»   » ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ ಪುತ್ರನಿಗೆ ಕ್ಯಾನ್ಸರ್!

ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ ಪುತ್ರನಿಗೆ ಕ್ಯಾನ್ಸರ್!

Posted By:
Subscribe to Filmibeat Kannada
Mumbai actor Emraan Hashmi's son Ayaan detected with first stage cancer
ಅವನಿನ್ನೂ 4 ವರ್ಷದ ಹಾಲುಗಲ್ಲದ ಕಂದಮ್ಮ. ಪ್ರಪಂಚ ಅರಿಯದ ಮುಗ್ದ. ಆದರೆ ಆ ಮಗುವಿಗೆ ಕ್ಯಾನ್ಸರ್!

ಬಾಲಿವುಡ್ ನಟ, 'ಸೀರಿಯಲ್ ಕಿಸ್ಸರ್' (ಕು)ಖ್ಯಾತಿಯ ಇಮ್ರಾನ್ ಹಶ್ಮಿ ಅವರ ಪುತ್ರ ಅಯಾನ್ ಗೆ ಕ್ಯಾನ್ಸರ್. ಅಯಾನನನ್ನು ಅವರಪ್ಪ-ಅಮ್ಮ ಸೋಮವಾರ ಹಿಂದೂಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕ್ ಅಪ್ ಮಾಡಿಸಿದಾಗ ಅವನಿಗೆ ಮೊದಲ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಇದರಿಂದ ನಟ ಇಮ್ರಾನ್ ಹಶ್ಮಿ ತೀವ್ರ ಎದೆಗುಂದಿದ್ದಾರೆ. 'ಅಯಾನ್ ಮೂತ್ರಕೋಶದಲ್ಲಿ ಗಡ್ಡೆ ಕಾಣಿಸಿಕೊಂಡಿದ್ದು ಅದು ಕ್ಯಾನ್ಸರ್ ಆಗಿ ಮಾರ್ಪಡುವ ಸಾಧ್ಯತೆಗಳು ಹೆಚ್ಚಾಗಿವೆ' ಎಂದು ಮುಂಬೈನ ಹಿಂದೂಜಾ ಆಸ್ಪತ್ರೆ ವೈದ್ಯರು ವೈದ್ಯಕೀಯ ವರದಿಯಲ್ಲಿ ತಿಳಿಸಿದ್ದಾರೆ.

ಆಯಕಟ್ಟಿನ ಜಾಗದಲ್ಲಿ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಿದೆ. ಮಗುವಿಗೆ ತಕ್ಷಣ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಆನಂತರ ನಿರಂತರವಾಗಿ Chemotherapy ನಡೆಯಲಿದೆ. ಅಯಾನ್ ಅದನ್ನೆಲ್ಲಾ ಸಹಿಸಿಕೊಂಡು, ದೀರ್ಘಾಯುಷ್ಮಾನ್ ಹೊಂದಲಿ ಎಂದು ನಟ ಇಮ್ರಾನ್ ಹಷ್ಮಿಯ ನಿಕಟಮಿತ್ರರು ಆಶಿಸಿದ್ದಾರೆ.

ನಟ ಇಮ್ರಾನ್ ಹಶ್ಮಿ ತಮ್ಮ ಸಿನಿಮಾ ಶೂಟಿಂಗ್ ಕಾರ್ಯಕ್ರಮಗಳನ್ನೆಲ್ಲಾ ಬದಿಗಿತ್ತು, ಮಗನ ಬದಿ ನಿಂತಿದ್ದಾರೆ. ಮಗ ಚೇತರಿಸಿಕೊಂಡು ಬಾಳಿ ಬದುಕಲಿ ಎಂದು ದೇವರಲ್ಲಿ ಮೊರೆಯಿಟ್ಟಿದ್ದಾರೆ.

ಈ ಮಧ್ಯೆ, ನಟ ಇಮ್ರಾನ್ ಹಶ್ಮಿ ತಮ್ಮ ಪುತ್ರನಿಗೆ ಕ್ಯಾನ್ಸರ್ ಆಗಿರುವ ಬಗ್ಗೆ ಕಳವಳಗೊಂಡಿದ್ದು, ವೈದ್ಯರಿಂದ second opinion ಪಡೆಯಲು ನಿರ್ಧರಿಸಿದ್ದಾರೆ. ಹಾಗಾಗಿ ಅಯಾನನನ್ನು ಅಮೆರಿಕಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

English summary
Mumbai actor Emraan Hashmi's son Ayaan detected with first stage cancer. Bollywood serial kisser Emraan Hashmi's four-year-old son Ayaan has been diagnosed with first-stage cancer on Monday, said sources. Ayaan had been diagnosed with a tumour in his kidney that was found malignant. Emraan is also taking second opinion. "If necessary Ayaan might also be flown to US for further treatment," the source informed.
Please Wait while comments are loading...