twitter
    For Quick Alerts
    ALLOW NOTIFICATIONS  
    For Daily Alerts

    ''ರಾಷ್ಟ್ರೀಯತೆ ಚಿತ್ರಗಳಲ್ಲಿ ಇರಲಿ, ಚಿತ್ರಮಂದಿರಗಳಲ್ಲಿ ಅಲ್ಲ'' - ವಿದ್ಯಾ ಬಾಲನ್

    |

    ''ಭಾರತೀಯರು ತಮ್ಮ ದೇಶದ ಬಗ್ಗೆ ಹೆಮ್ಮೆ ಪಡುವ ಅನೇಕ ವಿಷಯಗಳು ಇವೆ. ಆದರೆ, ನಾವು ಅದನ್ನು ಮಾಡುವುದೇ ಇಲ್ಲ.'' ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಹೇಳಿದ್ದಾರೆ.

    ಸಖತ್ ವೈರಲ್ ಆಗ್ತಿದೆ ವಿದ್ಯಾ ಬಾಲನ್ ಹಾಟ್ ಫೋಟೋ ಸಖತ್ ವೈರಲ್ ಆಗ್ತಿದೆ ವಿದ್ಯಾ ಬಾಲನ್ ಹಾಟ್ ಫೋಟೋ

    ಇತ್ತೀಚಿಗಿನ ಸಂದರ್ಶನದಲ್ಲಿ ಮಾತನಾಡಿರುವ 'ಮಿಷನ್ ಮಂಗಲ್' ನಾಯಕಿ 'ರಾಷ್ಟ್ರೀಯತೆ ಮತ್ತು ಸಿನಿಮಾ' ಬಗ್ಗೆ ಹೇಳಿಕೆ ನೀಡಿದ್ದಾರೆ. ''ರಾಷ್ಟ್ರೀಯತೆ ಸಿನಿಮಾದಲ್ಲಿ ಇರಲಿ ಆದರೆ, ಚಿತ್ರಮಂದಿರದಲ್ಲಿ ಅಲ್ಲ.'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    Nationalism Should Be In Cinema Not In Cinema Halls says Vidya Balan

    ಚಿತ್ರಮಂದಿರಗಳಲ್ಲಿ ಹಾಡಿಸುವ ರಾಷ್ಟ್ರಗೀತೆಗಿಂತ ಸಿನಿಮಾಗಳಲ್ಲಿ ರಾಷ್ಟ್ರೀಯತೆ ಇರಬೇಕು ಎನ್ನುವುದು ವಿದ್ಯಾ ಬಾಲನ್ ಮಾತಿನ ಅರ್ಥವಾಗಿದೆ. ''ವಿಶ್ವವನ್ನು ಸುತ್ತಿ ಬಂದರೆ, ಭಾರತೀಯರು ಹೆಮ್ಮೆ ಪಡುವ ಅನೇಕ ವಿಷಯಗಳು ನಮ್ಮಲ್ಲಿ ಇವೆ. ಇಲ್ಲಿನ ವೈವಿದ್ಯತೆ, ಪರಂಪರೆ ಹಾಗೂ ನೈಸರ್ಗಿಕ ಸೌಂದರ್ಯದಲ್ಲಿ ಭಾರತ ಶ್ರೀಮಂತವಾಗಿದೆ. ನಾವು ನಮ್ಮ ದೇಶವನ್ನು ಸಂಭ್ರಮಿಸಬೇಕು'' ಎನ್ನುವುದು ವಿದ್ಯಾ ಮಾತು.

    ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್ ಬಾಲಿವುಡ್ ನಟಿ ವಿದ್ಯಾಬಾಲನ್ ಬಳಿ ವಿಶೇಷ ಮನವಿ ಮಾಡಿದ ಯಶ್

    ವಿಜ್ಞಾನ ಮತ್ತು ಧರ್ಮ ಸಹಬಾಳ್ವೆ ನಡೆಸಬಹುದು, ಅವು ಬೇರೆ ಬೇರೆ ಆಗುವ ಅಗತ್ಯ ಇಲ್ಲ. ''ಇಂದಿನ ದಿನದಲ್ಲಿ ಧರ್ಮವನ್ನು ವ್ಯಾಖ್ಯಾನಿಸಿರುವ ರೀತಿಯಲ್ಲಿ ಸಮಸ್ಯೆ ಇದೆ. ಎಷ್ಟೋ ಜನರು ತಾವು ಧಾರ್ಮಿಕರು ಎಂದು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ನಾನು ಕೂಡ ಅದರಲ್ಲಿ ಒಬ್ಬಳು.'' ಎಂದು ವಿದ್ಯಾ ತಿಳಿಸಿದ್ದಾರೆ.

    Nationalism Should Be In Cinema Not In Cinema Halls says Vidya Balan

    ವಿದ್ಯಾ ಬಾಲನ್ ನಟನೆಯ 'ಮಿಷನ್ ಮಂಗಲ್' ಚಿತ್ರ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ತಾರ ಶಿಂಧೆ ಎಂಬ ಪಾತ್ರದಲ್ಲಿ ವಿದ್ಯಾ ಬಾಲನ್ ನಿರ್ವಹಿಸಿದ್ದಾರೆ. ಇತ್ತ ಪೂಜೆ, ದೇವರು ಹಾಗೂ ಅತ್ತ ವಿಜ್ಞಾನ, ತಂತ್ರಜ್ಙಾನ ಎರಡನ್ನು ಗೌರವಿಸುವ ಪಾತ್ರ ಇದಾಗಿದೆ.

    English summary
    Bollywood actress Vidya Balan spoke about Nationalism. She says 'Nationalism Should Be In Cinema Not In Cinema Halls'.
    Tuesday, August 20, 2019, 11:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X