twitter
    For Quick Alerts
    ALLOW NOTIFICATIONS  
    For Daily Alerts

    ಹೊತ್ತಿನ ಊಟಕ್ಕೆ ಪರದಾಡಿದ್ದ ನಟ ಈಗ ಅರಮನೆಯಂತ ಬಂಗಲೆಯ ಒಡೆಯ

    |

    ಸಿನಿಮಾ ರಂಗ ಹಲವು ಜನರ ಅದೃಷ್ಟವನ್ನು ಬದಲಾಯಿಸಿದೆ. ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿಗಳನ್ನು ಸ್ಟಾರ್ ನಟರನ್ನಾಗಿಸಿದೆ, ತಂತ್ರಜ್ಞರನ್ನಾಗಿಸಿದೆ ಚಿತ್ರರಂಗ. ಅಂಥಹಾ ನಟರಲ್ಲಿ ಒಬ್ಬರು ನವಾಜುದ್ದೀನ್ ಸಿದ್ಧಿಖಿ.

    ನವಾಜುದ್ದೀನ್ ಸಿದ್ಧಿಖಿ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಬಡತನವೇ ಹಾಸು ಹೊದ್ದಿದ್ದ ಕುಟುಂಬದ ಹಿನ್ನೆಲೆಯಿಂದ ಬಂದ ನವಾಜುದ್ದೀನ್ ಸಿದ್ಧಿಖಿ, ಹಲವು ವರ್ಷ ಚಿತ್ರರಂಗದಲ್ಲಿ ಮಣ್ಣು ಹೊತ್ತಿದ್ದಾರೆ. ಸಿನಿಮಾ ರಂಗದ ಕನಸು ಹೊತ್ತು ಮುಂಬೈಗೆ ಬಂದು ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದಿದೆ.

    ಆದರೆ ಇಂದು ನವಾಜುದ್ದೀನ್ ಸಿದ್ಧಿಖಿ ಬಾಲಿವುಡ್‌ನ ಸ್ಟಾರ್ ನಟರಲ್ಲಿ ಒಬ್ಬರು. ಅತ್ಯಂತ ಬ್ಯುಸಿಯಾಗಿರುವ ನವಾಜುದ್ದೀನ್ ಸಿದ್ಧಿಖಿ ಗಂಟೆಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ. ಮೊದಲಿಗೆ ನವಾಜುದ್ದೀನ್‌ರ ಡೇಟ್ಸ್ ಪಡೆದು ಬಳಿಕ ನಾಯಕ ನಟರ ಡೇಟ್ಸ್ ಪಡೆವಷ್ಟು ಜನಪ್ರಿಯ ಹಾಗು ಬ್ಯುಸಿ ನಟ ನವಾಜುದ್ದೀನ್.

     Nawazuddin Siddiqui Builds A Luxury House In Mumbai Bandra
    ಸಿನಿಮಾ ನಟನಾಗುವ ಕನಸು ಹೊತ್ತು 1999 ರಲ್ಲಿ ಮುಂಬೈಗೆ ಬಂದಿದ್ದ ನವಾಜುದ್ದೀನ್ ಸಣ್ಣ ಬಾಡಿಗೆ ಕೋಣೆಯಲ್ಲಿ ನಾಲ್ಕು ಜನರೊಟ್ಟಿಗೆ ವಾಸವಿದ್ದರು. ಆದರೆ ಈಗ ಅದೇ ಮುಂಬೈನಲ್ಲಿ ಶಾರುಖ್ ಖಾನ್‌ರ ಮನೆಯ ಪಕ್ಕದಲ್ಲಿ ಅರಮನೆಯಂಥ ಬೃಹತ್ ಬಂಗ್ಲೆಯೊಂದನ್ನು ತಮಗಾಗಿ ಕಟ್ಟಿಸಿಕೊಂಡಿದ್ದಾರೆ.

    ಮುಂಬೈನ ಪ್ರತಿಷ್ಠಿತ ಏರಿಯಾ ಬಾಂದ್ರಾ ವೆಸ್ಟ್‌ನಲ್ಲಿ ನವಾಜುದ್ದೀನ್ ದೊಡ್ಡ ಐಶಾರಾಮಿ ಬಂಗ್ಲೆ ಕಟ್ಟಿಸಿದ್ದು, ಈ ಬಂಗ್ಲೆಗೆ ತಮ್ಮ ತಂದೆಯ ಹೆಸರು ನವಾಬ್' ಎಂದು ನಾಮಕರಣ ಮಾಡಿದ್ದಾರೆ. ಈ ಐಶಾರಾಮಿ ಬಂಗ್ಲೆಯ ಮತ್ತೊಂದು ವಿಶೇಷತೆಯೆಂದರೆ ಈ ಬಂಗ್ಲೆಯನ್ನು ನವಾಜುದ್ದೀನ್‌ರ ಹಳ್ಳಿಯ ಮನೆಯ ಮಾದರಿಯಲ್ಲಿಯೇ ಕಟ್ಟಲಾಗಿದೆ.

    ನವಾಜುದ್ದೀನ್‌ ಜನಿಸಿದ್ದು ಉತ್ತರ ಪ್ರದೇಶ ರಾಜ್ಯದ ಬುಧಾನ ಹೆಸರಿನ ಸಣ್ಣ ಹಳ್ಳಿಯಲ್ಲಿ. ಹಳ್ಳಿಯ ತಮ್ಮ ಮನೆಯ ಮಾದರಿಯನ್ನು ಹೋಲುವ ರೀತಿಯಲ್ಲಿಯೇ ಈಗಿನ ಬಂಗ್ಲೆಯನ್ನು ನವಾಜುದ್ದೀನ್ ನಿರ್ಮಿಸಿದ್ದಾರೆ. ತಮ್ಮ ಹೊಸ ಮನೆಗೆ ತಾವೇ ಒಳಾಂಗಣ ವಿನ್ಯಾಸವನ್ನು ನವಾಜುದ್ದೀನ್ ಮಾಡಿದ್ದು ತಮ್ಮ ಅನುಕೂಲಕ್ಕೆ ಹಾಗೂ ಟೇಸ್ಟ್‌ಗೆ ತಕ್ಕಂತೆ ಮನೆಯನ್ನು ವಿನ್ಯಾಸ ಮಾಡಿಕೊಂಡಿದ್ದಾರೆ.

    ಬಾಂದ್ರಾನಲ್ಲಿ ಒಂದು ಚದರ ಅಡಿ ಭೂಮಿಗೆ 73,000 ರುಪಾಯಿ ಬೆಲೆ ಇದೆ. ಅದೂ ಕಾಗದದ ಮೇಲೆ (ಕಾಗದದ ಹೊರಗಿನ ಬೆಲೆ ಇನ್ನೂ ಹೆಚ್ಚು). ಬಾಂದ್ರಾನಲ್ಲಿ 30 ‍X 40 ಸೈಟು ಖರೀದಿಸಲು 8 ಕೋಟಿ ಹಣ ನೀಡಬೇಕಾಗುತ್ತದೆ. ಇಂಥಹಾ ದುಬಾರಿ ಏರಿಯಾದಲ್ಲಿ ದೊಡ್ಡ ಸೈಟು ಖರೀದಿಸಿ ಬಂಗ್ಲೆ ನಿರ್ಮಿಸಿದ್ದಾರೆ ನವಾಜುದ್ದೀನ್. ಈ ಐಶಾರಾಮಿ ಮನೆ ನಿರ್ಮಾಣಕ್ಕೆ ಬರೋಬ್ಬರಿ ಮೂರು ವರ್ಷ ಹಿಡಿದಿದೆ.

    English summary
    Bollywood actor Nawazuddin Siddiqui builds a luxury house in Mumbai Bandra. He named is house on his father's name Nawab.
    Saturday, January 29, 2022, 15:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X