For Quick Alerts
  ALLOW NOTIFICATIONS  
  For Daily Alerts

  15 ವರ್ಷಗಳ ಬಳಿಕ 'ಬಿಗ್' ಸರ್ಪ್ರೈಸ್ ಕೊಟ್ಟ ನಾಗಾರ್ಜುನ ಅಕ್ಕಿನೇನಿ.!

  By Harshitha
  |

  ತೆಲುಗು ನಟ ನಾಗಾರ್ಜುನ ಅಕ್ಕಿನೇನಿಗೆ ಬಾಲಿವುಡ್ ಲೋಕ ಹೊಸದೇನಲ್ಲ. 'ಖುದ್ ಗವಾ', 'ಕ್ರಿಮಿನಲ್', 'ಮಿ.ಬೇಚಾರಾ', 'ಎಲ್.ಓ.ಸಿ ಕಾರ್ಗಿಲ್'... ಸೇರಿದಂತೆ ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ನಾಗಾರ್ಜುನ ಅಭಿನಯಿಸಿದ್ದಾರೆ.

  'ಎಲ್.ಓ.ಸಿ ಕಾರ್ಗಿಲ್' ಬಳಿಕ ಟಾಲಿವುಡ್ ನಲ್ಲಿಯೇ ಸೆಟಲ್ ಆದ ನಾಗಾರ್ಜುನ, ಬಾಲಿವುಡ್ ಕಡೆ ತಿರುಗಿ ನೋಡಿರಲಿಲ್ಲ. ಆದ್ರೀಗ, 15 ವರ್ಷಗಳ ಬಳಿಕ ಮರಳಿ ಬಾಲಿವುಡ್ ನತ್ತ ನಾಗಾರ್ಜುನ ಅಕ್ಕಿನೇನಿ ಮುಖ ಮಾಡುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ನಾಗಾರ್ಜುನ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.

  'ಬಿಗ್ ಬಿ' ಅಮಿತಾಬ್ ಬಚ್ಚನ್, ರಣ್ಬೀರ್ ಕಪೂರ್, ಆಲಿಯಾ ಭಟ್ ಸೇರಿದಂತೆ ದೊಡ್ಡ ದೊಡ್ಡ ತಾರೆಯರ ದಂಡೇ ಇರುವ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಾಗಾರ್ಜುನ ಕಾಣಿಸಿಕೊಳ್ಳಲಿದ್ದಾರೆ.

  ಸೂಪರ್ ಹೀರೋ ಫ್ಯಾಂಟಸಿ ಕಥಾನಕ ಹೊಂದಿರುವ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಾಗಾರ್ಜುನ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಕರಣ್ ಜೋಹರ್ ಬಂಡವಾಳ ಹಾಕುತ್ತಿದ್ದಾರೆ.

  ಕೆಲ ವರದಿಗಳ ಪ್ರಕಾರ, 'ಬ್ರಹ್ಮಾಸ್ತ್ರ' ಸಿನಿಮಾ 'ಬಾಹುಬಲಿ'ಯನ್ನೂ ಮೀರಿಸುತ್ತಂತೆ. ಸದ್ಯ ಚಿತ್ರೀಕರಣ ಹಂತದಲ್ಲಿ ಇರುವ 'ಬ್ರಹ್ಮಾಸ್ತ್ರ' ಚಿತ್ರದ ಸೆಟ್ ಗೆ ಇಂದು ನಾಗಾರ್ಜುನ ಎಂಟ್ರಿಕೊಟ್ಟಿದ್ದಾರೆ. ಹೆಚ್ಚಿನ ಅಪ್ ಡೇಟ್ಸ್ ಕೊಡ್ತಾಯಿರ್ತೀವಿ, ಫಿಲ್ಮಿಬೀಟ್ ತಾಣಕ್ಕೆ ಭೇಟಿ ನೀಡುತ್ತಿರಿ...

  English summary
  After 15 long years, Tollywood Actor Nagarjuna Akkineni makes his comeback to Bollywood with Brahmastra. 15 ವರ್ಷಗಳ ಬಳಿಕ 'ಬಿಗ್' ಸರ್ಪ್ರೈಸ್ ಕೊಟ್ಟ ನಾಗಾರ್ಜುನ ಅಕ್ಕಿನೇನಿ.!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X