For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ರಶ್ಮಿಕಾ ಹೆವೀ ವರ್ಕೌಟ್: 'ಪುಷ್ಪ ಗರ್ಲ್' ನೋಡಿ ಮುಗಿಬಿದ್ದ ಕ್ಯಾಮರಾಗಳು!

  |

  ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಫೇಮಸ್. ರಶ್ಮಿಕಾ ಎಲ್ಲೇ ಹೋದರೂ ಏನಾದರೂ ಒಂದು ವಿಷಯಕ್ಕ ಹೆಡ್‌ಲೈನ್‌ನಲ್ಲಿ ಇರುತ್ತಾರೆ. ಅದರಲ್ಲೂ ರಶ್ಮಿಕಾ ತನ್ನ ಬ್ಯೂಟಿ ಫಿಟ್ನೆಸ್‌ ಹಾಗೂ ಲವ್ ಅಫೇರ್‌ನಿಂದಲೇ ಹೆಚ್ಚು ಚರ್ಚೆಯಲ್ಲಿರುತ್ತಾರೆ.

  ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಮಂದಿಗಂತೂ ರಶ್ಮಿಕಾ ಮಂದಣ್ಣ 'ಪುಷ್ಪ ಗರ್ಲ್' ಅಂತಲೇ ಜನಪ್ರಿಯ. 'ಪುಷ್ಪ'ದಲ್ಲಿ ರಶ್ಮಿಕಾ ಸ್ಟೈಲ್ ಡ್ಯಾನ್ಸ್‌ಗೆ ಉತ್ತರ ಭಾರತದ ಮಂದಿ ಫಿದಾ ಆಗಿದ್ದಾರೆ. ಅದಕ್ಕೆ ರಶ್ಮಿಕಾ ಎಲ್ಲೇ ಹೋದರೂ, ಏನೇ ಮಾಡಿದರೂ ದಿಢೀರನೇ ಸುದ್ದಿಯಾಗುತ್ತಿದ್ದಾರೆ.

  ಪ್ರೀತಿ ಹುಟ್ಟಿದ್ದೂ ನಿಜ.. ಬ್ರೇಕ್ ಆಗಿದ್ದೂ ನಿಜ: 2 ವರ್ಷದಿಂದ ರಶ್ಮಿಕಾ ಸಿಂಗಲ್!ಪ್ರೀತಿ ಹುಟ್ಟಿದ್ದೂ ನಿಜ.. ಬ್ರೇಕ್ ಆಗಿದ್ದೂ ನಿಜ: 2 ವರ್ಷದಿಂದ ರಶ್ಮಿಕಾ ಸಿಂಗಲ್!

  ಬಾಲಿವುಡ್, ಟಾಲಿವುಡ್, ಕಾಲಿವುಡ್‌ ಅಂತ ಬಿಡುವಿಲ್ಲದೆ ಸಿನಿಮಾ ಮಾಡುತ್ತಿದ್ದಾರೆ. ಒಂದು ನಿಮಿಷ ಪುರುಸೊತ್ತು ಇಲ್ಲದೆ ಇದ್ದರೂ, ರಶ್ಮಿಕಾ ಮಂದಣ್ಣ ವರ್ಕೌಟ್ ಮಾಡುವುದನ್ನು ಮಾತ್ರ ನಿಲ್ಲಿಸೋದಿಲ್ಲ. ತನ್ನ ದೇಹದ ಸೌಂದರ್ಯಕ್ಕಾಗಿ ಎಲ್ಲೇ ಇದ್ದರೂ ಕಸರತ್ತು ಮಾಡುತ್ತಾಲೇ ಇರುತ್ತಾರೆ. ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿರುವ ರಶ್ಮಿಕಾ ಮಂದಣ್ಣ ವರ್ಕೌಟ್ ಮಾಡಿ ಹೊರಬರುತ್ತಿದ್ದಂತೆ ಕ್ಯಾಮರಾಗಳು ಮುಗಿಬಿದ್ದಿವೆ.

  'ಪುಷ್ಪ ಗರ್ಲ್' ಫಿಟ್ನೆಸ್‌ಗೆ ಫಿದಾ

  'ಪುಷ್ಪ ಗರ್ಲ್' ಫಿಟ್ನೆಸ್‌ಗೆ ಫಿದಾ

  ಬಾಲಿವುಡ್ ಪಾಪರಾಜಿಗಳು ನ್ಯಾಷನಲ್‌ ಕ್ರಶ್ ಕಂಡ್ರೆ ಮುಗಿಬೀಳುತ್ತಾರೆ. ರಶ್ಮಿಕಾ ಮಂದಣ್ಣ ಎಲ್ಲೇ ಹೋದರೂ ಅವರು ದಿಢೀರನೇ ಪ್ರತ್ಯಕ್ಷ ಆಗುತ್ತಾರೆ. ಅದ್ಹೇಗೆ ಮಾಹಿತಿ ಕಲೆ ಹಾಕುತ್ತಾರೋ ಗೊತ್ತಿಲ್ಲ. ಏರ್‌ಪೋರ್ಟ್‌ಗೆ ಬಂದಿಳಿದರೆ, ಅಲ್ಲೂ ಇರುತ್ತಾರೆ. ಜಿಮ್‌ಗೆ ಹೋದರೆ, ಅಲ್ಲೂ ಕಾಣಿಸುತ್ತಾರೆ. ಅಂದ್ಹಾಗೆ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮುಂಬೈನ ಜೂಹುವಿನಲ್ಲಿ ಫಿಟ್ನೆಸ್ ಸೆಂಟರ್‌ಗೆ ವರ್ಕೌಟ್ ಮಾಡಲು ಹೋಗಿದ್ದರು. ಆ ವೇಳೆ ಫಿಟ್ನೆಸ್‌ ಮೂಡ್ನಲ್ಲಿದ್ದ ರಶ್ಮಿಕಾ ನೋಡಿ ಫೋಟೊಗೆ ಮುಗಿಬಿದ್ದಿದ್ದರು.

  ರಶ್ಮಿಕಾ ಅಲ್ಲ 'ಪುಷ್ಪ ಗರ್ಲ್'

  ಬಾಲಿವುಡ್ ಕ್ಯಾಮರಾಮ್ಯಾನ್‌ಗಳ ಪಾಲಿಗೆ ರಶ್ಮಿಕಾ ಮಂದಣ್ಣ 'ಪುಷ್ಪ ಗರ್ಲ್'. ಕೊಡಗಿನ ಬೆಡಗಿ ಎಲ್ಲೇ ಹೋದರೂ, ಪಾಪರಾಜಿಗಳು ಇವರನ್ನು 'ಪುಷ್ಪ ಗರ್ಲ್' ಅಂತಲೇ ಗುರುತಿಸುತ್ತಾರೆ. ಆ ಮಟ್ಟಿಗೆ ಇವರ ಮೇಲೆ 'ಪುಷ್ಪ' ಸಿನಿಮಾ ಪ್ರಭಾವ ಬೀರಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿ 'ಪುಷ್ಪ' ಸಿನಿಮಾ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಅಲ್ಲಿಂದ ರಶ್ಮಿಕಾ ಮಂದಣ್ಣಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

  ಫಿಟ್ನೆಸ್ ಫ್ರೀಕ್ ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ತಮ್ಮ ಫ್ಯಾನ್ಸ್‌ಗೆ ದೈನಂದಿನ ಆಕ್ಟಿವಿಟಿ ಬಗ್ಗೆ ಚಿಕ್ಕದೊಂದು ಸುಳಿವು ನೀಡುತ್ತಲೇ ಇರುತ್ತಾರೆ. ಅದರಲ್ಲೂ ತನ್ನ ವರ್ಕೌಟ್‌ ಬಗ್ಗೆ ಕಮ್ಮಿ ಅಂದ್ರೂ, ವಾರಕ್ಕೊಂದು ವಿಡಿಯೋ ಹಾಕುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಂನಲ್ಲಿ ರಶ್ಮಿಕಾ ಮಂದಣ್ಣ ವಿಡಿಯೋ ವರ್ಕೌಟ್‌ ವಿಡಿಯೋ ಒಂದನ್ನುಶೇರ್ ಮಾಡಿದ್ದರು. ಆ ವಿಡಿಯೋಗೆ ರಶ್ಮಿಕಾ ಫ್ಯಾನ್ಸ್ ಸಖತ್ತಾಗಿಯೇ ರೆಸ್ಪಾನ್ಸ್ ಮಾಡಿದ್ದಾರೆ. ಸುಮಾರು 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

  ರಶ್ಮಿಕಾ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾ

  ರಶ್ಮಿಕಾ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾ

  ರಶ್ಮಿಕಾ ಮಂದಣ್ಣ ಬಳಿ ಕೈ ತುಂಬಾ ಸಿನಿಮಾಗಳಿವೆ. ಅದರಲ್ಲೂ ಬಾಲಿವುಡ್‌ನಲ್ಲಿ ಈಗಾಗಲೇ 'ಮಿಷನ್ ಮಜ್ನು' ಸಿನಿಮಾ ಮುಗಿಸಿದ್ದು, ಬಿಡುಗಡೆ ರೆಡಿಯಾಗಿದೆ. ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿರೋ 'ಗುಡ್ ಬೈ' ಚಿತ್ರೀಕರಣ ನಡೆಯುತ್ತಿದೆ. ರಣ್‌ಬೀರ್ ಸಿಂಗ್ ಜೊತೆ 'ಅನಿಮಲ್' ಹಾಗೂ ಟೈಗರ್ ಶ್ರಾಫ್ ಜೊತೆ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ದಳಪತಿ ವಿಜಯ್ ಸಿನಿಮಾ 'ವಾರಾಸುಡು' ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ.

  English summary
  National Crush Rashmika Mandanna Spotted at Fitness Center In Juhu Mumbai, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X