರಂಜನಾ ಕ್ಷೇತ್ರದ ಕಡೆಗೆ ಬರುತ್ತಿದ್ದಾರೆ.

  ಎಂಎಸ್ ಧೋನಿ ಅವರು ಇದೀಗ ವೆಬ್ ಸೀರೀಸ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಂದು ಇದು ಅವರ ಮೊದಲ ಪ್ರಯತ್ನವೇನಲ್ಲ, ಕಳೆದ ವರ್ಷ ಡಾಕ್ಯುಮೆಂಟರಿ ಒಂದನ್ನು ಧೋನಿ ನಿರ್ಮಾಣ ಮಾಡಿದ್ದರು.

  ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದ ಧೋನಿ

  ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದ ಧೋನಿ

  ಕಳೆದ ವರ್ಷ ಎಂಎಸ್ ಧೋನಿ ಎಂಟರ್ಟೈನ್‌ಮೆಂಟ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದ ಧೋನಿ, ತಮ್ಮ ಸಂಸ್ಥೆ ಮೂಲಕ 'ರೋರ್ ಆಫ್ ದಿ ಲಯನ್' ಹೆಸರಿನ ಡಾಕ್ಯುಮೆಂಟರಿ ಒಂದನ್ನು ನಿರ್ಮಿಸಿದ್ದರು. ಈ ವರ್ಷ ವೆಬ್ ಸರಣಿ ನಿರ್ಮಿಸಲು ತಯಾರಿ ನಡೆಸಿದ್ದಾರೆ.

  ಆಕ್ಷನ್ ಥ್ರಿಲ್ಲರ್ ಕತೆ ಹೊಂದಿರಲಿದೆ

  ಆಕ್ಷನ್ ಥ್ರಿಲ್ಲರ್ ಕತೆ ಹೊಂದಿರಲಿದೆ

  ಎಂಎಸ್ ಧೋನಿ ಎಂಟರ್ಟೈನ್‌ಮೆಂಟ್ ಸಂಸ್ಥೆಯ ವ್ಯವಸ್ಥಾಪಕಿ ಆಗಿರುವ ಧೋನಿ ಪತ್ನಿ ಸಾಕ್ಷಿ ಧೋನಿ, ವೆಬ್ ಸರಣಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದು, ಈ ವೆಬ್ ಸರಣಿಯು ಆಕ್ಷನ್ ಥ್ರಿಲ್ಲರ್ ಕತೆ ಹೊಂದಿರಲಿದೆಯಂತೆ. ಜೊತೆಗೆ ಪುರಾಣದ ಕತೆಯನ್ನೂ ಸಹ ಹೊಂದಿರಲಿದೆಯಂತೆ.

  ಸಾಕ್ಷಿ ಧೋನಿ ಮಾಹಿತಿ ನೀಡಿದ್ದಾರೆ

  ಸಾಕ್ಷಿ ಧೋನಿ ಮಾಹಿತಿ ನೀಡಿದ್ದಾರೆ

  ಸಾಕ್ಷಿ ಧೋನಿ ಹೇಳಿರುವಂತೆ, ಇನ್ನೂ ಬಿಡುಗಡೆ ಆಗದ ಕತೆಯನ್ನು ಆಧರಿಸಿ ಈ ವೆಬ್ ಸರಣಿ ನಿರ್ಮಿಸುತ್ತಿದ್ದು, ಅಘೋರಿ ಒಬ್ಬನನ್ನು ಆಧುನಿಕ ತಂತ್ರಜ್ಞಾನದ ಕಟ್ಟಡವೊಂದರಲ್ಲಿ ಬಂಧಿ ಮಾಡಲಾಗುತ್ತದೆ. ಆತ ಹೇಳುವ ಕತೆಗಳು, ಅನುಭವಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ತಾಳೆ ಮಾಡಲಾಗುತ್ತಿದೆ. ಕತೆ ಹೀಗೆಯೇ ಸಾಗುತ್ತದೆ.

  SPB Last wish: ನನ್ನ ಸಮಾಧಿಯ ಮೇಲೆ ಹೀಗೆ ಬರೆಸಿ ಅಂತ ಮೊದಲೇ ಹೇಳಿದ್ರು SPBalasubrahmanyam | Filmibeat Kannada
  ಹೊಸಬರು ಬರೆದಿರುವ ಕತೆ

  ಹೊಸಬರು ಬರೆದಿರುವ ಕತೆ

  ಹೊಸಬರೊಬ್ಬರು ಬರೆದಿರುವ ಕತೆಯನ್ನು ಆಧರಿಸಿ ಈ ವೆಬ್ ಸರಣಿ ನಿರ್ಮಾಣ ಮಾಡಲಾಗುತ್ತಿದೆ. ಕತೆ ಇನ್ನೂ ಪುಸ್ತಕ ರೂಪದಲ್ಲಿ ಬಿಡುಗಡೆ ಆಗಿಲ್ಲ. ಇದೇ ವರ್ಷಾಂತ್ಯಕ್ಕೆ ಸಿನಿಮಾದ ಪಾತ್ರಧಾರಿಗಳ ಆಯ್ಕೆ ಮುಗಿಯಲಿದೆ ಎಂದಿದ್ದಾರೆ ಸಾಕ್ಷಿ ಧೋನಿ.

  English summary
  Cricketer MS Dhoni producing sci-fi web series from his Dhoni entertainment production house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X