»   » ಮುಖೇಶ್ ಅಂಬಾನಿ ಪಿಕೆ ಚಿತ್ರದ 58,000 ಟಿಕೆಟ್ ಖರೀದಿಸಿದ್ದು ಏಕೆ?

ಮುಖೇಶ್ ಅಂಬಾನಿ ಪಿಕೆ ಚಿತ್ರದ 58,000 ಟಿಕೆಟ್ ಖರೀದಿಸಿದ್ದು ಏಕೆ?

Posted By:
Subscribe to Filmibeat Kannada

ಮುಂಬಯಿ, ಡಿ. 19: ಅಮೀರ್ ಖಾನ್ ಚಿತ್ರ ಎಂದ ಮೇಲೆ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತೆ. ಪ್ರತಿ ಚಿತ್ರದಲ್ಲೂ ಡಿಫರೆಂಟ್ ಗೆಟಪ್ ಹೊಂದಿ ಪಾತ್ರದೊಳಗೆ ಸಂಪೂರ್ಣ ಹುದುಗಿಕೊಂಡು ಅದಕ್ಕೆ ನ್ಯಾಯ ಒದಗಿಸುವುದು ಅಮೀರ್ ವಿಶೇಷತೆ. ಅಮೀರ್ ಖಾನ್‌ಗೆ 'ಮಿ. ಪರ್ಫೆಕ್ಟ್' ಎನ್ನುವುದೂ ಅದಕ್ಕೇ.

ಅಮೀರ್ ಖಾನ್‌ನ ಹೊಸ ಚಿತ್ರ 'ಪಿಕೆ' ಅವರ ಬೆತ್ತಲೆ ಚಿತ್ರದಿಂದ ಭಾರೀ ಸುದ್ದಿಯಾಗಿತ್ತು. ಅಮೀರ್ ಮಾನ ಕಾಪಾಡಿದ ಟೇಪ್ ರೆಕಾರ್ಡರ್‌ಗೂ ಬೇಡಿಕೆ ಕುದುರಿತ್ತು. ಹೊಸ ಸುದ್ದಿ ಏನೆಂದರೆ ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ 'ಪಿಕೆ' ಹಿಂದಿ ಚಿತ್ರದ 58,000 ಟಿಕೆಟ್‌ಗಳನ್ನು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಿಯಾ ಲಿ. ಕಂಪನಿ ತನ್ನ ಕಟುಂಬ ಹಾಗೂ ಸಿಬ್ಬಂದಿಗಾಗಿ ಮುಂಗಡವಾಗಿಯೇ ಖರೀದಿಸಿದೆ..!

pk

ಮುಂಬಯಿಯ ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್ ಸ್ಕ್ರೀನಿಂಗ್‌ಗಳಲ್ಲಿ ಪ್ರದರ್ಶನಗೊಳ್ಳಲಿರುವ ಪಿಕೆ ಚಿತ್ರದ ವಿಶೇಷ ಸ್ಕ್ರೀನಿಂಗ್ ವೀಕ್ಷಿಸಲು ಸುಮಾರು 2 ಕೋಟಿ ರೂ. ಮೊತ್ತದ ಈ ಟಿಕೆಟ್‌ಗಳನ್ನು ಖರೀದಿಸಲಾಗಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಖರೀದಿಸಿದ್ದು ಏಕೆ? : ಇಷ್ಟಕ್ಕೂ ರಿಲಯನ್ಸ್ ಕಂಪನಿ ಒಮ್ಮೆಲೇ 58 ಸಾವಿರ ಟಿಕೆಟ್‌ಗಳನ್ನು ಖರೀದಿಸಿರುವುದರ ಹಿಂದೆ ಕಂಪನಿಯ ಲಾಭಾಂಶ ಹಿಂಚಿಕೆ ಅಥವಾ ಇನ್ಯಾವುದೇ ರೀತಿಯ ಪ್ರಚಾರ ತಂತ್ರ ಇಲ್ಲ.

ರಿಲಯನ್ಸ್ ಸಂಸ್ಥಾಪಕ ಧೀರೂಬಾಯ್ ಅಂಬಾನಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಪನಿಯು ಪ್ರತಿ ವರ್ಷ ಡಿ. 27 ಹಾಗೂ 28ರಂದು 'ರಿಲಯನ್ಸ್ ಕುಟುಂಬ ದಿನ' ಆಚರಿಸುತ್ತದೆ. ಈ ವರ್ಷ ಧೀರೂಬಾಯ್ ಅಂಬಾನಿ ಅವರ 82ನೇ ಹುಟ್ಟುಹಬ್ಬದ ನಿಮಿತ್ತ ಮುಖೇಶ್ ಅಂಬಾನಿ ಕುಟುಂಬ ತಮ್ಮ ಕಂಪನಿ ಜೊತೆ 'ರಿಲಯನ್ಸ್ ಕುಟುಂಬ ದಿನ'ವನ್ನು ಅಮೀರ್ ಖಾನ್ ಅಭಿನಯಿಸಿರುವ 'ಪಿಕೆ' ಚಲನಚಿತ್ರವನ್ನು ವೀಕ್ಷಿಸಲಿದೆ.

English summary
Reliance Industries Limited, has bought 58000 tickets of PK well in advance, for its employees and their respective families. It’s the 82nd birth anniversary of RIL’s founder chairman Dhirubhai Ambani this year. Like every year, the team has decided to celebrate it with Aamir’s PK.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada