For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ಕಂಗನಾ ರಣಾವತ್‌ಗೆ ಸುತ್ತಿಕೊಳ್ತು ಉರುಳು!

  |

  ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ರಣಾವತ್ ನಡುವಿನ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಬಗ್ಗೆ ಪ್ರಶ್ನಿಸಿದ್ದ ಕಂಗನಾ, ಮುಂಬೈ ಪೊಲೀಸರು ಬಾಲಿವುಡ್ ಮಾಫಿಯಾ ಜೊತೆ ಸೇರಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಟೀಕಿಸಿದರು.

  ಡ್ರಗ್ಸ್ ವಿಚಾರದಲ್ಲಿ ಮತ್ತೆ ಮಹಾರಾಷ್ಟ್ರ ಸರ್ಕಾರ ಮತ್ತು ಬಾಲಿವುಡ್ ಇಂಡಸ್ಟ್ರಿಯನ್ನು ಕಂಗನಾ ಟಾರ್ಗೆಟ್ ಮಾಡಿದರು. ಹಿಂದಿ ಚಿತ್ರರಂಗದಲ್ಲಿ ಶೇಕಡಾ 99 ರಷ್ಟು ಮಂದಿ ಡ್ರಗ್ಸ್ ವ್ಯಸನಿಗಳು ಎಂದು ದೂರಿದ್ದರು. ಇದೀಗ, ಡ್ರಗ್ಸ್ ಪ್ರಕರಣ ಕ್ವೀನ್ ನಾಯಕಿಗೂ ಉರುಳಾಗಿದೆ. ಕಂಗನಾ ಅವರಿಗೆ ಡ್ರಗ್ಸ್ ನಂಟಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶಸಿದೆ. ಮುಂದೆ ಓದಿ....

  'ಕಂಗನಾ ರಣಾವತ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ' ಎಂದ ನಿರ್ದೇಶಕ'ಕಂಗನಾ ರಣಾವತ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ' ಎಂದ ನಿರ್ದೇಶಕ

  ತನಿಖೆಗೆ ಆದೇಶಿಸಿದ ಸರ್ಕಾರ

  ತನಿಖೆಗೆ ಆದೇಶಿಸಿದ ಸರ್ಕಾರ

  ನಟ ಶೇಖರ್ ಸುಮನ್ ಅವರ ಪುತ್ರ ಅಧ್ಯಾಯನ್ ಸುಮನ್ ಅವರ ಹಳೆಯ ಸಂದರ್ಶನದ ಆಧಾರದಲ್ಲಿ ನಟಿ ಕಂಗನಾ ಅವರನ್ನು ತನಿಖೆಗೆ ಒಳಪಡಿಸಲು ಮಹಾರಾಷ್ಟ್ರ ಸರ್ಕಾರ ಮಾದಕ ದ್ರವ್ಯ ವಿರೋಧಿ ವಿಭಾಗಕ್ಕೆ ಸೂಚಿಸಿದೆ.

  ಅಧ್ಯಾಯನ್ ಸುಮನ್ ವಿಡಿಯೋದಲ್ಲಿ ಏನಿದೆ?

  ಅಧ್ಯಾಯನ್ ಸುಮನ್ ವಿಡಿಯೋದಲ್ಲಿ ಏನಿದೆ?

  2018ರ ಸಂದರ್ಶನದಲ್ಲಿ ಡ್ರಗ್ಸ್ ವಿಚಾರವಾಗಿ ಕಂಗನಾ ರಣಾವತ್ ಕುರಿತು ಆರೋಪ ಮಾಡಿರುವ ಅಧ್ಯಾಯನ್ ಸುಮನ್ ''ಕಂಗನಾ ನಿಷೇದಿತ ನಾಕೋರ್ಟಿಕ್ ಡ್ರಗ್ ಸೇವಿಸುತ್ತಿದ್ದರು. ನನಗೂ ಸೇವಿಸುವಂತೆ ಒತ್ತಾಯಿಸಿದ್ದರು. 2008ರ ಪಾರ್ಟಿಯಲ್ಲೂ ಡ್ರಗ್ ಸೇವಿಸು ಎಂದಿದ್ದರು. ನಾನು ತೆಗೆದುಕೊಂಡಿರಲಿಲ್ಲ'' ಎಂದು ಹೇಳಿದ್ದಾರೆ. ಈ ವಿಡಿಯೋ ತುಣುಕು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಡ್ರಗ್ಸ್ ಸೇವಿಸುತ್ತೇನೆಂದು ಒಪ್ಪಿಕೊಂಡಿದ್ದ ಕಂಗನಾ, ಈಗ ಹೇಳಿಕೆ ಉಲ್ಟಾ!ಡ್ರಗ್ಸ್ ಸೇವಿಸುತ್ತೇನೆಂದು ಒಪ್ಪಿಕೊಂಡಿದ್ದ ಕಂಗನಾ, ಈಗ ಹೇಳಿಕೆ ಉಲ್ಟಾ!

  ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದ ಗೃಹ ಸಚಿವ

  ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದ ಗೃಹ ಸಚಿವ

  ಅಧ್ಯಾಯನ್ ಸುಮನ್ ಅವರ ಹೇಳಿಕೆ ಅಧಾರಿಸಿ ಕಂಗನಾ ಅವರನ್ನು ತನಿಖೆ ಮಾಡಲು ಅನುಮತಿ ನೀಡಬೇಕೆಂದು ಮುಂಬೈ ಪೊಲೀಸರು ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ಗೃಹ ಇಲಾಖೆ ಸಮ್ಮತಿ ಸೂಚಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅನಿಲ್ ದೇಶ್‌ಮುಖ್ ''ನಟಿಯ ಕುರಿತು ಡ್ರಗ್ಸ್ ತನಿಖೆ ಮಾಡಲು ಆದೇಶಿಸಿದ್ದೇವೆ'' ಎಂದಿದ್ದಾರೆ.

  Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada
  ಆರೋಪ ಸಾಬೀತಾದರೆ ಮುಂಬೈ ಬಿಡ್ತೀನಿ

  ಆರೋಪ ಸಾಬೀತಾದರೆ ಮುಂಬೈ ಬಿಡ್ತೀನಿ

  ಮಹಾರಾಷ್ಟ್ರ ಸರ್ಕಾರದ ಆದೇಶದ ಕುರಿತು ಮಾತನಾಡಿರುವ ಕಂಗನಾ ''ತನಿಖೆಗೆ ನಾನು ಗೌರವಿಸುತ್ತೇನೆ ಮತ್ತು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ದಯವಿಟ್ಟು ನನ್ನನ್ನು ಡ್ರಗ್ಸ್ ಪರೀಕ್ಷಗೆ ಒಳಪಡಿಸಿ, ನನ್ನ ಫೋನ್ ಕಾಲ್ ವಿವರನ್ನು ತನಿಖೆ ಮಾಡಿ. ನನಗೆ ಏನಾದರೂ ಡ್ರಗ್ಸ್ ಪೆಡ್ಲರ್‌ಗಳ ಜೊತೆ ಸಂಪರ್ಕ ಇರುವುದು ಪತ್ತೆಯಾದರೆ ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ ಹಾಗೂ ಶಾಶ್ವತವಾಗಿ ಮುಂಬೈ ಬಿಡುತ್ತೇನೆ. ಎದುರು ನೋಡುತ್ತಿದ್ದೇನೆ'' ಎಂದಿದ್ದಾರೆ.

  English summary
  Mumbai Anti-Narcotics Cell Police started a probe into actress Kangana Ranaut’s alleged drug links, based on Adhyayan Suman old interview statements.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X