»   » ಐಶೂ-ಅಭಿಷೇಕ್ ಜೋಡಿಗೆ ನಾಗಶೇಖರ್ ಆಕ್ಷನ್ ಕಟ್

ಐಶೂ-ಅಭಿಷೇಕ್ ಜೋಡಿಗೆ ನಾಗಶೇಖರ್ ಆಕ್ಷನ್ ಕಟ್

Posted By:
Subscribe to Filmibeat Kannada

ಕೆಲ ವರ್ಷಗಳ ಹಿಂದೆಯಷ್ಟೇ ಕನ್ನಡ ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ಅಭಿನಯಿಸುತ್ತಾ, ಕನ್ನಡ ಪ್ರೇಕ್ಷಕರಿಗೆ ಕಚಗುಳಿ ಇಡ್ತಿದ್ದ ನಟ ನಾಗಶೇಖರ್. ಸಣ್ಣ-ಪುಟ್ಟ ಪಾತ್ರಗಳಿಂದಲೇ ನಿರ್ದೇಶಕನ ಪಟ್ಟಕ್ಕೇರಿದ ನಾಗಶೇಖರ್ ಅರಮನೆ, ಸಂಜು ವೆಡ್ಸ್ ಗೀತಾ, ಮೈನಾದಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು.

ಇದೀಗ ಒಂದು ಸ್ಟೆಪ್ ಮುಂದಕ್ಕೆ ಬಂದು ಸಿಗರೇಟ್ ಚಿತ್ರಕ್ಕೆ ಹೀರೋ ಆಗಿರೋ ನಾಗಶೇಖರ್, ಸದ್ಯದಲ್ಲೇ ಬಾಲಿವುಡ್ ಗೆ ಹಾರಲಿದ್ದಾರೆ. ನಂಬಿದ್ರೆ ನಂಬಿ, ಇನ್ನು ಕೆಲವೇ ದಿನಗಳಲ್ಲಿ ನಾಗಶೇಖರ್ ಬಾಲಿವುಡ್ ಡೈರೆಕ್ಟರ್ ಆಗಲಿದ್ದಾರಂತೆ. [ಸೈಲೆಂಟಾಗಿ ನಡೀತಿದೆ 'ಮೈನಾ-2' ಶೂಟಿಂಗ್]

Nagashekar to direct a bollywood movie

ನಾಗಶೇಖರ್ ಬಾಲಿವುಡ್ ಪ್ರಾಜೆಕ್ಟ್ ಗೆ ಬಂಡವಾಳ ಹಾಕುತ್ತಿರುವವರು ಭರತ್ ಜೈನ್. ಕನ್ನಡ ಸಿನಿ ಪ್ರಿಯರನ್ನ '6-5=2' ಚಿತ್ರದ ಮೂಲಕ ಬೆಚ್ಚಿಬೀಳಿಸಿದ್ದ ನಿರ್ಮಾಪಕ ಭರತ್ ಜೈನ್, ನಾಗಶೇಖರ್ ಬಾಲಿವುಡ್ ಚಿತ್ರಕ್ಕೆ ಬಂಡವಾಳ ಹಾಕುವುದಕ್ಕೆ ಮುಂದೆ ಬಂದಿದ್ದಾರೆ. ಈಗಾಗಲೇ 6-5=2 ಚಿತ್ರವನ್ನ ಬಾಲಿವುಡ್ ನಲ್ಲಿ ರೆಡಿ ಮಾಡಿರುವ ಭರತ್, ಸದ್ಯದಲ್ಲೇ ಈ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

ಕಥೆಯ ಗುಟ್ಟನ್ನ ಇನ್ನೂ ಬಿಟ್ಟುಕೊಡದ ನಾಗಶೇಖರ್, ಚಿತ್ರಕ್ಕೆ ಬಾಲಿವುಡ್ ನ ಹಿಟ್ ಪೇರ್ ಫಿಕ್ಸ್ ಮಾಡೋಕೆ ಓಡಾಟ ನಡೆಸುತ್ತಿದ್ದಾರೆ. ಕನ್ನಡಿಗರೇ ಸೇರಿ ಮಾಡುತ್ತಿರುವ ಈ ಬಾಲಿವುಡ್ ಚಿತ್ರಕ್ಕೆ ಐಶ್ವರ್ಯಾ-ಅಭಿಷೇಕ್ ಅಥವಾ ಕಾಜೋಲ್-ಅಜಯ್ ದೇವಗನ್ ರಂತಹ ಹಿಟ್ ಜೋಡಿ ನಟಿಸಿದ್ರೂ ಅಚ್ಚರಿ ಪಡಬೇಡಿ ಅಂತಾರೆ ನಿರ್ಮಾಪಕ ಭರತ್ ಜೈನ್.

ಸದ್ಯಕ್ಕೆ ಎಲ್ಲವೂ ಪ್ಲಾನ್ನಿಂಗ್ ಹಂತದಲ್ಲೇ ಇರುವ ಈ ಚಿತ್ರ ಅಫಿಷಿಯಲ್ಲಾಗಿ ಅನೌನ್ಸ್ ಆಗುವುದಕ್ಕಿನ್ನೂ ಟೈಮ್ ಇದೆ. ಇಲ್ಲಿ ಟ್ರ್ಯಾಜಿಡಿ, ಲವ್ ಸ್ಟೋರಿಗಳನ್ನೇ ಕೊಟ್ಟಿರೋ ನಾಗಶೇಖರ್, ಬಾಲಿವುಡ್ ನಲ್ಲಿ ಬೇರೇನಾದರೂ ಎಕ್ಸ್ ಪೆರಿಮೆಂಟ್ ಮಾಡ್ತಾರಾ ನೋಡಬೇಕು. (ಏಜೆನ್ಸೀಸ್)

English summary
Director Nagashekar of 'Myna' fame is planning for his bollywood venture. Bharath Jain, producer of the movie 6-5=2 has come up to produce this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada